More

    ಸಭೆಯ ಆಶಯಗಳನ್ನು ಮಕ್ಕಳಿಗೆ ತಲುಪಿಸಿ

    ಅಳವಂಡಿ: ಮಕ್ಕಳು ಸ್ಪರ್ಧಾತ್ಮಕ ಜಗತ್ತನ್ನು ಎದುರಿಸಲು ಗುಣಾತ್ಮಕ ಶಿಕ್ಷಣ ನೀಡಲು ಮತ್ತು ಈ ಕುರಿತು ಚರ್ಚಿಸಿಲು ಶಿಕ್ಷಕರ ಸಮಾಲೋಚನಾ ಸಭೆಗಳು ತುಂಬಾ ಸಹಕಾರಿ ಎಂದು ಸಮೂಹ ಸಂಪನ್ಮೂಲ ವ್ಯಕ್ತಿ ವಿಜಯಕುಮಾರ ಟಿಕಾರೆ ತಿಳಿಸಿದರು.

    ಇದನ್ನೂ ಓದಿ: ಹಿಂದುಳಿದವರಿಗೆ ಸೌಲಭ್ಯ ಕಲ್ಪಿಸಿ -ಡಾ. ಬಸವರಾಜ ದೇವರು ಹೇಳಿಕೆ-ಆಟೊ ಚಾಲಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ

    ಸಮೀಪದ ನಿಲೋಗಿಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಸಿದ್ದ ಕ್ಲಷ್ಟರ್ ಮಟ್ಟದ ಭಾಷಾ ಶಿಕ್ಷಕರ ಮೊದಲ ಸಮಾಲೋಚನಾ ಸಭೆಯಲ್ಲಿ ಶನಿವಾರ ಮಾತನಾಡಿದರು.

    ಸಮಾಲೋಚನಾ ಸಭೆಯಲ್ಲಿ ಚರ್ಚಿತವಾಗುವ ವಿಷಯಗಳನ್ನು ತರಗತಿ ಕೋಣೆಗೆ ಮುಟ್ಟಿಸಿದಾಗಲೇ ಇಂತಹ ಕಾರ್ಯಕ್ರಮಗಳಿಗೆ ಅರ್ಥ ಬರುತ್ತದೆ. ಶಿಕ್ಷಣ ಇಲಾಖೆಯ ಇಂತಹ ಸಭೆಯಲ್ಲಿ ಭಾಗವಹಿಸುವ ಮೂಲಕ ಶಿಕ್ಷಕರು ಸದುಪಯೋಗ ಪಡೆದುಕೊಳ್ಳಬೇಕು ಎಂದರು.

    ಸಂಪನ್ಮೂಲ ವ್ಯಕ್ತಿ ಹನುಮರಡ್ಡಿ ಇಟಗಿ ಮಾತನಾಡಿ, ಭಾಷಾ ಭೋಧನೆಯಲ್ಲಿ ನಾವೀನ್ಯತೆ ಇರಬೇಕು. ಇಂತಹ ಕೌಶಲಗಳನ್ನು ಪ್ರತಿಯೊಬ್ಬ ಶಿಕ್ಷಕನೂ ಹೊಂದಿರಬೇಕು. ಅಗಲೇ ವಿದ್ಯಾರ್ಥಿಗಳ ಭಾಷಾ ಸಾಮರ್ಥ್ಯ ವಿಭಿನ್ನ ರೀತಿಯಲ್ಲಿ ಬೆಳೆಸಲು ಸಾಧ್ಯ ಎಂದರು.

    ಎಸ್‌ಡಿಎಂಸಿ ಅಧ್ಯಕ್ಷ ಶಿವಪ್ಪ ಮುಕ್ಕಣ್ಣವರ, ಮುಖ್ಯ ಶಿಕ್ಷಕರಾದ ಚನ್ನಪ್ಪ ಕುರಿಗಾರ, ನಾಗಪ್ಪ ಶೀರನಹಳ್ಳಿ, ಚಂದ್ರಶೇಖರ, ಗಂಗವ್ವ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts