

ನವದೆಹಲಿ: ದೆಹಲಿ ಮೆಟ್ರೋದಲ್ಲಿ ಈ ಪ್ರೇಮಿಗಳು ತಬ್ಬಿಕೊಂಡು, ಚುಂಬಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಬಗ್ಗೆ ಅನೇಕ ನೆಟ್ಟಿಗರು ಸಿಟ್ಟಾಗಿದ್ದಾರೆ.
ಈ ವಿಡಿಯೋ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ಬಂದಿದ್ದರೂ ಅನೇಕರು ಸಾರ್ವಜನಿಕವಾಗಿ ಪ್ರೀತಿಯ ಪ್ರದರ್ಶನ ಮಾಡಿದ್ದಕ್ಕಾಗಿ ಟೀಕಿಸಿದ್ದಾರೆ. ಇನ್ನೂ ಕೆಲವರು ಆ ಜೋಡಿಯ ಒಪ್ಪಿಗೆಯಿಲ್ಲದೆ ವಿಡಿಯೋ ಮಾಡಿ ಪ್ರಸಾರ ಮಾಡಿದ್ದ ವ್ಯಕ್ತಿಗಳನ್ನು ಟೀಕಿಸಿದ್ದಾರೆ.
ಹೀಗೆ ಸಾರ್ವಜನಿಕವಾಗಿ ಚುಂಬನ ಆಲಿಂಗನದ ಪ್ರದರ್ಶನಗಳ ಚರ್ಚೆಯು ವರ್ಷಗಳಿಂದ ಭಾರತದಲ್ಲಿ ನಡೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ, ದೆಹಲಿ ಮೆಟ್ರೋದ ಹಲವಾರು ವಿಡಿಯೋಗಳು ಮುನ್ನೆಲೆಗೆ ಬಂದಿವೆ. ಇತ್ತೀಚೆಗೆ ರಿದಮ್ ಚನಾನ ಎನ್ನುವ ಯುವತಿ ಆಕ್ಷೇಪಾರ್ಹ ತುಂಡುಡುಗೆ ಧರಿಸಿದ್ದ ವಿಡಿಯೋ ವೈರಲ್ ಆಗಿತ್ತು. ಅದಲ್ಲದೇ ಆಕೆಯ ಉಡುಪಿನ ಆಯ್ಕೆಯು ಟೀಕೆ ಮತ್ತು ಪ್ರತಿ-ಟೀಕೆಗಳು ನೆಟ್ಟಿಗರ ಗಮನ ಸೆಳೆದಿತ್ತು.