

ಹಾಜರಾತಿ ಪುಸ್ತಕ, ಚಲನವಲನ ದಾಖಲಾತಿ, ಹಣದ ಮಾಹಿತಿ ಪುಸ್ತಕ ಸೇರಿ ವಿವಿಧ ದಾಖಲೆಗಳನ್ನು ಸರಿಯಾಗಿ ನಿರ್ವಹಣೆ ಮಾಡಬೇಕು. ಅರ್ಜಿಗಳನ್ನು ಸ್ವೀಕರಿಸಬೇಕು ಮತ್ತು ಸರಿಯಾದ ಮಾಹಿತಿ ನೀಡಬೇಕು. ಕಡತಗಳ ವಿಲೇವಾರಿ ತಡ ಮಾಡುವುದೂ ಲಂಚದ ಬೇಡಿಕೆಯಾಗುತ್ತದೆ. ಲೆಕ್ಕ ಬಡ್ತಿಗೆ, ಕಾಟಾಚಾರದ ಸಭೆ ನಡೆಸದೆ ಸ್ಥಳದಲ್ಲೇ ಸಮಸ್ಯೆ ಬಗೆಹರಿಸಬೇಕು ಎಂದು ಲೋಕಾಯುಕ್ತ ಪ್ರಭಾರ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಹೇಳಿದರು.
ತಾಲೂಕು ಕಚೇರಿ ಸಭಾಂಗಣದಲ್ಲಿ ಮಂಗಳೂರು ವಿಭಾಗ ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರ ವತಿಯಿಂದ ಸಾರ್ವಜನಿಕ ಅಹವಾಲು ಹಾಗೂ ಕುಂದುಕೊರತೆ ಸ್ವೀಕಾರ ಸಭೆಯಲ್ಲಿ ಮಾತನಾಡಿದರು.
ಕಸ ಸರಿಯಾದ ರೀತಿ ವಿಲೇವಾರಿಯಾಗದ ಬಗ್ಗೆ ದೂರು ನೀಡಲು ಅವಕಾಶವಿದೆ. ಸಮಸ್ಯೆಗೆ ಪರಿಹಾರ ಸೂಚಿಸುವ ನಿಟ್ಟಿನಲ್ಲಿ ತಾಲೂಕುಮಟ್ಟದ ಅಽಕಾರಿಗಳೇ ಸಭೆಯಲ್ಲಿ ಹಾಜರಿರಬೇಕು. ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಲೋಕಾಯುಕ್ತ ಮಾಹಿತಿ -ಲಕ ಅಳವಡಿಸಬೇಕು. ಇದನ್ನು ಅಳವಡಿಸಲು ವಿಫಲವಾದರೆ ಅಧಿಕಾರಿಗಳ ಕರ್ತವ್ಯ ಲೋಪವಾಗುತ್ತದೆ. ಭ್ರಷ್ಟಾಚಾರ ವಿರುದ್ಧ ಕ್ರಮ ಕೈಗೊಳ್ಳುವ ಜತೆಗೆ ಅನುದಾನ ದುರುಪಯೋಗ, ಸರ್ಕಾರಿ ಸೌಲಭ್ಯ ಜನರಿಗೆ ಸಿಗದಿರುವ ಸಂದರ್ಭ ದೂರು ದಾಖಲಿಸಲು ಅವಕಾಶವಿದೆ ಎಂದರು.
ಅಽಕೃತ ನಮೂನೆಯಲ್ಲಿ ೨ ದೂರು ಹಾಗೂ ಅರ್ಜಿಯ ರೀತಿಯಲ್ಲಿ ೧೦ ದೂರು ಸೇರಿ ೧೨ ದೂರುಗಳನ್ನು ಸಾರ್ವಜನಿಕರು ನೀಡಿದ್ದಾರೆ. ಲೋಕಾಯುಕ್ತ ಪೊಲೀಸ್ ಉಪ ಅಧೀಕ್ಷಕರಾದ ಡಾ.ಗಾನಾ ಪಿ.ಕುಮಾರ್, ಸುರೇಶ್, ಪೊಲೀಸ್ ನಿರೀಕ್ಷಕಿ ಭಾರತಿ, ತಹಸೀಲ್ದಾರ್ ಪುರಂದರ ಹೆಗ್ಡೆ, ತಾಲೂಕು ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಉಪವಲಯ ಅರಣ್ಯಾಽಕಾರಿ ಕಿರಣ್, ನಗರ ಪೊಲೀಸ್ ನಿರೀಕ್ಷಕ ಜಾನ್ಸನ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.
ಜನರಲ್ಲಿ ಜಾಗೃತಿ ಅಗತ್ಯ
ದೂರುದಾರರು ಪ್ರಕರಣ ಬಗ್ಗೆ ಲೋಕಾಯುಕ್ತ ಅಽಕಾರಿಗಳಲ್ಲಿ ಚರ್ಚೆ ನಡೆಸಿದ ಬಳಿಕವೇ ದೂರು ನೀಡುವ ಕಾರ್ಯಕ್ಕೆ ಮುಂದಾಗಬೇಕು. ಜನರು -ರಂ ನಂಬರ್ ೧ ಮತ್ತು ೨ರ ಜತೆಗೆ ಅಫಿದವಿತ್ ನೀಡುವುದರಿಂದ ಅಲೆದಾಟ ತಪ್ಪುತ್ತದೆ. ನ್ಯಾಯಾಲಯದಲ್ಲಿ ಇರುವ ಪ್ರಕರಣಗಳ ಬಗ್ಗೆ ದೂರು ನೀಡುವುದರಿಂದ ಪ್ರಯೋಜನವಿಲ್ಲ. ಲೋಕಾಯುಕ್ತದಲ್ಲಿ ವಿಚಾರಣೆ ಹಂತದ ಪ್ರಕರಣಕ್ಕೆ ಮತ್ತೆ ದೂರು ನೀಡುವುದೂ ಪ್ರಯೋಜನವಿಲ್ಲ. ನೈಜ ದೂರುಗಳಿಗೆ ಲೋಕಾಯುಕ್ತ ಹೆಚ್ಚಿನ ಮಹತ್ವ ನೀಡುತ್ತದೆ ಎಂದು ಕುಮಾರಚಂದ್ರ ಹೇಳಿದರು.