ಎಪಿಎಂಸಿ ಶುಲ್ಕ ಶೇ.35 ಪೈಸೆಗೆ ನಿಗದಿಪಡಿಸಿ, ಕೃಷಿ ಉತ್ಪನ್ನ ಮಾರುಕಟ್ಟೆ ವರ್ತಕರ ಮನವಿ

21122020 Lingasugur APMC merchants appeal
Published on

ಲಿಂಗಸುಗೂರು: ಎಪಿಎಂಸಿ ಶುಲ್ಕ ಶೇ.35 ಪೈಸೆಗೆ ರಾಜ್ಯ ಸರ್ಕಾರ ಮತ್ತೆ ಆದೇಶಿಸಬೇಕೆಂದು ಒತ್ತಾಯಿಸಿ ಎಪಿಎಂಸಿ ವರ್ತಕರು ಎಸಿ ಕಚೇರಿ ಸಿಬ್ಬಂದಿ ಅಮರೇಶಗೆ ಸೋಮವಾರ ಮನವಿ ಸಲ್ಲಿಸಿದರು.

ಮಾರುಕಟ್ಟೆ ಶುಲ್ಕ ವಿರೋಧಿಸಿ ಎಪಿಎಂಸಿ ವಹಿವಾಟು ಬಂದ್ ಮಾಡಿದಾಗ ಸರ್ಕಾರ ಮಾರುಕಟ್ಟೆ ಶುಲ್ಕ 1 ರೂ. ಇದ್ದುದನ್ನು ಶೇ.35 ಪೈಸೆಗೆ ನಿಗದಿಪಡಿಸಿ ಆದೇಶ ನೀಡಿದಾಗ ವರ್ತಕರಿಗೆ ಅನುಕೂಲವಾಗಿತ್ತು. ಆದರೆ, ಡಿ.10 ರಂದು ಏಕಾಏಕಿ ಶೇ.1 ರೂ.ಗೆ ಶುಲ್ಕ ಏರಿಕೆ ಮಾಡಿರುವುದು ವ್ಯಾಪಾರ ವಹಿವಾಟು ನಡೆಸಲು ತೊಂದರೆಯಾಗಿದೆ. ಕಳೆದ 6 ತಿಂಗಳಲ್ಲಿ ಮಾರುಕಟ್ಟೆ ಶುಲ್ಕ ಹೆಚ್ಚಿಸಿ ವ್ಯಾಪಾರಸ್ಥರಲ್ಲಿ ನಿರಾಸೆ ಮೂಡಿಸಿದೆ. ಕಾರಣ ಮೊದಲು ಪರಿಷ್ಕರಿಸಿದ ಆದೇಶದಂತೆ ಮತ್ತೆ ಶೇ.35 ಪೈಸೆಯಂತೆ ನಿಗದಿಪಡಿಸಿ ಗೆಜೆಟ್‌ನಲ್ಲಿ ಆದೇಶ ಹೊರಡಿಸಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

ಲಿಂಗಸುಗೂರು, ಮುದಗಲ್ ಎಪಿಎಂಸಿ ವರ್ತಕರಾದ ಮಹಾಂತೇಶ ನರಕಲದಿನ್ನಿ, ನಾಗರಾಜ ತಾವರಗೇರಾ, ಶಂಭುಲಿಂಗಪ್ಪ ಫೂಲಬಾವಿ, ಬಸವರಾಜಪ್ಪ ಮಾಟೂರು, ಪ್ರಭು ಅಮರಾವತಿ, ಅಮರಗುಂಡಯ್ಯ, ಕುಬೇರಪ್ಪ, ಶರಣಬಸವ, ಶ್ರೀನಿವಾಸ ಮುದಗಲ್, ಸುರೇಶ ಗಬ್ಬೂರು, ವೆಂಕಟೇಶ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net