ಸಂಗೀತ ಆಲಿಸಿದರೆ ನೆಮ್ಮದಿ ನೆಲೆಸುತ್ತದೆ

Listening to music brings peace.
ಗುಳೇದಗುಡ್ಡದ ದತ್ತಾತ್ರೇಯ ರಾಮರಾವ ಪರ್ವತೀಕರ ಅವರ 108ನೇ ಜನ್ಮದಿನದ ಅಂಗವಾಗಿ ಪಟ್ಟಣದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಸಂಗೀತ ಸ್ವರಾಂಜಲಿ ಕಾರ್ಯಕ್ರಮಕ್ಕೆ ಗಣುರು ಚಾಲನೆ ನೀಡಿದರು.
Published on

ಗುಳೇದಗುಡ್ಡ: ಸಂಗೀತದಿಂದ ಮನಸ್ಸು ಆನಂದಮಯವಾಗುತ್ತದೆ ಎಂದು ಮುರುಘಾ ಮಠದ ಶ್ರೀ ಕಾಶೀನಾಥ ಸ್ವಾಮಿಗಳು ಹೇಳಿದರು.

ದತ್ತಾತ್ರೇಯ ರಾಮರಾವ ಪರ್ವತೀಕರ ಅವರ 108ನೇ ಜನ್ಮದಿನದ ಅಂಗವಾಗಿ ಪಟ್ಟಣದ ರಾವಜಿವಾಡದಲ್ಲಿರುವ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಗುರುವಾರ ರಾತ್ರಿ ಹಮ್ಮಿಕೊಂಡಿದ್ದ ಸಂಗೀತ ಸ್ವರಾಂಜಲಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಭಾರತೀಯ ಸಂಗೀತ ಪರಂಪರೆಯನ್ನು ವಿದೇಶಗಳಲ್ಲೂ ಬೆಳಗಿಸಿದ ನಾದಯೋಗಿ, ಸಂಗೀತ ದಿಗ್ಗಜ ದತ್ತಾತ್ರೇಯ ರಾಮರಾವ್ ಪರ್ವತೀಕರ ಅವರ ನೆನಪಿನಲ್ಲಿ ಪ್ರತಿವರ್ಷ ಸ್ವರಾಂಜಲಿ ಕಾರ್ಯಕ್ರಮ ಹಮ್ಮಿಕೊಂಡು ಸಂಗೀತದ ಪರಂಪರೆಯನ್ನು ಮುಂದುವರಿಸಿಕೊಂಡು ಬರುತ್ತಿರುವ ಕಾರ್ಯ ಶ್ಲಾಘನೀಯ ಎಂದರು.

ಗುರುಸಿದ್ಧೇಶ್ವರ ಮಠದ ಬಸವರಾಜ ಪಟ್ಟದಾರ್ಯ ಸ್ವಾಮಿಗಳು ಮಾತನಾಡಿ, ನಾದ ಆಧ್ಯಾತ್ಮಿಕ ಚಿಂತನೆ ಘಟ್ಟವಾಗಿದೆ. ನಾದ ಮಾನವ ಜನ್ಮದ ಸಾಫಲ್ಯವಾಗಿದೆ. ವೀಣಾವಾದನಲ್ಲಿ ದೊಡ್ಡ ಸಾಧನೆ ಮಾಡಿದ ದತ್ತಾತ್ರೇಯ ರಾಮರಾವ್ ಪರ್ವತೀಕರ ಅವರ ಸ್ವರಾಂಜಲಿ ಹಮ್ಮಿಕೊಂಡು ಸಂಗೀತ ಸುಧೆ ಉಣಿಸುತ್ತಿರುವುದು ಉತ್ತಮ ಕಾರ್ಯ ಎಂದರು.

ಬಳಿಕ ಸ್ಥಳೀಯ ಜ್ಞಾನಸಿಂಧು ಕಲಾನಿಕೇತನ ಸಂಗೀತ ವಿದ್ಯಾಲಯದ ಶಂಕರ ಮುಂದಿನಮನಿ, ಚಿದಾನಂದಸಾ ಕಾಟವಾ ಹಾಗೂ ವಿದ್ಯಾರ್ಥಿಗಳಿಂದ ದಾಸವಾಣಿ ಹಾಗೂ ಸಂಗೀತ ಶಿಕ್ಷಕ ಸೋಮಶೇಖರ ಗಡೇದಗೌಡರ ಅವರಿಂದ ವಾಯೋಲಿನ್ ವಾದನ, ಬಸವರಾಜ ಸಿಂದಗಿಮಠ, ಬಸವರಾಜ ದಿಂಡಿ, ಭೀಮಸಿಂಗ್ ರಾಠೋಡ, ಬಸವರಾಜ ಜಿಡಗಿ ಅವರ ದಾಸ ಸಾಹಿತ್ಯ ಕಾರ್ಯಕ್ರಮ ಜನರನ್ನು ಸೆಳೆಯಿತು.

ನಾದಯೋಗಿ ಡಿ.ಆರ್. ಪರ್ವತೀಕರ ಟ್ರಸ್ಟಿನ ಕಾರ್ಯದರ್ಶಿ ಡಾ. ಸುರೇಶ ಪರ್ವತೀಕರ, ಪ್ರೊ. ಎಸ್.ಐ. ರಾಜನಾಳ, ಡಾ.ವಿ.ಎ. ಬೆನಕನಾಳ, ಶ್ರೀಧರ ನರೇಗಲ್ಲ, ರಮೇಶ ಚಿಲಾಪೂರ, ವಿನೋದ ಅಂಬೇಕರ, ವಿ.ಎನ್. ಡಾಣಕಶಿರೂರ, ರಾಮಣ್ಣ ಬಿಜಾಪೂರ, ಶಂಕ್ರಪ್ಪ ಬೀಳಗಿ, ಮೀನಾಕ್ಷಿ ಅಂಬೇಕರ, ಅಂಜನಾ ಪರ್ವತೀಕರ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net