ಭಗವಾನ್ ರಾಮ ಕೇವಲ ಹಿಂದೂಗಳಿಗೆ ಮಾತ್ರವಲ್ಲ, ಎಲ್ಲರಿಗೂ ದೇವರಾಗಿದ್ದಾನೆ: ಫಾರೂಕ್ ಅಬ್ದುಲ್ಲಾ

Farooq Abdullah
Published on

ಜಮ್ಮು ಮತ್ತು ಕಾಶ್ಮೀರ: ಭಗವಾನ್ ರಾಮ ಕೇವಲ ಹಿಂದೂಗಳಿಗೆ ಮಾತ್ರವಲ್ಲ ಪ್ರತಿಯೊಬ್ಬರಿಗೂ ದೇವರಾಗಿದ್ದಾನೆ.  ಪಕ್ಷವು ಅಧಿಕಾರದಲ್ಲಿ ಉಳಿಯಲು ರಾಮನ ಹೆಸರನ್ನು ಮಾತ್ರ ಬಳಸುತ್ತದೆ ಎಂದು ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಹೇಳಿದರು.

ರಾಜಕೀಯ ಸಮಾವೇಶದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, "ರಾಮನ ಭಕ್ತರು ಎಂದು ನಿಮ್ಮ ಬಳಿಗೆ ಬರುವವರಿಗೆ ರಾಮನ ಮೇಲೆ ಪ್ರೀತಿ ಇರಲ್ಲ. ಆದರೆ ಅಧಿಕಾರದ ಮೇಲೆ ಇರುತ್ತದೆ. ಕೆಲವು ಪಕ್ಷವು ಅಧಿಕಾರದಲ್ಲಿ ಉಳಿಯರಲು ರಾಮನ ಹೆಸರನ್ನು ಬಳಸುತ್ತಿದೆ. ರಾಮ ಎಲ್ಲರ ದೇವರಾಗಿದ್ದಾನೆ. ಕೇವಲ ಹಿಂದೂಗಳಿಗೆ ಮಾತ್ರ ಸೀಮಿತವಾಗಿಲ್ಲ"ವೆಂದು ಹೇಳಿದ್ದಾರೆ.

ರಾಮ ಕೇವಲ ಹಿಂದೂಗಳಿಗೆ ಮಾತ್ರ ದೇವರು ಎಂಬ ಕಲ್ಪನೆಯನ್ನು ನಿಮ್ಮ ಮನಸ್ಸಿನಿಂದ ಕಿತ್ತು ಹಾಕಿ. ಭಗವಂತ ರಾಮ ಪ್ರತಿಯೊಬ್ಬನಿಗೂ ದೇವರು. ಅದು ಮುಸ್ಲಿಂ ಆಗಿರಲಿ ಅಥವಾ ಕಿಶ್ಚಿಯನ್ ಆಗಿರಲಿ, ಅಮೆರಿಕನ್ ಅಥವಾ ರಷ್ಯನ್ ಆಗಿರಲಿ. ಬಿಜೆಪಿ ನಾಯಕರಿಗೆ ‘ನೀವು ದಯವಿಟ್ಟು ಜನರ ನಡುವೆ ಹೋಗಿ ದ್ವೇಷದ ಪ್ರಚಾರವನ್ನು ಮಾಡುವುದನ್ನು ನಿಲ್ಲಿಸಬೇಕು’ ಎಂದು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net