ಕಿಟಕಿಯಲ್ಲಿಟ್ಟಿದ್ದ ಚಿನ್ನದ ಸರ ಕಳವು - ಕೆಂಗೇರಿ, ಕಾಮಾಕ್ಷಿ ಪಾಳ್ಯದಲ್ಲಿ ಕೃತ್ಯ

chain theft
Published on

ಬೆಂಗಳೂರು: ನಗರದಲ್ಲಿ ವಾಸವಿದ್ದ ಲಕ್ಷಾಂತರ ಮಂದಿ ಲಾಕ್​ಡೌನ್ ಹಿನ್ನೆಲೆಯಲ್ಲಿ ಮನೆಗೆ ಬೀಗ ಹಾಕಿ ತಮ್ಮ ಊರುಗಳಿಗೆ ತೆರಳಿರುವುದು ಕಳ್ಳರಿಗೆ ವರದಾನವಾಗಿದೆ. ಎರಡು ಕಳ್ಳತನ ಪ್ರಕರಣಗಳು ವರದಿಯಾಗಿದೆ.

ಕೆಂಗೇರಿ ನಿವಾಸಿ ಪ್ರೇಮಲತಾ (69) ಏ.8ರ ರಾತ್ರಿ 12.30ರಲ್ಲಿ ತಮ್ಮ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಬಿಚ್ಚಿ ಮನೆಯ ಹಜಾರದಲ್ಲಿರುವ ಕಿಟಕಿ ಪಕ್ಕದ ಟೇಬಲ್ ಮೇಲಿಟ್ಟು ಪಕ್ಕದಲ್ಲಿದ್ದ ಮಂಚದಲ್ಲಿ ಮಲಗಿದ್ದರು. ಮರುದಿನ ಬೆಳಗ್ಗೆ 5.30ರಲ್ಲಿ ಪ್ರೇಮಲತಾ ಎದ್ದು ನೋಡಿದಾಗ ಸರ ಇರಲಿಲ್ಲ. ಕಳ್ಳರು ಕಿಟಕಿ ಮೂಲಕ ಕೈ ಹಾಕಿ ಕಳ್ಳತನ ಮಾಡಿದ್ದಾರೆ ಎಂದು ಅವರ ಅಳಿಯ ಚೇತನ್ ಕೆಂಗೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

48 ಸಾವಿರ ರೂ. ಕಳವು: ಕಾಮಾಕ್ಷಿಪಾಳ್ಯದಲ್ಲಿ ವಾಸವಿರುವ ಶ್ರೀನಿವಾಸ್, ಕುಟುಂಬ ಸಮೇತರಾಗಿ ಕುಣಿಗಲ್​ನಲ್ಲಿರುವ ತಮ್ಮ ಊರಿಗೆ ಹೋಗಿದ್ದರು. ಲಾಕ್​ಡೌನ್ ಜಾರಿಯಾದ ಕಾರಣ ನಗರಕ್ಕೆ ಹಿಂದಿರುಗಲು ಸಾಧ್ಯವಾಗಿಲ್ಲ. ಏ.8ರಂದು ಶ್ರೀನಿವಾಸ್​ಗೆ ನೆರೆಮನೆಯ ಅಮರ್ ಕರೆ ಮಾಡಿ ನಿಮ್ಮ ಮನೆಯ ಬಾಗಿಲು ಒಡೆದಿರುವುದಾಗಿ ತಿಳಿಸಿದ್ದಾರೆ. ಶ್ರೀನಿವಾಸ್ ಊರಿನಿಂದ ಹಿಂದಿರುಗಿ ನೋಡಿದಾಗ ಕಳ್ಳರು ಮನೆಗೆ ನುಗ್ಗಿ ಬೀರು ಒಡೆದು, ಅದರಲ್ಲಿಟ್ಟಿದ್ದ 48 ಸಾವಿರ ರೂ. ಕಳ್ಳತನ ಮಾಡಿರುವುದು ಕಂಡುಬಂದಿದೆ. ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net