

ನವದೆಹಲಿ: ಮೈಕ್ರೋಸಾಫ್ಟ್ ಒಡೆತನದ ಲಿಂಕ್ಡ್‌ಇನ್ ಹೆಚ್ಚಿನ ಉದ್ಯೋಗಗಳನ್ನು ಕಡಿತಗೊಳಿಸಲು ಸಿದ್ಧವಾಗಿದೆ. 20,000 ಉದ್ಯೋಗಿಗಳನ್ನು ಹೊಂದಿರುವ ಲಿಂಕ್ಡ್‌ಇನ್ ತನ್ನ 668 ಉದ್ಯೋಗಿಗಳನ್ನು ತೆಗೆದು ಹಾಕಲಿದೆ ಎಂದು ಹೇಳಿದೆ.
ಲಿಂಕ್ಡ್‌ಇನ್ ತನ್ನ ಅಧಿಕೃತ ಬ್ಲಾಗ್ ಪೋಸ್ಟ್‌ನಲ್ಲಿ, "ಇಂದು ನಾವು ನಮ್ಮ ತಂಡದೊಂದಿಗೆ ಮಾಡಿದ ಬದಲಾವಣೆಗಳ ಪರಿಣಾಮವಾಗಿ ನಮ್ಮ ಎಂಜಿನಿಯರಿಂಗ್, ಉತ್ಪನ್ನ ಮತ್ತು ಹಣಕಾಸು ವಿಭಾಗಗಳಲ್ಲಿ ಸುಮಾರು 668 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದೇವೆ ಎಂದು ತಿಳಿಸಿದೆ.
ಲಿಂಕ್ಡ್‌ಇನ್ ಉದ್ಯೋಗ ಜಾಹೀರಾತು ಪಟ್ಟಿಗಳು ಮತ್ತು ಪ್ರೀಮಿಯಂ ಚಂದಾದಾರಿಕೆಗಳು ಆದಾಯದ ಮೂಲಗಳು. ಇದು ಸುಮಾರು 950 ಮಿಲಿಯನ್ ಬಳಕೆದಾರರನ್ನು ಹೊಂದಿದೆ. ಹೊಸ ಸದಸ್ಯರನ್ನು ಸೈನ್ ಅಪ್ ಮಾಡುವುದನ್ನು ಮುಂದುವರೆಸಿದರೂ, ಜಾಹೀರಾತು ವೆಚ್ಚ ಕಡಿಮೆಯಾಗುವುದು ಸೇರಿದಂತೆ ಹಲವಾರು ಅಂಶಗಳಿಂದಾಗಿ ಕಂಪನಿಯು ಆರ್ಥಿಕವಾಗಿ ನಷ್ಟವನ್ನು ಅನುಭವಿಸಿತು. ಇದೇ ವೇಳೆ, ಕಂಪನಿಯು ಈ ವರ್ಷದ ಮೇ ತಿಂಗಳಲ್ಲಿ ಮೊದಲ ಸುತ್ತಿನ ವಜಾಗಳನ್ನು ಕೈಗೊಂಡಿದೆ.
ಮಾರಾಟ, ಕಾರ್ಯಾಚರಣೆ ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಲಿಂಕ್ಡ್‌ಇನ್ ಇನ್ನೂ 668 ಉದ್ಯೋಗಿಗಳನ್ನು ವಜಾಗೊಳಿಸಲು ಸಿದ್ಧವಾಗಿದೆ.
2022ರ ಅಂತ್ಯದಿಂದ, Amazon, Meta, Google, Alphabet ಸೇರಿದಂತೆ ಹಲವು ಕಂಪನಿಗಳು ತಂತ್ರಜ್ಞಾನ ವಲಯದಲ್ಲಿ ಹತ್ತಾರು ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿವೆ.
ಜನವರಿ 2023ರಲ್ಲಿ, ಲಿಂಕ್ಡ್‌ಇನ್‌ನ ಮೂಲ ಕಂಪನಿ ಮೈಕ್ರೋಸಾಫ್ಟ್ ಕೂಡಾ ಹಲವಾರು ಉದ್ಯೋಗಿಗಳನ್ನು ತೆಗೆಯುವುದಾಗಿ ಘೋಷಿಸಿತು. ಈ ಎಲ್ಲಾ ಕಂಪನಿಗಳು ಚಾಟ್‌ಜಿಪಿಟಿ (ಮೈಕ್ರೋಸಾಫ್ಟ್ ಒಡೆತನ), ಬಾರ್ಡ್ (ಗೂಗಲ್) ನಂತಹ ಎಐ ಆಧಾರಿತ ತಂತ್ರಜ್ಞಾನದಲ್ಲಿ ಹೆಚ್ಚು ಹೂಡಿಕೆ ಮಾಡುತ್ತಿವೆ. ಹೀಗಾಗಿ ಉದ್ಯೋಗಿಗಳನ್ನು ತೆಗೆಯುತ್ತಿದೆ ಎನ್ನಲಾಗಿದೆ.