ಕನ್ನಡ ಚಿತ್ರಗಳಿಗೆ ಹೌಸ್‌ಫುಲ್​ ಭಾಗ್ಯ: ಎಲ್ಲರ ಮನೆಯಲ್ಲೀಗ ಕನ್ನಡ ಚಿತ್ರಗಳ ಕಲರವ

Sandalwoood
Published on

ಲಾಕ್‌ಡೌನ್‌ನಿಂದ ಚಿತ್ರಮಂದಿರಗಳಿಗೆ ತಾತ್ಕಾಲಿಕವಾಗಿ ಬೀಗ ಬಿದ್ದಿದೆ. ಹಾಗಂತ ಕನ್ನಡ ಚಿತ್ರಗಳಿಗೆ ಸಂಕಷ್ಟ ಕಾಲ ಎನ್ನುವಂತಿಲ್ಲ. ಹಿಂದೆಂದಿಗಿಂತಲೂ ಕನ್ನಡ ಚಿತ್ರಗಳನ್ನು ನೋಡುವರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಅದು ಹೇಗೆ ಎಂಬ ಪ್ರಶ್ನೆ ಸಹಜ. ಚಿತ್ರಮಂದಿರಗಳು ಬಾಗಿಲು ಹಾಕಿದರೇನಂತೆ? ಟಿವಿ ಚಾನಲ್‌ಗಳಲ್ಲಿ, ಯೂಟ್ಯೂಬ್, ಓಟಿಟಿಗಳಲ್ಲಿ ಕನ್ನಡ ಸಿನಿಮಾಗಳ ನೋಡುವವರ ಸಂಖ್ಯೆ ವಿಪರೀತ ಹೆಚ್ಚಿದೆ.

ಹೌದು, ಕಳೆದ ಕೆಲವು ವಾರಗಳಿಂದ ಎಲ್ಲಾ ಕನ್ನಡ ಸಿನಿಮಾಗಳ ಚಾನಲ್ಲುಗಳ ಟಿಆರ್‌ಪಿ ಗಣನೀಯವಾಗಿ ಏರಿದೆ. ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಆಗಿರುವ ಕನ್ನಡದ ಅತ್ಯುತ್ತಮ ಚಿತ್ರಗಳ ಲಿಂಕ್‌ಗಳು ವಾಟ್ಸಾಪ್‌ನಲ್ಲಿ ಸಿಕ್ಕಾಪಟ್ಟೆ ಓಡಾಡುತ್ತಿವೆ. ಯೂಟ್ಯೂಬ್‌ನಲ್ಲಿ ಹಳೆಯ ಕ್ಲಾಸಿಕ್ ಚಿತ್ರಗಳಿಗೆ ಡಿಮ್ಯಾಂಡ್ ಹೆಚ್ಚಿದೆ. ಇನ್ನು ಅಮೇಜಾನ್, ನೆಟ್‌ಫ್ಲಿಕ್ಸ್ ಮುಂತಾದ ಓಟಿಟಿಗಳಲ್ಲಂತೂ ಜನ ಹುಡುಕಿಹುಡಕಿ ಕನ್ನಡ ಚಿತ್ರಗಳನ್ನು ನೋಡುತ್ತಿದ್ದಾರೆ.

ಕಳೆದ ಒಂದೆರೆಡು ತಿಂಗಳುಗಳಲ್ಲಿ ಅಮೇಜಾನ್‌ನಲ್ಲಿ ‘ದಿಯಾ’ ಮತ್ತು ‘ಲವ್ ಮಾಕ್‌ಟೇಲ್’ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಬರೀ ಇವೆರೆಡೇ ಚಿತ್ರಗಳಲ್ಲ, ಕಳೆದ ಐದಾರು ತಿಂಗಳುಗಳಲ್ಲಿ ಬಿಡುಗಡೆಯಾದ ‘ಮಾಯಾ ಬಜಾರ್’, ‘ಇಂಡಿಯಾ ವರ್ಸಸ್ ಇಂಗ್ಲೆಂಡ್’, ‘ಭರತ ಬಾಹುಬಲಿ’, ‘ ಬಬ್ರೂ’, ‘ಮನರೂಪ’, ‘ಮಾಲ್ಗುಡಿ ಡೇಸ್’, ‘ನನ್ನ ಪ್ರಕಾರ’, ‘ನಮ್ ಗಣಿ ಬಿಕಾಂ ಪಾಸ್’, ‘ಕಪಟ ನಾಟಕ ಪಾತ್ರಧಾರಿ’, ‘ಸಿ++’, ‘ದಮಯಂತಿ’, ‘ದೇವಕಿ’, ‘ಸೆಕೆಂಡ್ ಹ್ಾ’, ‘ಒಡೆಯ’, ‘ಾರ್ಚುನರ್’ ಮುಂತಾದ ಹಲವು ಹೊಸ ಕನ್ನಡ ಸಿನಿಮಾಗಳು ನೋಡುವುದಕ್ಕೆ ಸಿಗುತ್ತಿವೆ. ಇದೆಲ್ಲದರ ಜತೆಗೆ ಕಳೆದ ವರ್ಷ ಬಿಡುಗಡೆಯಾಗಿದ್ದ ‘ಪೈಲ್ವಾನ್’, ‘99’, ‘ಯಜಮಾನ’, ‘ರುಸ್ತುಂ’, ‘ಆರೆಂಜ್’, ‘ಗೀತಾ’, ‘ಯಾನ’ ‘ಚಂಬಲ್’, ‘ಕಥೆಯೊಂದು ಶುರುವಾಗಿದೆ’ ಚಿತ್ರಗಳೂ ಇವೆ.

ಇನ್ನು ನೆಟ್‌ಲಿಕ್ಸ್‌ನಲ್ಲಿ ಐದಾರು ತಿಂಗಳುಗಳಲ್ಲಿ ಬಿಡುಗಡೆಯಾದ ಯಾವುದೇ ಹೊಸ ಚಿತ್ರ ಇಲ್ಲದಿದ್ದರೂ, ‘ನಾತಿಚರಾಮಿ’, ‘ತಿಥಿ’, ‘ಊರ್ವಿ’, ‘ಆಯನ’, ‘ಶುದ್ಧಿ’, ‘ಯೂ ಟರ್ನ್’, ‘ಒಂದು ಮೊಟ್ಟೆಯ ಕಥೆ’ಯಂಥ ವಿಭಿನ್ನ ಸಿನಿಮಾಗಳಿವೆ. ಇವಲ್ಲದೆ ಹಾಟ್‌ಸ್ಟಾರ್, ವೂಟ್, ಜೀ 5, ಸನ್ ನೆಕ್ಸ್‌ಟ್, ಎಂಎಕ್ಸ್ ಪ್ಲೇಯರ್ ... ಹೀಗೆ ಹಲವು ಓಟಿಟಿಗಳಿದ್ದು, ಅಲ್ಲೆಲ್ಲಾ ಹಲವು ಹಳೆಯ ಮತ್ತು ಹೊಸ ಕನ್ನಡ ಚಿತ್ರಗಳು ಸಿಗುತ್ತಿವೆ.

ಒಟ್ಟಾರೆ ಕನ್ನಡ ಸಿನಿಮಾ ಪ್ರೇಮಿಗಳಿಗೆ ಈ ಲಾಕ್‌ಡೌನ್ ಸಮಯದಲ್ಲಿ ಒಂದಿಷ್ಟು ಚಿತ್ರಗಳನ್ನು ನೋಡುವ ಅವಕಾಶ ಸಿಕ್ಕಿದೆ. ಹಿಂದೊಮ್ಮೆ ಚಿತ್ರಮಂದಿರಗಳಲ್ಲಿ ನೋಡಲಿಕ್ಕೆ ಮಿಸ್ ಆದ ಚಿತ್ರಗಳೆಲ್ಲವೂ, ಈಗ ಮನೆಯಲ್ಲೇ ಕೂತು ನೋಡುವುದಕ್ಕೆ ಸಾಧ್ಯವಾಗುತ್ತಿದೆ. ಎಷ್ಟೋ ಚಿತ್ರಗಳು ಬಿಡುಗಡೆಯಾದಾಗ ಹೌಸ್‌ುಲ್ ಆಗಿದಿದ್ದರೂ, ಈಗ ಮನೆಯಲ್ಲೇ ಹೌಸ್‌ುಲ್ ಆಗುತ್ತಿದೆ ಎನ್ನುವುದು ವಿಶೇಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net