ಇದೇ ನೋಡಿ ವಿಶ್ವದಲ್ಲಿ ಅತಿ ಹೆಚ್ಚು ವಿದ್ಯುತ್​ ಉತ್ಪಾದನೆ ಮಾಡುತ್ತಿರುವ ದೇಶ| electricity

electricity
Published on

electricity| ಅಮೆರಿಕ, ಯುರೋಪ್ ಮತ್ತು ಭಾರತ ಸೇರಿದ ದೇಶಗಳ ಒಟ್ಟು ಉತ್ಪಾದನೆಯೊಂದಿಗೆ ಹೋಲಿಕೆ ಮಾಡಿದರೆ, ಚೀನಾ ಬಹಳ ಮುಂದೆ ಹೋಗುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ.

ಏಕೆಂದರೆ ವಿಶ್ವದಲ್ಲಿಯೇ ಅತಿ ಹೆಚ್ಚು ವಿದ್ಯುತ್ ಉತ್ಪಾದನೆ ಮಾಡುವ ದೇಶವಾಗಿ ಚೀನಾ ಹೊರಹೊಮ್ಮಿದೆ. ಈ ದೇಶ ಪ್ರಪಂಚದ ಒಟ್ಟು ವಿದ್ಯುತ್ ಉತ್ಪಾದನೆಯಲ್ಲಿನ ಬಹುಭಾಗವನ್ನು ತನ್ನ ಕೈಸೇರಿಸಿಕೊಂಡಿದೆ. ಅಂತಾರಾಷ್ಟ್ರೀಯ ಇಂಧನ ಸಂಸ್ಥೆ ನೀಡಿರುವ ಅಂಕಿಅಂಶಗಳ ಆಧಾರದ ಪ್ರಕಾರ, ಚೀನಾ ಪ್ರತಿವರ್ಷ ಸುಮಾರು 8,700 ಟೆರಾವಾಟ್ ಘಂಟೆ (TWh) ವಿದ್ಯುತ್‌ನ್ನು ಉತ್ಪಾದಿಸುತ್ತಿದೆ.

ಚೀನಾ, ಅಮೇರಿಕಾ, ಭಾರತ, ರಷ್ಯಾ, ಜಪಾನ್, ಬ್ರೆಜಿಲ್, ಕೆನಡಾ, ದಕ್ಷಿಣ ಕೊರಿಯಾ, ಜರ್ಮನಿ ದೇಶಗಳು ವಿದ್ಯುತ್​ ಉತ್ಪಾದನೆಯಲ್ಲಿ ಮುಂದೆ ಸಾಗುತ್ತಿವೆ. ವಿದ್ಯುತ್ ಉತ್ಪಾದನೆಯು ದೇಶದ ಆರ್ಥಿಕ ಹಾಗೂ ತಾಂತ್ರಿಕ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಉದ್ಯಮ, ತಂತ್ರಜ್ಞಾನ, ನೀರು ಪೂರೈಕೆ ಹಾಗೂ ಸಾರಿಗೆಯಂತಹ ಇನ್ನೂ ಅನೇಕ ಸಂದರ್ಭದಲ್ಲಿಯೇ, ಚೀನಾ ಈ ಜಗತ್ತಿನಲ್ಲಿ ಅತಿ ಹೆಚ್ಚು ವಿದ್ಯುತ್ ಉತ್ಪಾದನೆ ಮಾಡುತ್ತಿದೆ.

(ಏಜೆನ್ಸೀಸ್)

ಇದ್ದಿಲಿನಿಂದ ಹೆಚ್ಚಾಗಿ ಚೀನಾ ವಿದ್ಯುತ್ ಉತ್ಪಾದನೆಯ ಮಟ್ಟವನ್ನು ಹೆಚ್ಚಿಸಿದೆ. ಆದರೆ ಇತ್ತೀಚೆಗೆ ನವೀಕರಿಸಬಹುದಾದ ಇಂಧನಮೂಲಗಳ ಕಡೆಗೆ ಚೀನಾ ಗಮನಹರಿಸುತ್ತಿದೆ. ಸೌರಶಕ್ತಿ, ವಿಂಡ್ಲಾರ್ಮ್ ಹಾಗೂ ಹೈಡೋ ವಿದ್ಯುತ್ ಯೋಜನೆಗಳೂ ಸಾಕಷ್ಟು ಪ್ರಮಾಣದಲ್ಲಿ ಬೆಳೆಯುತ್ತಿವೆ. ಜಗತ್ತಿನ ಅತಿ ದೊಡ್ಡ ಹೈಡೋ ಡ್ಯಾಂ 'ಥೀ ಜಾರ್ಜಸ್‌ ಡ್ಯಾಂ' ಕೂಡ ಚೀನಾದದಲ್ಲಿ ಇದೆ. ಅಮೆರಿಕ ಹಾಗೂ ಭಾರತದ ಹಾಗೇ ಚೀನಾ ಕೂಡ ವಿದ್ಯುತ್​ ಉತ್ಪಾದನೆಯ ಕಡೆ ಹೆಚ್ಚಾಗಿ ಗಮನಹರಿಸುತ್ತಿದ್ದು, ವಿದ್ಯುತ್​ ಉತ್ಪಾದನೆಯಲ್ಲಿ ಬೇರೆ ರಾಷ್ಟ್ರಗಳಿಗಿಂತ ವೇಗ ಗತಿಯಲ್ಲಿ ಮುಂದೆ ಸಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net