VIDEO: ಲಾಕ್​ಡೌನ್​ ಇದ್ರೇನು? ಪೊಲೀಸರು ಕೂಗ್ತಿದ್ದರೆ ನಮಗೇನು...ಸಿಕ್ಕಿದಷ್ಟು ಎತ್ಕೊಂಡು ಹೋಗ್ತಾ ಇರೋದೆ...!

Woman 16 April 20
Published on

ಉಡುಪಿ: ಕರೊನಾ ನಿಯಂತ್ರಣಕ್ಕಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಹೇಳಿದರೂ ಅನೇಕ ಜನರು ಅದನ್ನು ಪಾಲಿಸುತ್ತಿಲ್ಲ. ಕರೊನಾ ಭಯಕ್ಕಿಂತ, ತರಕಾರಿ, ಹಾಲು, ರೇಷನ್​​ ಕೊಳ್ಳಲು ಇರುವ ಧಾವಂತವೇ ಹೆಚ್ಚಾಗಿಬಿಟ್ಟಿದೆ.

ಕರೊನಾ ವೈರಸ್​ ಪ್ರಸರಣ ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ಉಡುಪಿ ನಗರಾದ್ಯಂತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಜಿಲ್ಲಾಡಳಿತ ತರಕಾರಿ ಮಾರ್ಕೆಟ್​ನ್ನು ನಗರದ ಹೊರವಲಯಕ್ಕೆ ಸ್ಥಳಾಂತರ ಮಾಡಿದೆ. ಅಲ್ಲದೆ, ವಲಸೆ ಕಾರ್ಮಿಕ ಮಹಿಳೆಯರಿಗೆ ಉಚಿತವಾಗಿ ನೀಡುವುದಾಗಿ ಹೇಳಿದ್ದು, ಸಾಮಾಜಿಕ ಅಂತರ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಲು ಜಿಲ್ಲಾಡಳಿತ ಸೂಚಿಸಿದೆ.

ಆದರೆ ನಗರದ ಹೊರವಲಯದಲ್ಲಿ ಇರುವ ಬೀಡಿನಗುಡ್ಡೆ ಮಹಾತ್ಮಾ ಗಾಂಧಿ ಮೈದಾನದಲ್ಲಿ ಇರುವ ತರಕಾರಿ ಮಾರ್ಕೆಟ್​ ವಲಸೆ ಕಾರ್ಮಿಕ ಮಹಿಳೆಯರು ಉಚಿತ ತರಕಾರಿಗಾಗಿ ಮುಗಿಬೀಳುತ್ತಿದ್ದಾರೆ. ಸಾಮಾಜಿಕ ಅಂತರವೂ ಇಲ್ಲ, ಏನೂ ಇಲ್ಲ. ಇವರು ಪೊಲೀಸರ ಮಾತಿಗೂ ಬೆಲೆ ಕೊಡ್ತಿಲ್ಲ. ಸೇನಾ ಕಾರ್ಯಕರ್ತರ ಮಾತನ್ನೂ ಕೇಳ್ತಿಲ್ಲ.. ಎಲ್ಲರೂ ಸಮಾಧಾನದಿಂದ ಇರಿ. ಪ್ರತಿಯೊಬ್ಬರಿಗೂ ತರಕಾರಿ ಸಿಗುತ್ತದೆ ಎಂದು ಸಾರಿಸಾರಿ ಹೇಳುತ್ತಿದ್ದರೂ ಅವರು ಕೇಳುತ್ತಿಲ್ಲ. 

ಚೀಲದಲ್ಲಿ ತುಂಬಿಕೊಂಡು, ಸ್ಥಳದಲ್ಲಿ ಒಂದಷ್ಟು ತರಕಾರಿಗಳನ್ನು ಚೆಲ್ಲುತ್ತ, ಬೇಕಾಬಿಟ್ಟಿ ಎತ್ತಿಕೊಂಡು ಹೋಗುತ್ತಿದ್ದಾರೆ. ಒಂದೇ ಬಾರಿ ಗುಂಪುಗುಡೂತ್ತಿರುವುದು ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net