ಸದನದಲ್ಲಿ ‘ಹಿಂದೂ’ ಗದ್ದಲ; ರಾಹುಲ್​ಗಾಂಧಿ ಹೇಳಿಕೆಗೆ ಗಂಭೀರ ವಿಚಾರ ಎಂದು ‘ನಮೋ’ ಖಂಡನೆ

ನವದೆಹಲಿ: ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರೂ ಆದ ಕಾಂಗ್ರೆಸ್​ ಸಂಸದ ರಾಹುಲ್ ಗಾಂಧಿ ಅವರು ಹಿಂದೂಗಳ ಕುರಿತು ನೀಡಿದ ಹೇಳಿಕೆಯು ಭಾರೀ ಕೋಲಾಹಲವನ್ನು ಉಂಟುಮಾಡಿತು. ರಾಹುಲ್ ಗಾಂಧಿ ಅವರು ತಮ್ಮನ್ನು ತಾವು ಹಿಂದೂ ಎಂದು ಕರೆದುಕೊಳ್ಳುವವರು ಹಿಂಸಾಚಾರದಲ್ಲಿ ತೊಡಗುತ್ತಾರೆ ಎಂದು ಹೇಳಿದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಎದ್ದು ನಿಂತು ರಾಹುಲ್ ಗಾಂಧಿ ಅವರ ಭಾಷಣವನ್ನು ಅಡ್ಡಿಪಡಿಸಿ ಹೇಳಿಕೆಯನ್ನು ಖಂಡಿಸಿದರು.

ಇದನ್ನು ಓದಿ: 77 ವರ್ಷಗಳ ನಂತರ ಕ್ರಿಮಿನಲ್​ ನ್ಯಾಯ ವ್ಯವಸ್ಥೆ ಸ್ವದೇಶಿಯಾಗಿದೆ; ಗೃಹಸಚಿವ ಅಮಿತ್​ ಷಾ

ಸದನದಲ್ಲಿ ಬಿಜೆಪಿಯನ್ನು ಗುರಿಯಾಗಿಟ್ಟುಕೊಂಡ ರಾಹುಲ್​ಗಾಂಧಿ, ತಮ್ಮನ್ನು ತಾವು ಹಿಂದೂ ಎಂದು ಕರೆದುಕೊಳ್ಳುವವರು ದಿನದ 24 ಗಂಟೆ ಹಿಂಸೆ ಮತ್ತು ದ್ವೇಷದಲ್ಲಿ ತೊಡಗುತ್ತಾರೆ. ಅವರು ಹಿಂದೂಗಳೇ ಅಲ್ಲ. ಹಿಂದೂ ಧರ್ಮವು ಭಯ, ದ್ವೇಷ ಮತ್ತು ಸುಳ್ಳುಗಳನ್ನು ಹರಡುವುದಿಲ್ಲ ಎಂದು ಹೇಳಿದರು. ಈ ವೇಳೆ ರಾಹುಲ್​ಗಾಂಧಿ ಅವರ ಭಾಷಣವನ್ನು ತಡೆದ ಪ್ರಧಾನಿ ಮೋದಿ, ಈ ವಿಚಾರ ತುಂಬಾ ಗಂಭೀರವಾಗಿದೆ. ಇಡೀ ಹಿಂದೂ ಸಮುದಾಯವನ್ನು ಹಿಂಸಾಚಾರದೊಂದಿಗೆ ಜೋಡಿಸುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ತಕ್ಷಣವೇ ಪ್ರಧಾನಿ ಮೋದಿ ಅವರಿಗೆ ರಾಹುಲ್ ಗಾಂಧಿ ತಿರುಗೇಟು ನೀಡಿದರು. ನಾನು ಬಿಜೆಪಿಯನ್ನು ಹಿಂಸಾತ್ಮಕ ಎಂದು ಕರೆದಿದ್ದೇನೆ, ನರೇಂದ್ರ ಮೋದಿ ಇಡೀ ಹಿಂದೂ ಸಮಾಜವಲ್ಲ. ಬಿಜೆಪಿ ಎಂದರೆ ಇಡೀ ಹಿಂದೂ ಸಮಾಜವಲ್ಲ. ಆರ್‌ಎಸ್‌ಎಸ್ ಇಡೀ ಹಿಂದೂ ಸಮಾಜವಲ್ಲ ಎಂದು ಹೇಳಿದರು. ಅದೇ ಸಮಯದಲ್ಲಿ ರಾಹುಲ್​ಗಾಂಧಿ ಅವರು ಶಿವನ ಫೋಟೋ ಹಿಡಿದು, ನೀವು ಪದೇಪದೆ ಶಿವನನ್ನು ತೋರಿಸಿ ಜನರನ್ನು ಹೆದರಿಸಬೇಡಿ. ಹಿಂದೂಗಳು ಎಂದಿಗೂ ಶಿವನನ್ನು ನೋಡಿ ಹೆದರುವುದಿಲ್ಲ ಮತ್ತು ದ್ವೇಷ ಹರಡುವುದಿಲ್ಲ ಎಂದು ಹೇಳಿದರು. ಬಿಜೆಪಿ ಅಲ್ಪಸಂಖ್ಯಾತರಿಗೆ ಬೆದರಿಕೆ ಹಾಕಿ, ದ್ವೇಷ ಹರಡುತ್ತಿದೆ, ಮುಸ್ಲಿಮರು, ಸಿಖ್ಖರು, ಕ್ರಿಶ್ಚಿಯನ್ನರ ವಿರುದ್ಧ ಹಿಂಸಾಚಾರ ನಡೆಸುತ್ತಿದೆ ಎಂದು ಆರೋಪಿಸಿದರು.

ಕೇಂದ್ರ ಗೃಹ ಸಚಿವ ಅಮಿತ್ ಷಾ ಸದನದಲ್ಲಿ ಎದ್ದು ನಿಂತು ಇಂತಹ ದೊಡ್ಡ ವಿಚಾರವನ್ನು ಗಲಾಟೆ ಮಾಡಿ ಹತ್ತಿಕ್ಕಲು ಸಾಧ್ಯವಿಲ್ಲ. ಹಿಂದೂ ಎಂದು ಕರೆದುಕೊಳ್ಳುವವರು ಹಿಂಸಾಚಾರ ಮಾಡುತ್ತಾರೆ ಎಂದು ವಿರೋಧ ಪಕ್ಷದ ನಾಯಕ ಹೇಳಿದ್ದಾರೆ. ಈ ದೇಶದ ಕೋಟಿಗಟ್ಟಲೆ ಜನರು ತಮ್ಮನ್ನು ತಾವು ಹಿಂದೂ ಎಂದು ಹೆಮ್ಮೆಯಿಂದ ಕರೆದುಕೊಳ್ಳುತ್ತಾರೆ, ಅವರೆಲ್ಲರೂ ಹಿಂಸೆ ಮಾಡುತ್ತಾರೆಯೇ?. ಈ ಸದನದಲ್ಲಿ ಹಿಂಸಾಚಾರದ ಮನೋಭಾವವನ್ನು ಯಾವುದೇ ಧರ್ಮದೊಂದಿಗೆ ಸಂಯೋಜಿಸುವುದು ತಪ್ಪು ಎಂದು ಹೇಳಿದರು. ಅದರಲ್ಲೂ ಸಾಂವಿಧಾನಿಕ ಹುದ್ದೆಯನ್ನು ಹೊಂದಿರುವ ವ್ಯಕ್ತಿ ಈ ರೀತಿ ಹೇಳುವುದು ಸರಿಯಲ್ಲಿ. ರಾಹುಲ್​ಗಾಂಧಿ ಅವರು ಕ್ಷಮೆಯಾಚಿಸಬೇಕು ಎಂದು ಅಮಿತ್​ ಷಾ ಒತ್ತಾಯಿಸಿದರು.(ಏಜೆನ್ಸೀಸ್​​)

ಲೋಕಸಭೆ ಅಧಿವೇಶನದಿಂದ ಪ್ರತಿಪಕ್ಷಗಳು ಹೊರನಡೆದಿದ್ದೇಕೆ?; ಸಭಾತ್ಯಾಗಕ್ಕೆ ಕಾರಣವಾದ ಬೇಡಿಕೆ ಏನು.. ಇಲ್ಲಿದೆ ಡೀಟೇಲ್ಸ್​

Share This Article

ಒಂದು ಬಾರಿ ಇದನ್ನು ಕುಡಿದರೆ ಸಾಕು ನಿಮ್ಮ ಹೊಟ್ಟೆ ಫುಲ್​ ಕ್ಲೀನ್ ಆಗಿಬಿಡುತ್ತೆ! Stomach problems

ತಿಂದ ಆಹಾರ ಸರಿಯಾಗಿ ಜೀರ್ಣವಾಗದಿದ್ದರೆ ಆ ನೋವು ( Stomach problems ) ಅಥವಾ ಕಿರಿಕಿರಿ…

Health Tips : ಸಕ್ಕರೆ ಕಾಯಿಲೆಯಿಂದ ಬಳಲುತ್ತೀದ್ದೀರಾ? ಬೆಳ್ಳಂಬೆಳಗ್ಗೆ ಕರಿಬೇವಿನ ಎಲೆಯ ನೀರನ್ನು ಕುಡಿಯಿರಿ ಸಾಕು

ಬೆಂಗಳೂರು: ಕರಿಬೇವು ಕೇವಲ ಬೆಳಗಿನ ತಿಂಡಿಗೆ ರುಚಿ ಕೊಡಲು ಒಗ್ಗರಣೆಗೆ ಮಾತ್ರ ಮೀಸಲಾಗಿಲ್ಲ. ಕರಿಬೇವಿನ ಎಲೆಗಳು…

ಮನೆಯಲ್ಲೇ ತಯಾರಿಸಿಕೊಳ್ಳಿ ಕೂದಲು ಸಂರಕ್ಷಣೆಯ ಶುದ್ಧ ತೈಲ

ಸದೃಢವಾದ, ಹೊಳೆಯುವ, ನೀಳ ಕೂದಲು ಬೇಕೆಂಬ ಆಸೆ ತುಂಬಾ ಜನರಿಗೆ ಇದ್ದೇ ಇರುತ್ತದೆ. ಜೊತೆಗೆ ಕೂದಲು…