ಸೆಸ್ಕ್ ಸಿಬ್ಬಂದಿ ಹೀಗಾ ಮಾಡೋದು? ಕೆಲಸ ಮಾಡುವಲ್ಲೇ ಆತ ಹೆಣವಾದ...

lineman death 1
Published on

ಮಂಡ್ಯ: ವಿದ್ಯುತ್​ ಕಂಬವೇರಿ ಟ್ರಾನ್ಸ್ ಫಾರ್ಮರ್ ದುರಸ್ಥಿ ಮಾಡುತ್ತಿದ್ದ ಲೈನ್​ಮನ್​ವೊಬ್ಬರು ಸೆಸ್ಕ್ ಸಿಬ್ಬಂದಿ ಮಾಡಿದ ಎಡವಟ್ಟಿನಿಂದಾಗಿ ಸ್ಥಳದಲ್ಲೇ ದುರಂತ ಸಾವಿಗೀಡಾಗಿದ್ದು, ಮತ್ತೊಬ್ಬರ ಸ್ಥಿತಿ ಗಂಭೀರವಾಗಿದೆ.

ಪಾಂಡವಪುರ ತಾಲೂಕಿನ ಹೊನಗಾನಹಳ್ಳಿ ಗ್ರಾಮದಲ್ಲಿ ಕೆಟ್ಟಿದ್ದ ಟ್ರಾನ್ಸ್ ಫಾರ್ಮರ್ ಅನ್ನು ಮಂಗಳವಾರ ಬೆಳಗ್ಗೆ ಲೈನ್​ಮನ್​ಗಳಾದ ಲೋಕೇಶ್ ಮತ್ತು ದಿನೇಶ್ ಎಂಬುವವರು ದುರಸ್ಥಿ ಮಾಡುತ್ತಿದ್ದರು. ದುರಸ್ಥಿಗೂ ಮುನ್ನ ಸೆಸ್ಕ್ ವಿದ್ಯುತ್​ ಕಚೇರಿಗೂ ಮಾಹಿತಿ ನೀಡಲಾಗಿತ್ತು. ಅದರಂತೆ ಇವರ ಪಾಡಿಗೆ ಇವರು ದುರಸ್ಥಿ ಕಾರ್ಯದಲ್ಲಿ ತಲ್ಲೀನರಾಗಿದ್ದರು. ಈ ವೇಳೆ ವಿದ್ಯುತ್ ವಿತರಣಾ ಕೇಂದ್ರದ ಸಿಬ್ಬಂದಿ ಈ ಲೈನ್​ಮನ್​ಗಳಿಗೆ ಮಾಹಿತಿಯನ್ನೂ ನೀಡದೆ ವಿದ್ಯುತ್ ಆನ್ ಮಾಡಿದ್ದಾರೆ ಎನ್ನಲಾಗಿದೆ.

ದುರಸ್ಥಿ ವೇಳೆಯೇ ವಿದ್ಯುತ್ ಪ್ರವಹಿಸಿದ್ದು, ಟ್ರಾನ್ಸ್ ಫಾರ್ಮರ್ ಮೇಲೆಯೇ ಲೋಕೇಶ್ (25) ಪ್ರಾಣ ಬಿಟ್ಟಿದ್ದಾರೆ. ಮತ್ತೊಬ್ಬ ಲೈನ್​ಮನ್ ದಿನೇಶ್ (24) ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರು ಗುತ್ತಿಗೆ ಆಧಾರಿತ ನೌಕರ. ಘಟನೆ ನಡೆದು ಒಂದೂವರೆಗೆ ಘಟನೆಯಾದರೂ ಸ್ಥಳಕ್ಕೆ ಸೆಸ್ಕ್ ಅಧಿಕಾರಿಗಳು ಭೇಟಿ ನೀಡಿರಲಿಲ್ಲ. ಚಿನಕುರುಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net