ಕೋಲಾರ: ಸರ್ಕಾರಿ ನೌಕಕರ ಸಂಘದ ಮಾಜಿ ಅಧ್ಯಕ್ಷ ಸುರೇಶ್ ಬಾಬುಗೆ ಸಂಬಂಧಿಸಿದ ವಿವಿಧ ಸ್ಥಳಗಳಲ್ಲಿ ಲೋಕಾಯುಕ್ತ ಪೊಲೀಸರು ಗುರುವಾರ ದಾಳಿ ನಡೆಸಿದ್ದು, ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಲೋಕಾಯುಕ್ತ ಎಸ್‌ಪಿ ಧನಂಜಯï ನೇತೃತ್ವದಲ್ಲಿ ದಾಳಿ ನಡೆದಿದ್ದು, ನಗರದ ಹಾರೋಹಳ್ಳಿ ಮನೆಯಲ್ಲಿ 7.50 ಲಕ್ಷ ರೂ. ನಗದು, ಧರ್ಮರಾಯನಗರ, ಕೋಟೆ ಬಡಾವಣೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಬಳಿಯಿರುವ ಕೆಮಿಕಲ್ ಫ್ಯಾಕ್ಟರಿ ಜಮೀನುಗಳಿಗೆ ಸಂಬಂಧಿಸಿದ 17 ಬಾಕ್ಸ್‌ಗಳಲ್ಲಿ ದಾಖಲೆ ಸಿಕ್ಕಿವೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.
ಶೋಧ ಕಾರ್ಯ ಮುಂದುವರಿದಿದ್ದು, ವಿವರಗಳನ್ನು ಕಲೆ ಹಾಕಲಾಗುತ್ತಿದೆ. ನಕಲಿ ದಾಖಲೆ ಸೃಷ್ಟಿ ಮತ್ತು ಸರ್ಕಾರಿ ದಾಖಲೆಗಳನ್ನು ಅನಧಿಕೃತ ಮನೆಯಲ್ಲಿ ಶೇಖರಿಸಿಟ್ಟಿರುವ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.
ಸುರೇಶ್‌ಬಾಬು ಅಪ್ತರಾದ ಸುನೀಲ ಮತ್ತು ಸಂದೀಪ್ ಅವರ ಮನೆ ಮೇಲೂ ದಾಳಿ ನಡೆದಿದೆ. ಸದ್ಯಕ್ಕೆ ಸುರೇಶ್‌ಬಾಬು ಮೊಬೈಲ್ ಸ್ವಿಚ್‌ಆಫ್ ಮಾಡಿಕೊಂಡಿದ್ದು, ಸಂಪರ್ಕಕ್ಕೆ ಸಿಗುತ್ತಿಲ್ಲ ಎನ್ನಲಾಗಿದೆ.
ಸರ್ಕಾರಿ ನೌಕಕರ ಸಂಘದ ಮಾಜಿ ಅಧ್ಯಕ್ಷನಿಗೆ ಲೋಕಾ ಶಾಕ್

You Might Also Like
ಆರ್ಥಿಕ ಸಮಸ್ಯೆಗಳಿಂದ ಬಳಲುತ್ತಿದ್ದೀರಾ? ಹಾಗಿದ್ರೆ ಭಾನುವಾರ ಹೀಗೆ ಮಾಡಿ ನೋಡಿ…devotional
devotional:ಭಾನುವಾರ ಸೂರ್ಯ ದೇವನನ್ನು ಪೂಜೆ ಮಾಡುವುದರಿಂದ ಮತ್ತು ಸೂರ್ಯ ಮಂತ್ರಗಳನ್ನು ಪಠಿಸುವುದರಿಂದ ಜೀವನದಲ್ಲಿ ಸಂತೋಷ, ಸಮೃದ್ಧಿ…
ಸುಡು ಬೇಸಿಗೆಯಲ್ಲಿ ಆರೋಗ್ಯ ನಿಮ್ಮ ಕೈಯಲ್ಲಿ! ಈ ಟಿಪ್ಸ್ ತಪ್ಪದೇ ಫಾಲೋ ಮಾಡಿ, ಇಲ್ಲದಿದ್ರೆ ಆರೋಗ್ಯಕ್ಕೆ ಡೇಂಜರ್ | Summer Tips
Summer Tips : ಎಲ್ಲೆಡೆ ಬೇಸಿಗೆ ಆರಂಭವಾಗಿದೆ. ಸೂರ್ಯನ ಪ್ರಖರವಾದ ಕಿರಣಗಳು ನಮ್ಮ ನೆತ್ತಿಯನ್ನು ಸುಡುತ್ತಿದೆ.…
ಈ 3 ರಾಶಿಯವರು ಹಣಕ್ಕಿಂತಲೂ ಪ್ರೀತಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರಂತೆ! ನಿಮ್ಮ ರಾಶಿ ಯಾವುದು? Zodiac Signs
Zodiac Signs : ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ ರೀತಿ ನಂಬದವರು…