ಮದುವೆ ಆಗಬೇಕಿದ್ದ ಪ್ರೇಮಿಗಳು ಜಮೀನಿನಲ್ಲೇ ವಿಷ ಕುಡಿದರು! ಆತ್ಮಹತ್ಯೆಗೆ ಅದೇ ಕಾರಣವಾಯ್ತ?

suicide
Published on

ರಾಯಚೂರು: ಸಿರವಾರ ತಾಲೂಕಿನ ಮಲ್ಲಟ ಗ್ರಾಮದ ಜಮೀನೊಂದರಲ್ಲಿ ಯುವಕ-ಯುವತಿ ‌ವಿಷ ಸೇವಿಸಿ ದುರಂತ ಅಂತ್ಯಕಂಡಿದ್ದಾರೆ.

ಗ್ರಾಮದ ಮಹೇಶ್(20) ಮತ್ತು ಅಕ್ಷತಾ(18) ಮೃತರು. ಇವರಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿಡುವ ಕನಸನ್ನೂ ಕಟ್ಟಿಕೊಂಡಿದ್ದರು. ಆದರೆ ಇವರಿಬ್ಬರೂ ‌ಆತ್ಮಹತ್ಯೆಗೆ ಶರಣಾಗಿದ್ದು, ಸಾವಿನಲ್ಲೂ ಒಂದಾಗಿದ್ದಾರೆ.

ಮಹೇಶ್ ಮತ್ತು ಅಕ್ಷತಾ ಪ್ರೀತಿಗೆ ಜಾತಿ ಅಡ್ಡವಾಗಿತ್ತು ಎಂದು ಹೇಳಲಾಗಿದೆ. ಜಾತಿ ನೆಪದಲ್ಲಿ ಮದುವೆ ಆಗಲು ಪಾಲಕರು ಒಪ್ಪುವುದಿಲ್ಲ ಎಂದು ನೊಂದ ಜೋಡಿ ಒಟ್ಟಿಗೆ ಸಾಯುವ ನಿರ್ಧಾರ ಮಾಡಿ ವಿಷ ಸೇವಿಸಿದ್ದಾರೆ ಎನ್ನಲಾಗಿದೆ. ಶವದ ಪಕ್ಕದಲ್ಲೇ ವಿಷದ ಬಾಟಲಿ, ಮೊಬೈಲ್​, ಪ್ಲಾಸ್ಟಿಕ್​ ಲೋಟ ಕೂಡ ಇದೆ.

ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಸಿರವಾರ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net