

ಮುಂಬೈ: ದೇಶಾದ್ಯಂತ ನೇರವಾಗಿ ಮನೆ ಬಾಗಿಲಿಗೇ ಮದ್ಯ ಸರಬರಾಜು ಮಾಡುವಂತೆ ಸುಪ್ರೀಂಕೋರ್ಟ್ ನೀಡಿದ್ದ ಸೂಚನೆಯನ್ನು ಪಾಲಿಸಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ.
ಇದಕ್ಕಾಗಿ ಮಹಾರಾಷ್ಟ್ರ ರಾಜ್ಯ ಅಬಕಾರಿ ಇಲಾಖೆ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈ ಸಂಬಂಧ ಅದು ಕೆಲವು ಮಾರ್ಗದರ್ಶಿ ನೀತಿಗಳನ್ನು ರೂಪಿಸಿದ್ದು, ಕೆಲವೊಂದು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವಂತೆ ಮದ್ಯ ಸರಬರಾಜುದಾರರಿಗೆ ತಿಳಿಸಿದೆ.
ಕರೊನಾದ ಕೇಂದ್ರಬಿಂದುಗಳು ಎನಿಸಿಕೊಂಡಿರುವ ಮುಂಬೈ ಮತ್ತು ನಾಗ್ಪುರ ಹೊರತುಪಡಿಸಿ, ಮಹಾರಾಷ್ಟ್ರ ರಾಜ್ಯದ ಇತರೆ ಭಾಗಗಳಲ್ಲಿ ನೇರವಾಗಿ ಮನೆಬಾಗಿಲಿಗೇ ಮದ್ಯ ಪೂರೈಕೆಯಾಗಲಿದೆ.