ಲವ್‌ಜಿಹಾದ್ ವಿರುದ್ದ ಪ್ರತಿಭಟನೆಗೆ ಅನುಮತಿ ನಿರಾಕರಣೆ : ಹಿಂದು ಮಹಿಳಾ ಸುರಕ್ಷಾ ಸಮಿತಿ ಖಂಡನೆ

INDIA-RELIGION-SOCIAL-ISSUES
An Indian Hindu holds a placard as she takes part in a rally against 'Love Jihad', in Ahmedabad on July 22, 2018. - 'Love Jihad' is a term used to describe alleged campaigns under which Muslim men target women belonging to non-Muslim communities for conversion to Islam by feigning love. (Photo by SAM PANTHAKY / AFP) (Photo credit should read SAM PANTHAKY/AFP/Getty Images)
Published on



ಮಂಗಳೂರು : ಮತಾಂತರ, ಲವ್‌ಜಿಹಾದ್, ಭಯೋತ್ಪಾದನೆ, ಡ್ರಗ್ ಮಾಫಿಯಾ ವಿರುದ್ಧ ನಗರದ ತಾಲೂಕು ಕಚೇರಿ ಎದುರು ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆಗೆ ಮಂಗಳೂರು ನಗರ ಪೊಲೀಸ್ ಆಯುಕ್ತರು ಅನುಮತಿ ನಿರಾಕರಿಸಿದ್ದಾರೆ. ತನ್ಮೂಲಕ
ಸಂವಿಧಾನದಲ್ಲಿ ಅಡಕವಾಗಿರುವ ನಾಗರಿಕ ಹಕ್ಕನ್ನು ಕಸಿದುಕೊಂಡಿದ್ದಾರೆ ಎಂದು ಮಂಗಳೂರಿನ ಹಿಂದು ಮಹಿಳಾ ಸುರಕ್ಷಾ ಸಮಿತಿ ಆರೋಪಿಸಿದೆ.
ವಿಶ್ವ ಹಿಂದು ಪರಿಷತ್ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪ್ರಮುಖರಾದ ಶ್ರೀಲಕ್ಷ್ಮಿ ಮಠದಮೂಲೆ ಮಾತನಾಡಿ ‘ ಲವ್ ಜಿಹಾದ್ ವಿರುದ್ಧ ಹಿಂದೂ ಸಮಾಜವನ್ನು ಜಾಗೃತಗೊಳಿಸುವ ಉದ್ದೇಶಕ್ಕಾಗಿ ಪ್ರತಿಭಟನೆ ಆಯೋಜಿಸಲಾಗಿತ್ತು. ಪೊಲೀಸರ ಅಥವಾ ಸರ್ಕಾರದ ವಿರುದ್ಧ ನಮ್ಮ ಪ್ರತಿಭಟನೆ ಆಗಿರಲಿಲ್ಲ. ಪ್ರತಿಭಟನೆಗೆ ಅವಕಾಶ ನೀಡದಿರುವ ಪೊಲೀಸ್ ಆಯುಕ್ತರ
ನಿರ್ಧಾರದ ಹಿಂದೆ ಪ್ರಭಾವಿಗಳ ಒತ್ತಡ ಇರುವುದು ಭಾಸವಾಗುತ್ತಿದೆ ಎಂದರು.
ಸಮಿತಿ ಪ್ರಮುಖರಾದ ರೂಪಾ ಬಂಗೇರ ಮಾತನಾಡಿ, ಮಹಿಳೆಯರ ರಕ್ಷಣೆ, ಜಾಗೃತಿ ಕುರಿತು ಪ್ರತಿಭಟನೆ ನಡೆಸುವ ಹಕ್ಕು ಇಲ್ಲ ಎಂದಾದರೆ, ಮಹಿಳೆಯರ ಸುರಕ್ಷತೆಯನ್ನು ಗಮನಿಸುವ ಜವಾಬ್ದಾರಿ ಪೊಲೀಸ್ ಇಲಾಖೆಗೆ ಇಲ್ಲವೇ? ಎಂದು ಪ್ರಶ್ನಿಸಿದರು.ಮತಾಂತರ, ಲವ್ ಜಿಹಾದ್‌ಗಳಿಗೆ ಸರ್ಕಾರ ಕಡಿವಾಣ ಹಾಕಬೇಕು. ಪ್ರತಿಭಟನೆಯ ಹಕ್ಕನ್ನು ದಮನಿಸುವ ಪೊಲೀಸರ ಕ್ರಮವನ್ನು ನಾವು ಸಹಿಸುವುದಿಲ್ಲ.ಈ ನಿರ್ಧಾರದ ಹಿಂದೆ ರಾಜ್ಯ ಸರ್ಕಾರದ ಓಟ್ ಬ್ಯಾಂಕ್ ರಾಜಕೀಯ ಅಡಗಿದೆ ಎಂದರು.
ವಕೀಲ ಹರೀಶ್ ಕುಮಾರ್ ಮಾತನಾಡಿ, ಪ್ರತಿಭಟನೆಗೆ ಅನುಮತಿ ನೀಡಲು ಅರ್ಜಿ ಸಲ್ಲಿಸಿದಾಗ ಅರ್ಜಿ ಸ್ವೀಕರಿಸಲೂ ಮಂಗಳೂರು ನಗರ ಪೊಲೀಸ್ ಆಯುಕ್ತರು ನಿರಾಕರಿಸಿದ್ದಾರೆ. ನಾನು ಅನುಮತಿ ನೀಡುವುದಿಲ್ಲ, ನೀವು ಏನು ಬೇಕಾದರೂ ಮಾಡಿ ಎಂಬ ಉತ್ತರ ನೀಡಿದ್ದಾರೆ. ಪೊಲೀಸ್ ಇಲಾಖೆ ರಾಜ್ಯ ಸರ್ಕಾರದ ಏಜೆನ್ಸಿಯಂತೆ ನಡೆದುಕೊಳ್ಳುತ್ತಿದೆ. ಲವ್ ಜಿಹಾದ್, ಮತಾಂತರ ಇಲ್ಲ ಎಂದು ಹೇಳುವ ಪೊಲೀಸ್ ಅಧಿಕಾರಿಗಳು, ಮುಂದೆ ಭಯೋತ್ಪಾದನೆಯೂ ಇಲ್ಲ ಎನ್ನಬಹುದು. ಪ್ರಸ್ತುತ ಪ್ರತಿಭಟನೆಯನ್ನು ಮುಂದೂಡಿದ್ದು, ಮುಂದೆ ಬೃಹತ್ ಹೋರಾಟ ನಡೆಸಲಾಗುವುದು ಎಂದರು. ಪ್ರಮುಖರಾದ ಶ್ವೇತಾ ಆದ್ಯಪಾಡಿ, ಸುಕನ್ಯಾ ರಾವ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net