ರೈಲಿನಲ್ಲಿ ನೀಡಿದ ದಾಲ್​ನಲ್ಲಿ ಜೀವಂತ ಜಿರಳೆ ಪತ್ತೆ; ಪ್ರಯಾಣಿಕರ ಗಲಾಟೆ.. ಅಧಿಕಾರಿಗಳ ರಿಯಾಕ್ಷನ್​ ಹೀಗಿತ್ತು..

ಮುಂಬೈ: ವಂದೇ ಭಾರತ್​ ರೈಲಿನಲ್ಲಿ ಪ್ರಯಾಣಿಕರಿಗೆ ನೀಡಿದ್ದ ಆಹಾರದಲ್ಲಿ ಜೀವಂತ ಜಿರಳೆ ಪತ್ತೆಯಾಗಿರುವ ಘಟನೆ ಇತ್ತೀಚೆಗೆ ಬೆಳಕಿಗೆ ಬಂದಿದೆ. ಕುಟುಂಬ ಸದಸ್ಯರೊಬ್ಬರು ಈ ವಿಚಾರವನ್ನು ಐಆರ್​ಸಿಟಿಸಿ ಅಧಿಕಾರಿಗಳಿಗೆ ಪ್ರಶ್ನಿಸುತ್ತಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ಇದನ್ನು ಓದಿ: ಪ್ರಭಾಸ್​ ಜೋಕರ್​ನಂತೆ ಕಾಣ್ತಾರೆ ಎಂದ ಅರ್ಷದ್​ಗೆ ಕ್ಲಾಸ್​​​; ಸುಧೀರ್​ ಬಾಬು ಹೇಳಿದಿಷ್ಟು

ಮುಂಬೈ ಮೂಲಕ ಉದ್ಯಮಿ ಕುಟುಂಬ ಶಿರಡಿಯಿಂದ ತಮ್ಮ ನಿವಾಸಕ್ಕೆ ಮರಳುತ್ತಿದ್ದಾಗ ಈ ಘಟನೆ ನಡೆದಿದೆ. ಉದ್ಯಮಿ ರಿಕಿ ಜೆಸ್ವಾನಿ ಅವರು ತಮ್ಮ ಕುಟುಂಬದೊಂದಿಗೆ ವಂದೇ ಭಾರತ್​ ಎಕ್ಸ್​​ಪ್ರೆಸ್​ನಲ್ಲಿ ಮುಂಬೈ ಬರುತ್ತಿದ್ದರು. ಅವರು ಮತ್ತು ಅವರ ಸಹೋದರಿ ರೈಲಿನಲ್ಲಿ ಬಡಿಸಿದ ದಾಲ್‌ನಲ್ಲಿ ಜಿರಳೆಯನ್ನು ಕಂಡು ಶಾಕ್​ ಆಗಿದ್ದಾರೆ. ಏಕೆಂದರೆ ಅಷ್ಟರಲ್ಲಾಗಲೆ ಎಲ್ಲರೂ ಊಟವನ್ನು ಮುಗಿಸುವ ಹಂತಕ್ಕೆ ಬಂದಿದ್ದರು.

ನನ್ನ ಇಡೀ ಕುಟುಂಬ ಜಿರಳೆ ಇರುವ ದಾಲ್​​ ಅನ್ನು ಸೇವಿಸಲಾಗಿದಎ. ನಾವು ದೂರು ನೀಡಲು ಪ್ಯಾಂಟ್ರಿ ಬಳಿ ಹೋದಾಗ ಡಸ್ಟ್​​ಬಿನ್​​ ಪಕ್ಕದಲ್ಲಿಯೇ ಆಹಾರ ತಯಾರಿಸುತ್ತಿರುವುದನ್ನು ನೋಡಿದೆವು. ಅಲ್ಲಿ ಜೀವಂತ ಜಿರಳೆಗಳು ಹರಿದಾಡುತ್ತಿದ್ದದ್ದನ್ನು ಗಮನಿಸಿದ್ದೇವೆ. ಇದಲ್ಲದೆ ನೀಡಲಾದ ಮೊಸರು ಕೂಡ ತುಂಬಾ ಹುಳಿಯಾಗಿದ್ದು ಅದು ಕೂಡ ಹಾಳಾಗಿರಬಹುದು ಎಂದು ಹೇಳಿದರು. ಈ ಎಲ್ಲಾ ವಿಚಾರವನ್ನು ಐಆರ್‌ಸಿಟಿಸಿ ಅಧಿಕಾರಿಗಳಿಗೆ ಜೆಸ್ವಾನಿ ಅವರ ಮಗ ಆರ್ಯನ್​ ಕೇಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ವಂದೇ ಭಾರತ್​​ ರೈಲಿನಲ್ಲಿ ಇಂತಹ ಘಟನೆಗಳು ನಡೆಯುತ್ತಿರುವುದು ಇದೇ ಮೊದಲನೆಲ್ಲ. ಈ ಹಿಂದೆಯೂ ಹಲವು ಬಾರಿ ಆಹಾರದಲ್ಲಿ ಕೀಟಗಳು ಸಿಕ್ಕಿರುವ ಘಟನೆಗಳು ಬೆಳಕಿಗೆ ಬಂದಿದೆ. ಫೆಬ್ರವರಿ 2024 ಹಾಗೂ 2024 ಜೂನ್​​ 24 ರಂದು ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸಿದ ಪ್ಯಾಸೆಂಜರ್​ ಊಟದಲ್ಲಿ ಹಾಗೂ ಮತ್ತೊಬ್ಬರ ಬ್ರೆಡ್​​ನಲ್ಲಿ ಜಿರಳೆ ಸಿಕ್ಕಿದ ಘಟನೆಗಳು ಸುದ್ದಿಯಾಗಿತ್ತು.(ಏಜೆನ್ಸೀಸ್​​)

ಅಪ್ರಾಪ್ತ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ; ತನಿಖೆಯನ್ನು ಎಸ್​ಐಟಿಗೆ ವಹಿಸಿದ ಏಕನಾಥ್​ ಶಿಂಧೆ ಸರ್ಕಾರ

Share This Article

ನವರಾತ್ರಿಯಲ್ಲಿ 9 ದಿನ ಉಪವಾಸ ಮಾಡುತ್ತಿದ್ದರೆ ಈ ಸಲಹೆಗಳು ನಿಮಗಾಗಿ…Navratri Fasting

ಬೆಂಗಳೂರು:  ನವರಾತ್ರಿ ( Navratri ) ಆಚರಣೆಗಳು ಪ್ರಾರಂಭವಾಗಿವೆ. ಈ ಹಬ್ಬದ 9 ದಿನಗಳ ಕಾಲ…

ನೀವು 1 ತಿಂಗಳ ಕಾಲ ಬೆಳಗಿನ ತಿಂಡಿ ತಿನ್ನುವುದನ್ನ ಬಿಟ್ಟರೆ ಏನಾಗುತ್ತದೆ? ಪ್ರತಿಯೊಬ್ಬರೂ ಇದನ್ನ ತಿಳಿದಿರಲೇಬೇಕು..Health Tips

ಬೆಂಗಳೂರು:  ಇಂದಿನ ಬಿಡುವಿಲ್ಲದ ಜೀವನದಲ್ಲಿ ಸಮಯದ ಅಭಾವ ಹಾಗೂ ಇನ್ನಿತರ ಕಾರಣಗಳಿಂದಾಗಿ ಅನೇಕರು ಬೆಳಗಿನ ಉಪಾಹಾರವನ್ನು…

ನಿಮ್ಮ ಅಂಗೈನಲ್ಲಿ ಈ ಚಿಹ್ನೆ ಇದೆಯಾ ನೋಡಿ… ಇದ್ರೆ ಎಂದಿಗೂ ಹಣಕಾಸಿನ ಸಮಸ್ಯೆಗಳು ಎದುರಾಗಲ್ಲ | Palmistry

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…