

ವಿಜಯವಾಣಿ ಸುದ್ದಿಜಾಲ ಬೆಂಗಳೂರು
"ಲವ್ ಮಾಕ್ಟೇಲ್' ಸರಣಿಯಲ್ಲಿ "ಹೆಂಗೆ ನಾವು..?' ಎಂದು ಡೈಲಾಗ್ ಹೊಡೆಯುತ್ತಾ, ಪ್ರೇಕ್ಷಕರಿಂದ "ನೀವು ಸೂಪರ್ ಬಿಡಿ' ಅಂತನಿಸಿಕೊಂಡ ಹುಡುಗಿ ರಚನಾ ಇಂದರ್. ನಂತರ ಶಶಾಂಕ್ ನಿರ್ದೇಶನದ "ಲವ್ 360' ಚಿತ್ರದ ಮೂಲಕ ನಾಯಕ ಪ್ರವಿಣ್ ಜತೆ ನಾಯಕಿಯಾಗಿ ಡೆಬ್ಯೂ ಮಾಡಿದ ರಚನಾ ಸದ್ಯ ಮೂರ್ನಾಲ್ಕು ಸಿನಿಮಾಗಳಲ್ಲಿ ಬಿಜಿಯಿದ್ದಾರೆ. "ನಾಲ್ಕನೇ ಆಯಾಮ', "4 ಎನ್ 6' ಮತ್ತು "ನಾಟ್ಔಟ್' ಸಿನಿಮಾಗಳ ಜತೆ "ನಾನು ಮತ್ತು ಗುಂಡ 2' ಚಿತ್ರದಲ್ಲೂ ರಚನಾ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಆಗ ಡಿಸ್ಟರ್ಬ್ ಆಗಿದ್ದೆ
ಈಗಾಗಲೇ ರಚನಾ ಇಂದರ್ "ನಾಲ್ಕನೇ ಆಯಾಮ', "4 ಎನ್ 6' ಮತ್ತು "ನಾಟ್ಔಟ್' ಚಿತ್ರಗಳ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ. "4 ಎನ್ 6' ಚಿತ್ರದ ಶೂಟಿಂಗ್ ಅನುಭವ ಹಂಚಿಕೊಂಡ ಅವರು, "ಚಿತ್ರೀಕರಣದ ಸಮಯದಲ್ಲಿ ಮಾನಸಿಕವಾಗಿ ಡಿಸ್ಟರ್ಬ್ ಆಗಿದ್ದೆ. ಏಕೆಂದರೆ ಅದೊಂದು ಥ್ರಿಲ್ಲರ್ ಆ್ಯಕ್ಷನ್ ಚಿತ್ರವಾಗಿದ್ದು ಫೋರೆನ್ಸಿಕ್ ಡಿಟೆಕ್ಟಿವ್ ಪಾತ್ರದಲ್ಲಿ ನಾನು ನಟಿಸಿದ್ದೇನೆ. ಕರಿಯರ್ ಪ್ರಾರಂಭದಲ್ಲೇ ಈ ರೀತಿಯ ಪಾತ್ರ ಸಿಕ್ಕ ಖುಷಿಯಿದೆ' ಎಂದು ಹೇಳಿಕೊಳ್ಳುತ್ತಾರೆ.
ಲ್ಯಾಬ್ರಡಾರ್ ಜತೆ ಇಂದು
ಶಿವರಾಜ್ ಕೆಆರ್ ಪೇಟೆ ನಾಯಕನಾಗಿದ್ದ ಶ್ರೀನಿವಾಸ್ ತಿಮ್ಮಯ್ಯ ನಿರ್ದೇಶಿಸಿದ್ದ "ನಾನು ಮತ್ತು ಗುಂಡ' 2020ರಲ್ಲಿ ಬಿಡುಗಡೆಯಾಗಿತ್ತು. ಇದೀಗ ರು ಹಾಸನ್, ಆ ಚಿತ್ರದ ಸೀಕ್ವಲ್ಗೆ ಆ್ಯಕ್ಷನ್&ಕಟ್ ಹೇಳುತ್ತಿದ್ದು, ರಾಕೇಶ್ ಅಡಿಗ ನಾಯಕನಾಗಿದ್ದಾರೆ. ಅವರಿಗೆ ನಾಯಕಿಯಾಗಿ ರಚನಾ ನಟಿಸುತ್ತಿದ್ದಾರೆ. ಚಿತ್ರದ ಬಗ್ಗೆ ಅವರು, ""ನಾನು ಮತ್ತು ಗುಂಡ 2' ಚಿತ್ರದ ನನ್ನ ಭಾಗದ ಶೂಟಿಂಗ್ ಪೂರ್ಣಗೊಂಡಿದೆ. ಪ್ಯಾಚ್ ವರ್ಕ್ ಇರಬಹುದು. ನಾಯಿ ಜತೆ ಜರ್ನಿಯಾಗುವ ಪಾತ್ರ. ನಾವು ಮನೆಯಲ್ಲಿ ಜೂಯಸ್ ಎಂಬ ಜರ್ಮನ್ ಶೆರ್ಡ್ ಸಾಕಿದ್ದೇವೆ. ಹೀಗಾಗಿ ಶ್ವಾನಗಳೆಂದರೆ ನನಗೆ ಭಯವಿಲ್ಲ. ಇನ್ನು ಲ್ಯಾಬ್ರಡಾರ್ ಫ್ರೆಂಡ್ಲಿ ತಳಿಯಾದ ಕಾರಣ ಶೂಟಿಂಗ್ ಸಮಯದಲ್ಲಿ ಗೊಂಬೆಯ ಜತೆ ಆಟವಾಡುವಂತೆ ಇರುತ್ತಿತ್ತು. ಒಮ್ಮೆ ಮಾತ್ರ ಡಾಬರ್ಮ್ಯಾನ್ ಶ್ವಾನ ಕೆಲವರ ಮೇಲೆ ದಾಳಿ ಮಾಡುವ ಸನ್ನಿವೇಶದ ಶೂಟಿಂಗ್ ವೇಳೆ ಸ್ವಲ್ಪ ಭಯವಾಗಿತ್ತಷ್ಟೇ' ಎಂದು ಅನುಭವ ಹಂಚಿಕೊಳ್ಳುತ್ತಾರೆ.
ಪರಭಾಷೆಗೆ ಹೋಗುವೆ, ಆದರೆ…
ಕನ್ನಡದ ಹಲವು ಪ್ರತಿಭಾನ್ವಿತ ನಟ, ನಟಿಯರು ಪರಭಾಷೆಗಳಿಗೆ ಹೋಗುತ್ತಿದ್ದು, ಒಟಿಟಿ ವೆಬ್ಸರಣಿಗಳಲ್ಲೂ ನಟಿಸುತ್ತಿದ್ದಾರೆ. ಹಾಗಂತ ಇದುವರೆಗೂ ರಚನಾಗೆ ಪರಭಾಷೆಗಳಿಂದ ಅವಕಾಶಗಳು ಬಂದಿಲ್ಲ ಅಂತಲ್ಲ. "ತೆಲುಗು, ತಮಿಳು ಹಾಗೂ ಮರಾಠಿ ಚಿತ್ರರಂಗಗಳಿಂದ ಕೆಲ ಆರ್ಸ್ ಬಂದಿವೆ. ಆದರೆ, "ಲವ್ ಮಾಕ್ಟೇಲ್' ನನಗೆ ಕನ್ನಡ ಚಿತ್ರರಂಗದಲ್ಲಿ ಒಂದೊಳ್ಳೆ ವೇದಿಕೆ ನೀಡಿತ್ತು. ಅದೇ ರೀತಿಯ ಉತ್ತಮ ಪಾತ್ರ, ತಂಡ ಸಿಕ್ಕರೆ ಹೋಗುತ್ತೇನೆ. ಇಲ್ಲದಿದ್ದರೂ ನೋ ಪ್ರಾಬ್ಲಂ. ಕನ್ನಡ ನನ್ನ ಭಾಷೆ, ಇಲ್ಲೇ ಉತ್ತಮ ಅವಕಾಶಗಳು ದೊರೆಯುತ್ತಿವೆ. ಕೆಲವು ಕನ್ನಡ ಸಿನಿಮಾಗಳ ಮಾತುಕತೆ ನಡೆಯುತ್ತಿದೆ. ಲೋಕಸಭಾ ಚುನಾವಣೆಯ ಬಳಿಕ ಘೋಷಣೆಯಾಗುವ ನಿರೀೆಯಿದೆ. ಜತೆಗೆ ಈ ವರ್ಷವಷ್ಟೇ ಎಂಬಿಎ ಪೂರ್ಣಗೊಳಿಸಿದ್ದು, ನಟನೆಯ ಜತೆ ಉನ್ನತ ವ್ಯಾಸಂಗ ಮಾಡಲಿದ್ದೇನೆ' ಎನ್ನುತ್ತಾರೆ ರಚನಾ.