More

    ಲಿಝ್​ ಟ್ರಸ್​ ಪ್ರಧಾನಿ ಪಟ್ಟ ಸುನಕ್​ ಗೆ ಬಿಟ್ಟುಕೊಡುವಾಗ ಹೇಳಿದ್ದೇನು ಗೊತ್ತಾ?

    ಲಂಡನ್: ಮೊದಲ ಬಾರಿಗೆ ಭಾರತೀಯ ಮೂಲದ ವ್ಯಕ್ತಿ ಬ್ರಿಟನ್​ನ ಪ್ರಧಾನಿ ಆಗಿದ್ದಾರೆ. ಈ ಹಿಂದೆ ಲಿಝ್ ಟ್ರಸ್​ ಎದುರು ಸೋತಿದ್ದ ರಿಷಿ ಸುನಕ್​, ಈಗ ಗೆಲುವಿನ ನಗೆ ಬೀರಿದ್ದಾರೆ.

    ಕೇವಲ 45 ದಿನ ಅಧಿಕಾರದಲ್ಲಿದ್ದ ಟ್ರಸ್​, ನಿರ್ಗಮನ ಭಾಷಣದಲ್ಲಿ’ನಾವು ಯುಕ್ರೇನ್ ಬೆಂಬಲಕ್ಕೆ ನಿಲ್ಲಬೇಕು. ಆ ದೇಶ ಪುಟಿನ್​ ವಿರುದ್ಧ ಗೆಲ್ಲಬೇಕು’ ಎಂದರು.

    ‘ನಾವು ಬ್ರೆಕ್ಸಿಟ್​ ನೀಡುವ ಸವಲತ್ತುಗಳನ್ನು ಬಳಸಿಕೊಂಡು ತೆರಿಗೆಯನ್ನು ಕಮ್ಮಿ ಮಾಡಬೇಕು. ಇದು ನಮ್ಮ ನಾಗರಿಕರಿಗೆ ಮತ್ತು ಸಾಂವಿಧಾನಿಕ ಸಂಸ್ಥೆಗಳಿಗೆ ಹೆಚ್ಚಿನ ಸ್ವಾತಂತ್ರ್ಯವನ್ನು ನೀಡುತ್ತದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕಡೆಗೆ ಪ್ರಧಾನಿ ಪಟ್ಟವನ್ನು ಸುನಕ್​ಗೆ ಹಸ್ತಾಂತರಿಸುವಾಗ ‘ನಿಮಗೆ ಎಲ್ಲಾ ರೀತಿಯ ಯಶಸ್ಸು ಸಿಗಲಿ’ ಎಂದು ಹಾರೈಸಿದ್ದಾರೆ.

    ತಮ್ಮ ಅವಧಿಯ ಸಾಧನೆಯನ್ನು ಹೇಳಿಕೊಂಡ ಟ್ರಸ್​, ‘ನಮ್ಮ ಸರ್ಕಾರ ಕಷ್ಟದಲ್ಲಿರುವ ಕುಟುಂಬಗಳಿಗೆ ನೆರವಾಗಲು ತ್ವರಿತ ನಿರ್ಧಾರಗಳನ್ನು ತೆಗೆದುಕೊಂಡಿತ್ತು. ಅದಷ್ಟೆ ಅಲ್ಲದೆ ಅನೇಕ ಸಂಸ್ಥೆಗಳನ್ನು ದಿವಾಳಿ ಆಗುವುದರಿಂದ ತಪ್ಪಿಸಿದ್ದೇವೆ’ ಎಂದು ಹೇಳಿದರು. (ಏಜೆನ್ಸೀಸ್​​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts