

lifestyle; ಇತ್ತೀಚಿನ ದಿನಗಳಲ್ಲಿ ಹಲವು ಜನರು ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿರುವ ಸಮಸ್ಯೆ ಹೆಚ್ಚಾಗಿದೆ. ಮೂತ್ರಪಿಂಡವು ನಮ್ಮ ದೇಹದಿಂದ ಮೂತ್ರದ ಮೂಲಕ ಕೊಳಕು ಮತ್ತು ಹೆಚ್ಚುವರಿ ನೀರನ್ನು ತೆಗೆದುಹಾಕುವ ಒಂದು ಭಾಗವಾಗಿದೆ. ಇದು ರಕ್ತವನ್ನು ಶುದ್ಧೀಕರಿಸುತ್ತದೆ ಮತ್ತು ದೇಹದಲ್ಲಿ ಖನಿಜಗಳು ಹಾಗೂ ನೀರಿನ ಸರಿಯಾದ ಸಮತೋಲನವನ್ನು ಕಾಯ್ದುಕೊಳ್ಳುತ್ತದೆ. ಇವುಗಳು ಸರಿಯಾಗಿ ಕಾರ್ಯನಿರ್ವಹಿಸಲು ವಿಫಲವಾದರೆ ತ್ಯಾಜ್ಯ ಮತ್ತು ವಿಷಕಾರಿ ವಸ್ತುಗಳು ದೇಹದಲ್ಲಿ ಸಂಗ್ರಹವಾಗಿ ಗಂಭೀರ ಸಮಸ್ಯೆಗಳು ಎದುರಿಸಬೇಕಾಗುತ್ತದೆ.
ನಮ್ಮ ದೇಹದಲ್ಲಿ ಪ್ರತಿದಿನ ನಿರಂತರವಾಗಿ ಕೆಲಸ ಮಾಡುವಂತಹ ಹೃದಯ, ಶ್ವಾಸಕೋಶ, ಮೆದುಳು ಮತ್ತು ಮೂತ್ರಪಿಂಡಗಳಂತಹ ಅನೇಕ ಭಾಗಗಳಿವೆ. ಇವುಗಳಲ್ಲಿ ಮೂತ್ರಪಿಂಡ ಒಂದು ಪ್ರಮುಖ ಭಾಗವಾಗಿದೆ. ಆದರೆ ಮೂತ್ರಪಿಂಡವು ಕ್ರಮೇಣ ಕ್ಷೀಣಿಸಲು ಪ್ರಾರಂಭಿಸಿದರೆ, ಅದರ ಪರಿಣಾಮವನ್ನು ದೇಹದ ಅನೇಕ ಭಾಗಗಳು ಅನುಭವಿಸಬೇಕಾಗುತ್ತದೆ. ಮೂತ್ರಪಿಂಡಗಳು ಸರಿಯಾಗಿ ಕಾರ್ಯನಿರ್ವಹಿಸದಿದ್ದಾಗ, ದೇಹದಲ್ಲಿ ವಿಷ, ಹೆಚ್ಚುವರಿ ನೀರು ಮತ್ತು ಖನಿಜಗಳ ಅಸಮತೋಲನವು ರೂಪುಗೊಳ್ಳುತ್ತದೆ. ಕಣ್ಣುಗಳು ದೇಹದ ಅತ್ಯಂತ ಸೂಕ್ಷ್ಮ ಭಾಗವಾಗಿರುವುದರಿಂದ ಇದು ಕಣ್ಣುಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ಹಾಗಾಗಿ ಮೂತ್ರಪಿಂಡ ವೈಫಲ್ಯದ ಮೊದಲು ನಿಮ್ಮ ಕಣ್ಣುಗಳು ಏನನ್ನು ಸೂಚಿಸುತ್ತವೆ ಎಂದು ತಿಳಿದುಕೊಳ್ಳೋಣ.
ಬೆಳಗ್ಗೆ ಎದ್ದ ತಕ್ಷಣ ನಿಮ್ಮ ಕಣ್ಣುಗಳ ಕೆಳಗೆ ದಿನವಿಡೀ ಊತವಿದ್ದರೆ, ಅದು ನಿದ್ರೆಯ ಕೊರತೆ ಅಥವಾ ಆಯಾಸ, ಮೂತ್ರಪಿಂಡ ವೈಫಲ್ಯವನ್ನು ಸೂಚಿಸುತ್ತದೆ. ಇದು ಕಣ್ಣುಗಳ ಸುತ್ತಲೂ ಊತವನ್ನು ಉಂಟುಮಾಡುತ್ತದೆ.
ಕಣ್ಣುಗಳು ಆಗಾಗ್ಗೆ ಒಣಗುತ್ತಿದ್ದರೆ, ಉರಿಯುತ್ತಿದ್ದರೆ ಅಥವಾ ತುರಿಕೆ ಉಂಟು ಮಾಡುತ್ತಿದ್ದರೆ, ಅದು ಮೂತ್ರಪಿಂಡದ ಸಮಸ್ಯೆಯಾಗಿರಬಹುದು. ದೇಹದಲ್ಲಿ ಹೆಚ್ಚು ವಿಷಕಾರಿ ವಸ್ತುಗಳು ಇದ್ದಾಗ ಅಥವಾ ಖನಿಜಗಳ ಸಮತೋಲನವು ತೊಂದರೆಗೊಳಗಾದಾಗ ಈ ಸಮಸ್ಯೆ ಕಂಡುಬರುತ್ತದೆ.
ಇದ್ದಕ್ಕಿದ್ದ ಹಾಗೆ ನಿಮ್ಮ ಕಣ್ಣುಗಳು ಆಗಾಗ್ಗೆ ಕೆಂಪು ಬಣ್ಣಕ್ಕೆ ತಿರುಗಿದರೆ ಅದು ಅಧಿಕ ರಕ್ತದೊತ್ತಡದಿಂದಾಗಿರಬಹುದು. ಇದು ಕೂಡ ಮೂತ್ರಪಿಂಡಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಕೆಲವು ಜನರಿಗೆ ಕ್ರಮೇಣ ನೀಲಿ ಮತ್ತು ಹಳದಿ ಬಣ್ಣಗಳನ್ನು ಗುರುತಿಸುವಲ್ಲಿ ಸಮಸ್ಯೆ ಕಂಡು ಬರುತ್ತದೆ. ಮೂತ್ರಪಿಂಡದ ಕಾಯಿಲೆಯು ಕಣ್ಣುಗಳ ನರಗಳು ಮೇಲೆ ಹಾನಿಯನ್ನುಂಟುಮಾಡಿದಾಗ ಇದು ಸಂಭವಿಸುತ್ತದೆ.
ನಿಮ್ಮ ದೃಷ್ಟಿ ಇದ್ದಕ್ಕಿದ್ದಂತೆ ಮುಸುಕಾಗಿ ಕಂಡುಬಂದರೆ, ಇದು ಮೂತ್ರಪಿಂಡದ ಕಾಯಿಲೆಗೆ ಸಂಬಂಧಿಸಿದ ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಿಂದ ಸಂಬಂಧಿಸಿದ ಕಾಯಿಲೆಯಾಗಿರಬಹುದು.ಇದು ಕಣ್ಣುಗಳ ನರಗಳ ಮೇಲೆ ನೇರ ಪರಿಣಾಮ ಬೀರುತ್ತವೆ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು ಹಾಗೂ ವಿವಿಧ ಪಠ್ಯಗಳಿಂದ ಸಂಗ್ರಹಿಸಲಾಗಿದೆ.
(ಏಜೆನ್ಸೀಸ್)
ಮೂತ್ರಪಿಂಡದ ಕಾಯಿಲೆಯು ದೇಹದಲ್ಲಿ ಆಯಾಸ ಮತ್ತು ದೌರ್ಬಲ್ಯವನ್ನು ಉಂಟುಮಾಡುತ್ತದೆ. ಇದು ನಿದ್ರೆಯ ಮೇಲೂ ಪರಿಣಾಮ ಬೀರುತ್ತದೆ. ನಿದ್ರೆಯ ಕೊರತೆಯಿಂದಾಗಿ, ಕಣ್ಣುಗಳ ಕೆಳಗೆ ಕಪ್ಪು ವೃತ್ತಗಳು ಕಾಣಿಸಿಕೊಳ್ಳುತ್ತವೆ.