ಕೂಳೂರಿನಲ್ಲಿ ಲಯನ್ಸ್ ಕ್ಲಬ್ ಫಲ್ಗುಣಿ ಪದಗ್ರಹಣ

lea
ಕೂಳೂರಿನಲ್ಲಿ ಲಯನ್ಸ್ ಕ್ಲಬ್ ಫಲ್ಗುಣಿ ಪದಗ್ರಹಣ ಸಮಾರಂಭ ನಡೆಯಿತು. ಭಾಸ್ಕರ್ ಕೋಟ್ಯಾನ್, ಸಿಎ ಶ್ರವಣ್ ಕುಮಾರ್, ಶ್ರವಣ್ ಕೂಳೂರು, ಸಂಜೀತ್ ಶೆಟ್ಟಿ, ಲೋಕೇಶ್ ಕೋಟ್ಯಾನ್, ಓಸ್ವಾಲ್ಡ್ ಡಿಸೋಜ, ಜಯಪ್ರಕಾಶ್ ಇದ್ದರು.
Published on

ಮಂಗಳೂರು: ಲಯನ್ಸ್ ಕ್ಲಬ್ ಫಲ್ಗುಣಿ 2023-24ರ ಸಾಲಿನ ಪದಗ್ರಹಣ ಸಮಾರಂಭ ಕೂಳೂರಿನಲ್ಲಿ ಶನಿವಾರ ನಡೆಯಿತು. ನೂತನ ಅಧ್ಯಕ್ಷರಾಗಿ ಭಾಸ್ಕರ್ ಕೋಟ್ಯಾನ್, ಕಾರ್ಯದರ್ಶಿಯಾಗಿ ಸಿಎ ಶ್ರವಣ್ ಕುಮಾರ್, ಖಜಾಂಚಿಯಾಗಿ ಶ್ರವಣ್ ಕೂಳೂರು ಅಧಿಕಾರ ಸ್ವೀಕರಿಸಿದರು.

ಜಿಲ್ಲಾ ಮಾಜಿ ಗವರ್ನರ್ ಸಂಜೀತ್ ಶೆಟ್ಟಿ ಪದಗ್ರಹಣ ನೆರವೇರಿಸಿದರು. ನಿಕಟಪೂರ್ವ ಅಧ್ಯಕ್ಷ ಲೋಕೇಶ್ ಕೋಟ್ಯಾನ್ ಸ್ವಾಗತಿಸಿದರು. ಜಿಲ್ಲಾ ಸಂಪುಟ ಕಾರ್ಯದರ್ಶಿ ಓಸ್ವಾಲ್ಡ್ ಡಿಸೋಜ, ಜಿಲ್ಲಾ ಪ್ರಾಂತ್ಯಾಧ್ಯಕ್ಷ ಜಯಪ್ರಕಾಶ್, ಜಿಲ್ಲಾ ವಲಯಾಧ್ಯಕ್ಷೆ ಕುಸುಮಾ ಯು.ರಾವ್, ಲಿಯೋ ಕಾರ್ಯದರ್ಶಿ ಸಮೀಕ್ಷಾ ಸುವರ್ಣ, ವಲಯಾಧ್ಯಕ್ಷೆ ದೀಕ್ಷಿತಾ ಕೋಟ್ಯಾನ್ ಮತ್ತು ಲಯನ್ಸ್ ಫಲ್ಗುಣಿ ಸದಸ್ಯರು ಉಪಸ್ಥಿತರಿದ್ದರು. ನರೇಶ್ ಕುಮಾರ್ ಸಸಿಹಿತ್ಲು ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net