ಬೆಂಗಳೂರು: ಸ್ಯಾಂಡಲ್ವುಡ್ ನಟ, ನಿರ್ದೇಶಕ ರಾಜ್ ಬಿ.ಶೆಟ್ಟಿ (Raj B Shetty) ನಟನೆಯ ಬಹುನಿರೀಕ್ಷಿತ ಟೋಬಿ (Toby) ಚಿತ್ರದ ಫಸ್ಟ್ ಲುಕ್ ಟೀಸರ್ ಇಂದು ಅನಾವರಣಗೊಂಡಿದೆ.

ಇದನ್ನೂ ಓದಿ: ಯತ್ನಾಳ್, ರೇಣುಕಾಚಾರ್ಯಗೆ ಬಿಜೆಪಿ ಶಿಸ್ತು ಸಮಿತಿ ನೋಟಿಸ್
ಬೆಂಗಳೂರಿನ ಲುಲು ಮಾಲ್ನಲ್ಲಿ ಟೋಬಿ ಚಿತ್ರದ ಫಸ್ಟ್ ಲುಕ್ ಅನ್ನು ನಟ ರಾಜ್ ಬಿ.ಶೆಟ್ಟಿ ಮತ್ತು ಚಿತ್ರತಂಡ ಇಂದು ಅಧಿಕೃತವಾಗಿ ಬಿಡುಗಡೆಗೊಳಿಸಿದೆ. ಸಿನಿಮಾ ನಿರ್ದೇಶಕರಾದ ಟಿ.ಕೆ ದಯಾನಂದ್, ನಟಿ ಸಂಯುಕ್ತ ಹೊರನಾಡು, ಚೈತ್ರಾ ಆಚಾರ್ ಸೇರಿದಂತೆ ಮುಂತಾದ ಕಲಾವಿದರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಕನ್ನಡ ಚಿತ್ರರಂಗದಲ್ಲಿ ಬಿಡುಗಡೆಗೂ ಮುನ್ನವೇ ಭಾರಿ ಸದ್ದು ಮಾಡುತ್ತಿರುವ ರಾಜ್ ಬಿ.ಶೆಟ್ಟಿ ಅಭಿನಯದ ಟೋಬಿ, ಸಿನಿಪ್ರೇಕ್ಷಕರಲ್ಲಿ ಮತ್ತು ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲವನ್ನು (Curiosity) ಕೆರಳಿಸಿದೆ. ಚಿತ್ರದ ಫಸ್ಟ್ ಲುಕ್ ಟೀಸರ್ನಲ್ಲಿ ಟಗರು ಮತ್ತು ರಾಜ್ ಮುಖವನ್ನು ವಿಭಿನ್ನವಾಗಿ ತೋರಿಸಲಾಗಿದೆ. ಈ ಸಿನಿಮಾದಲ್ಲಿ ನಟ ರಾಜ್ ಬಿ.ಶೆಟ್ಟಿ ಅವರ ಪಾತ್ರ ಆಳವಾದ ಕಥೆಯನ್ನು ಹೇಳಲು ಹೊರಟಿದೆ ಎಂಬುದು ಪೋಸ್ಟರ್ಗಳ ಮುಖೇನ ಸ್ಪಷ್ಟವಾಗುತ್ತಿದೆ.
ಚಿತ್ರದ ಫಸ್ಟ್ ಲುಕ್ ಬಿಡುಗಡೆಗೊಳಿಸಿ ಮಾತನಾಡಿದ ನಟ ರಾಜ್ ಬಿ.ಶೆಟ್ಟಿ, ಟೋಬಿಯ ಫಸ್ಟ್ ಲುಕ್ ಇಡೀ ಸಿನಿಮಾದಲ್ಲಿ ಇರುವುದಿಲ್ಲ. ಚಿತ್ರದಲ್ಲಿ ಬರುವ ಪ್ರಮುಖ ಘಟ್ಟದಲ್ಲಿ ಇದು ಬರತ್ತದೆ. ಈ ಚಿತ್ರ ಮಾಸ್ ಅಂಡ್ ಎವಲ್ಯುಷನ್ ಕಂಟೆಂಟ್ ಆಗಿದೆ ಎಂದು ಹೇಳಿದರು.
ಇದನ್ನೂ ಓದಿ: ಅಪ್ರಾಪ್ತ ವಯಸ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಹಿರಿಯ ನಾಗರಿಕ; ಕೃತ್ಯ ಚಿತ್ರೀಕರಿಸಿದ ಮಗ
ಲೈಟರ್ ಬುದ್ಧ ಪ್ರೊಡಕ್ಷನ್ ಬ್ಯಾನರ್ ಅಡಿ ನಿರ್ಮಾಣವಾಗಿರುವ ಟೋಬಿ ಚಿತ್ರ ಇದೇ ಆಗಸ್ಟ್ 25 ರಂದು ಅದ್ದೂರಿಯಾಗಿ ತೆರೆಗೆ ಅಪ್ಪಳಿಸಲು ಸಜ್ಜಾಗಿದೆ. ಚಿತ್ರಕ್ಕೆ ಮಿಥುನ್ ಅವರ ಸಂಗೀತವಿದ್ದು, ಪ್ರವೀಣ್ ಅವರ ಕ್ಯಾಮೆರಾ ಕೈಚಳಕವಿದೆ.
ಜುಲೈ 13-14ರಂದು ಬೆಂಗಳೂರಿನಲ್ಲಿ ವಿಪಕ್ಷಗಳ ಎರಡನೇ ಸಭೆ; ಮಲ್ಲಿಕಾರ್ಜುನ ಖರ್ಗೆ ನೇತೃತ್ವ: ಶರದ್ ಪವಾರ್