ಮುಂಬೈ: ದೇಶಾದ್ಯಂತ ಜಾರಿಗೊಳಿಸಲಾಗಿರುವ ಕೋವಿಡ್ 19 ಲಾಕ್ಡೌನ್ ಮೇ 3ಕ್ಕೆ ಮುಗಿದರೂ ಮುಂಬೈ ಮತ್ತು ಪುಣೆಯಲ್ಲಿ ಮಾತ್ರ ಲಾಕ್ಡೌನ್ ಅನ್ನು ಕಟ್ಟುನಿಟ್ಟಾಗಿ ಮುಂದುವರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಮಹಾರಾಷ್ಟ್ರ ಆರೊಗ್ಯ ಸಚಿವ ರಾಜೇಶ್ ಟೋಪೆ ಈ ಸುಳಿವು ನೀಡಿದ್ದು, ಮುಂಬೈ ಹಾಗೂ ಪುಣೆಯಲ್ಲಿ ಸೋಂಕು ಹರಡದಂತೆ ಸಂಪೂರ್ಣವಾಗಿ ತಡೆಯದ ಹೊರತು ಲಾಕ್ಡೌನ್ ತೆರವುಗೊಳಿಸುವುದಿಲ್ಲ ಎಂದು ಹೇಳಿದ್ದಾರೆ.
ಕರೊನಾ ಸೋಂಕು ಹರಡದಂತೆ ತಡೆಯುವ ಉದ್ದೇಶದಿಂದ ದೇಶಾದ್ಯಂತ ಲಾಕ್ಡೌನ್ ಘೋಷಿಸಲಾಗಿದೆ. ಆದರೂ ಮುಂಬೈ ಮತ್ತು ಪುಣೆಯಲ್ಲಿ ಸೋಂಕು ಹರಡದಂತೆ ತಡೆಗಟ್ಟಲು ಇದುವರೆಗೆ ಸಾಧ್ಯವಾಗಿಲ್ಲ. ಆದ್ದರಿಂದ, ಮೇ 3ರ ನಂತರದಲ್ಲಿ ಉಭಯ ನಗರಗಳಲ್ಲಿ 15 ದಿನ ಲಾಕ್ಡೌನ್ ಮುಂದುವರಿಸುವ ಸಾಧ್ಯತೆ ಇದೆ. ಆದರೆ ಈ ಲಾಕ್ಡೌನ್ ಕಂಟೈನ್ಮೆಂಟ್ ಪ್ರದೇಶಗಳಿಗೆ ಸೀಮಿತವಾಗಿರಲಿದೆ ಎಂದು ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಮುಂಬೈ ಮತ್ತು ಪುಣೆ ಕೋವಿಡ್ 19 ಹಾಟ್ಸ್ಪಾಟ್ಗಳಾಗಿವೆ. ಇದುವರೆಗೂ 6,817 ಕರೊನಾ ಪೀಡಿತರು ಪತ್ತೆಯಾಗಿದ್ದು, ಮುಂಬೈವೊಂದರಲ್ಲೇ 4,447 ಮತ್ತು ಪುಣೆಯಲ್ಲಿ 961 ಸೋಂಕಿತರು ಪತ್ತೆಯಾಗಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಮುಂದುವರಿದ ಕೋವಿಡ್ 19 ನಿಯಂತ್ರಣದ ರಾಜಕೀಯ ಜಟಾಪಟಿ; ಕೇಂದ್ರೀಯ ತಂಡಕ್ಕೆ ಮಾಹಿತಿ ಕೊಡದ ಸರ್ಕಾರ