ಪ್ರಭಾವಿಗಳಿಗೆ ಸೋಲಿನ ರುಚಿ ತೋರಿಸಿದ ಜನತೆ; ಸೋತ ಪ್ರಮುಖರ ಪಟ್ಟಿ ಇಲ್ಲಿದೆ...

BJP Cong JDS
Published on

ಬೆಂಗಳೂರು: ರಾಷ್ಟ್ರ ರಾಜಕಾರಣದ ದಿಕ್ಸೂಚಿ ಎಂದೇ ಹೇಳಲಾಗಿದ್ದ ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು ಕಾಂಗ್ರೆಸ್​ ಪಕ್ಷವು ಪ್ರಚಂಡ ದಿಗ್ವಿಜಯ ಸಾಧಿಸಿದೆ.

ಚುನಾವಣೆಯ ಹೊಸ್ತಿಲಲ್ಲಿ ಟಿಕೆಟ್​ ಕೈತಪ್ಪಿದ ಕಾರಣ ಪಕ್ಷದಿಂದ ಪಕ್ಷಕ್ಕೆ ಜಿಗಿದಿದ್ದ ಅನೇಕರಿಗೆ ತೀವ್ರ ಮುಖಭಂಗವಾಗಿದ್ದು ಪಕ್ಷಾಂತರಿಗಳಿಗೆ ಜನ ಮಣೆ ಹಾಕಿಲ್ಲ.

ಸೋತ ಪ್ರಮುಖರು

ಸ್ಪೀಕರ್​ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವ ವಿ. ಸೋಮಣ್ಣ, ಗೋವಿಂದ್ ಕಾರಜೋಳ, ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಿ.ಟಿ. ರವಿ, ಹಾಸನದಲ್ಲಿ ಪ್ರೀತಂ ಗೌಡ, ವಿರಾಜಪೇಟೆಯಲ್ಲಿ ಕೆ.ಜಿ. ಬೋಪಯ್ಯ, ಮಡಿಕೇರಿಯಲ್ಲಿ ಅಪ್ಪಚ್ಚು ರಂಜನ್​, ಹೊನ್ನಾಳಿಯಲ್ಲಿ ಎಂ.ಪಿ. ರೇಣುಕಾಚಾರ್ಯ ಸೋತ ಪ್ರಮುಖರು.

ಹುಬ್ಬಳ್ಳಿ-ಧಾರವಾಡ ಸೆಂಟ್ರಲ್​ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಜಗದೀಶ್​ ಶೆಟ್ಟರ್​, ಮಾಜಿ ಸ್ಪೀಕರ್​ ರಮೇಶ್​ ಕುಮಾರ್​, ಕೆ.ಆರ್​. ನಗರ ಜೆಡಿಎಸ್​ ಅಭ್ಯರ್ಥಿ ಸಾರಾ ಮಹೇಶ್​​, ರಾಮನಗರದಲ್ಲಿ ನಿಖಿಲ್​ ಕುಮಾರಸ್ವಾಮಿ, ಬೀದರ್​ ದಕ್ಷಿಣದಲ್ಲಿ ಬಂಡೆಪ್ಪ ಕಾಶೆಂಪೂರ್​ ಸೋತಿದ್ದಾರೆ.

ಪ್ರಭಾವಿಗಳಿಗೆ ಮಣೆ ಹಾಕದ ಜನತೆ

ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಜನತೆ ಬಿಜೆಪಿ ಸರ್ಕಾರದಲ್ಲಿದ್ದ ಪ್ರಭಾವಿ ಸಚಿವರಿಗೂ ಸಹ ಮಣೆ ಹಾಕಿಲ್ಲ. ಚುನಾವಣೆಯಲ್ಲಿ ಸಚಿವರಾದ ಶ್ರೀರಾಮುಲು, ಸೋಮಣ್ಣ, ಬಿ.ಸಿ. ಪಾಟೀಲ್​, ಗೋವಿಂದ ಕಾರಜೋಳ ಹಾಗೂ ನಾರಾಯಣಗೌಡಾಗೆ ಜನತೆ ಸೋಲಿನ ರುಚಿ ತೋರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net