ಟಾಯ್ಲೆಟ್​ನಲ್ಲೇ ಊಟ, ನಿದ್ರೆ: ಈ ಯುವತಿಯ ಕತೆ ಕೇಳಿದ್ರೆ ಮನಕಲಕುತ್ತೆ, ಇಂಥಾ ಜೀವನ ಯಾರಿಗೂ ಬೇಡ! Living Cost

Living Cost
Published on

Living Cost : ಹಣ ಉಳಿತಾಯ ಮಾಡುವುದಕ್ಕಾಗಿ ಶೌಚಾಲಯವನ್ನೇ ತನ್ನ ಮಲಗುವ ಕೋಣೆಯನ್ನಾಗಿ ಪರಿವರ್ತಿಸಿದ ಯುವತಿಯ ಜೀವನಗಾಥೆ ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಚೀನಾದ ಹುನಾನ್ ಮೂಲದ 18 ವರ್ಷದ ಯಾಂಗ್, ಲೈಫ್ ವ್ಲಾಗ್‌ಗಳಲ್ಲಿ ಇದೀಗ ಟ್ರೆಂಡಿಂಗ್ ಆಗಿದ್ದಾಳೆ. ಯಾಂಗ್, ಪೀಠೋಪಕರಣ ಅಂಗಡಿಯಲ್ಲಿ ಕೆಲಸ ಮಾಡುತ್ತಾಳೆ. ಅವಳು ತಿಂಗಳಿಗೆ 31,776 (2,700 ಯುವಾನ್) ರೂಪಾಯಿ ಗಳಿಸುತ್ತಾಳೆ. ಆದರೆ, ಆ ನಗರದಲ್ಲಿ ಒಬ್ಬ ವ್ಯಕ್ತಿಯ ಸರಾಸರಿ ವೇತನ 88,266 (7,500 ಯುವಾನ್) ರೂಪಾಯಿ.

ಇನ್ನು ಆ ನಗರದಲ್ಲಿ ಒಂದು ಕೋಣೆಯ ಬಾಡಿಗೆ 9,415 (800 ಯುವಾನ್) ದಿಂದ 21,184 (1,800 ಯುವಾನ್) ರೂ. ವರೆಗೂ ಇರುತ್ತದೆ. ಹೀಗಾಗಿ ಅಲ್ಪ ಸಂಬಳ ಪಡೆಯುವ ಯಾಂಗ್​, ತನ್ನ ಬಾಸ್‌ನಿಂದ ಶೌಚಾಲಯದಲ್ಲಿ ವಾಸಿಸಲು ಅನುಮತಿ ಕೇಳಿದಳು. ಆರು ಚದರ ಮೀಟರ್ ವಿಸ್ತೀರ್ಣದ ಕಚೇರಿ ಶೌಚಾಲಯದಲ್ಲಿ ವಾಸಿಸಲು ತಿಂಗಳಿಗೆ 588 ರೂ. ಬಾಡಿಗೆ ಒಪ್ಪಂದ ಮಾಡಿಕೊಂಡಳು.

ಯಾಂಗ್​, ನಿಯಮಿತವಾಗಿ ಚೀನಾದ ಸಾಮಾಜಿಕ ಜಾಲತಾಣ ವೇದಿಕೆ ಡೌಯಿನ್‌ನಲ್ಲಿ ಶೌಚಾಲಯ ಜೀವನದ ಬಗ್ಗೆ ಬರೆಯುತ್ತಾಳೆ. ಆಕೆ 16,000 ಅನುಯಾಯಿಗಳನ್ನು ಸಹ ಹೊಂದಿದ್ದಾಳೆ. ಇದೀಗ ಆಕೆಯ ಕತೆ ಎಲ್ಲರ ಗಮನ ಸೆಳೆದಿದೆ.

ಅಂಗಡಿಯ ಕೆಲಸದ ಸಮಯದಲ್ಲಿ, ಗ್ರಾಹಕರು ಮತ್ತು ಉದ್ಯೋಗಿಗಳು ಶೌಚಾಲಯವನ್ನು ಬಳಸುತ್ತಾರೆ. ಈ ಸಮಯದಲ್ಲಿ, ಯುವತಿ ತನ್ನ ವಸ್ತುಗಳನ್ನು ಪ್ಯಾಕ್ ಮಾಡಿ ಒಂದು ಕಡೆ ಇಡುತ್ತಾಳೆ. ಅಲ್ಲದೆ, ಈ ಜೀವನದ ಬಗ್ಗೆ ನನಗೆ ಸಂತೋಷವಿದೆ ಅಂತಾನೂ ಆಕೆ ಹೇಳಿದ್ದಾಳೆ. ಒಂದಲ್ಲ ಒಂದು ದಿನ ಮನೆ ಮತ್ತು ಕಾರು ಖರೀದಿಸುವಷ್ಟು ಹಣ ಗಳಿಸುತ್ತೇನೆ ಎಂಬ ಭರವಸೆಯನ್ನು ಸಹ ಯಾಂಗ್ ಹಂಚಿಕೊಂಡಿದ್ದಾಳೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net