ತಿಪಟೂರಿನಲ್ಲಿ ನಾಳೆ ಬೆಳಗ್ಗೆಯಿಂದ 2 ದಿನ ಮದ್ಯ ಮಾರಾಟಕ್ಕೆ ಬ್ರೇಕ್​!

Liquor
Published on

ತುಮಕೂರು: ತಿಪಟೂರು ತಾಲೂಕಿನಾದ್ಯಂತ ನ.26ರ ಬೆಳಗ್ಗೆ 6ರಿಂದ ನ.28ರ ಬೆಳಗ್ಗೆ 6ರವರೆಗೆ ಕೆಎಸ್​ಬಿಸಿಎಲ್​ ಡಿಪೋ ಹೊರತುಪಡಿಸಿ ಎಲ್ಲ ವಿಧದ ಮದ್ಯದಂಗಡಿಗಳನ್ನು ಮುಚ್ಚಲು ಹಾಗೂ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ವೈ.ಎಸ್​.ಪಾಟೀಲ ಆದೇಶಿಸಿದ್ದಾರೆ. ತಿಪಟೂರು ನಗರದ ಶ್ರೀಸತ್ಯ ಗಣಪತಿ ಮೂತಿರ್ ವಿಸರ್ಜನಾ ಮಹೋತ್ಸವದ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ.

ನ.26 ರಿಂದ 27ರವರೆಗೆ ವಿವಿಧ ಜನಪದ ಕಲಾ ತಂಡ, ನೃತ್ಯ ತಂಡಗಳೊಂದಿಗೆ ತಿಪಟೂರು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ಮೂತಿರ್ ವಿಸರ್ಜನೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಮೆರವಣಿಗೆಯಲ್ಲಿ ಸುಮಾರು 40 ರಿಂದ 50 ಸಾವಿರ ಜನ ಸೇರುವುದರಿಂದ ಮೆರವಣಿಗೆ ಸುಗಮವಾಗಿ ನೆರವೇರುವ ಮತ್ತು ನಗರದಲ್ಲಿ ಶಾಂತಿ ಕಾಪಾಡುವ ಉದ್ದೇಶದಿಂದ ಈ ಆದೇಶ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net