

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದ ದೇವರಗದ್ದೆಯ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಮತ್ತು ದೇವರಗದ್ದೆ ಅಂಗನವಾಡಿ ಕೇಂದ್ರದ ಆಶ್ರಯದಲ್ಲಿ 23ನೇ ವರ್ಷದ ಶಾರದೋತ್ಸವ ಗುರುವಾರ ಆರಂಭವಾಯಿತು.
ಪುರೋಹಿತ ಶಂಕರ ಭಟ್ ವೈದಿಕ ವಿಧಿವಿಧಾನ ನೆರವೇರಿಸಿದರು. ಗಣಪತಿ ಹೋಮ, ವಿಗ್ರಹ ಪ್ರತಿಷ್ಠಾಪನೆ, ಸಾರ್ವಜನಿಕರಿಂದ ಭಜನೆ, ಮಹಾಪೂಜೆ, ಪ್ರಸಾದ ವಿತರಣೆ, ಅಕ್ಷರಾಭ್ಯಾಸ, ಭೋಜನ ಪ್ರಸಾದ ವಿತರಣೆ ನಡೆಯಿತು. ಸಾರ್ವಜನಿಕರಿಗೆ ಆಟೋಟ ಸ್ಪರ್ಧೆಗಳು ಮತ್ತು ಹಗ್ಗ ಜಗ್ಗಾಟ ನಡೆಯಿತು.