ಪ್ರಾಣಿಗಳು ಹೇಗೆ ಅಪಾಯವನ್ನು ಮೊದಲೇ ಗ್ರಹಿಸುತ್ತವೆ ಎಂದು ತಿಳಿದರೆ ನಿಮ್ಮ ಹುಬ್ಬೇರೋದು ಖಚಿತ! Animals Sense Danger

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ನೈಸರ್ಗಿಕ ವಿಕೋಪಗಳು ಸಂಭವಿಸುವ ಕೆಲವು ಕ್ಷಣಗಳ ಮೊದಲು ಪ್ರಾಣಿಗಳು ವಿಚಿತ್ರವಾಗಿ ವರ್ತಿಸುತ್ತವೆ
  • ಮನುಷ್ಯರಿಗೆ ಮುಂಚಿತವಾಗಿ ತಿಳಿಯದ ಈ ಅಪಾಯಗಳನ್ನು ನಾಯಿಗಳು ಹೇಗೆ ಗ್ರಹಿಸಲ್ಲವು?
  • ಪ್ರಾಣಿಗಳಿಗೆ ನಿಜವಾಗಿಯೂ ಆರನೇ ಇಂದ್ರಿಯ ಏನಾದರೂ ಇದೆಯೇ?
Animals Sense Danger : ಪ್ರಾಣಿಗಳು, ಅದರಲ್ಲೂ ವಿಶೇಷವಾಗಿ ನಾಯಿಗಳು, ನೈಸರ್ಗಿಕ ವಿಕೋಪಗಳು ಸಂಭವಿಸುವ ಕೆಲವು ಕ್ಷಣಗಳು ಅಥವಾ ಗಂಟೆಗಳ ಮೊದಲು ವಿಚಿತ್ರವಾಗಿ ವರ್ತಿಸುವುದನ್ನು ಅನೇಕ ಜನರು ಗಮನಿಸಿದ್ದಾರೆ. ಅನಾಹುತದ ಮುನ್ಸೂಚನೆ ಸಿಕ್ಕಾಗ ನಾಯಿಗಳು ಕೂಗಬಹುದು, ಭಯದಿಂದ ಅಡಗಿಕೊಳ್ಳಬಹುದು ಅಥವಾ ಆತಂಕದಿಂದ ವರ್ತಿಸಬಹುದು. ಆಧುನಿಕವಾಗಿ ಮನುಷ್ಯ ಎಷ್ಟೇ ಮುಂದುವರಿದಿದ್ದರೂ ಮನುಷ್ಯರಿಗೆ ಮುಂಚಿತವಾಗಿ ತಿಳಿಯದ ಈ ಅಪಾಯಗಳನ್ನು ನಾಯಿಗಳು ಹೇಗೆ ಗ್ರಹಿಸಲ್ಲವು? ಅವುಗಳಿಗೆ ನಿಜವಾಗಿಯೂ ಆರನೇ ಇಂದ್ರಿಯ ಏನಾದರೂ ಇದೆಯೇ? ಎಂಬ ಪ್ರಶ್ನೆ ಮೂಡಬಹುದು. ಅದಕ್ಕೆ ಉತ್ತರ ಇಲ್ಲಿದೆ.

ಶ್ರವಣ

ನಾಯಿಗಳ ಕಿವಿಗಳು ತುಂಬಾ ಶಾರ್ಪ್​. ಮಾನವರು ಕೇಳಿಸಿಕೊಳ್ಳಬಹುದಾದ ಶಬ್ಧದ ಫ್ರೀಕ್ವೆನ್ಸಿಗಿಂತ ತುಂಬಾ ಕಡಿಮೆ ಮತ್ತು ಅತಿ ಹೆಚ್ಚಿನ ಫ್ರೀಕ್ವೆನ್ಸಿ ಹೊಂದಿರುವ ಶಬ್ಧಗಳನ್ನು ನಾಯಿಗಳು ಕೇಳಿಸಿಕೊಳ್ಳಬಲ್ಲವು. ಭೂಕಂಪಗಳಂತಹ ವಿಪತ್ತುಗಳು ಸಂಭವಿಸುವ ಮೊದಲು ನೆಲದಡಿಯಲ್ಲಿ ಸಂಭವಿಸುವ "ಇನ್ಫ್ರಾಸೌಂಡ್" ಬಹಳ ಕಡಿಮೆ ಆವರ್ತನದ ಶಬ್ದಗಳಾಗಿರುತ್ತವೆ. ಹೀಗಾಗಿ ನೆಲದಡಿಯಲ್ಲಿ ಸಂಭವಿಸುವ ಸಣ್ಣ ಕಂಪನಗಳನ್ನು ಕೂಡ ನಾಯಿಗಳು ಸುಲಭವಾಗಿ ಪತ್ತೆ ಮಾಡಬಲ್ಲದು.

ವಾಸನೆ

ನಾಯಿಗಳು ಮನುಷ್ಯರಿಗಿಂತ ಸಾವಿರಾರು ಪಟ್ಟು ಹೆಚ್ಚಿನ ವಾಸನೆ ಗ್ರಹಿಕೆಯ ಸಾಮರ್ಥ್ಯವನ್ನು ಹೊಂದಿರುತ್ತವೆ. ಬಿರುಗಾಳಿಗಳು ಅಥವಾ ಹವಾಮಾನದಲ್ಲಿನ ಪ್ರಮುಖ ಬದಲಾವಣೆಗಳ ಸಮಯದಲ್ಲಿ ಗಾಳಿಯಲ್ಲಿನ ರಾಸಾಯನಿಕ ಅಥವಾ ಓಝೋನ್ ಬದಲಾವಣೆಗಳನ್ನು ಅಥವಾ ಭೂಮಿಯ ಒಳಭಾಗದಿಂದ ಹೊರಹೊಮ್ಮುವ ಅನಿಲಗಳ ವಾಸನೆಯನ್ನು ನಾಯಿಗಳು ಸ್ಪಷ್ಟವಾಗಿ ಪತ್ತೆ ಮಾಡಬಲ್ಲವು. ಮಾನವನ ಮೆದುಳಿಗೆ ಈ ಬದಲಾವಣೆಗಳನ್ನು ವಿಶ್ಲೇಷಿಸಲು ಸಾಧ್ಯವಾಗದಿದ್ದರೂ, ನಾಯಿಗಳಿಗೆ ಮಾತ್ರ ಸ್ಪಷ್ಟ ಅಪಾಯದ ಸಂಕೇತಗಳಾಗಿ ಕಾರ್ಯನಿರ್ವಹಿಸುತ್ತವೆ.
ಅಂದಹಾಗೆ, ನಾಯಿಗಳು ತಮ್ಮ ಸಾಮಾನ್ಯ ಇಂದ್ರಿಯಗಳ ಜೊತೆಗೆ ವಾಯುಭಾರ ಮಾಪನದ ಒತ್ತಡದಲ್ಲಿನ ಸೂಕ್ಷ್ಮ ಬದಲಾವಣೆಗಳನ್ನು ಬಹಳ ಬೇಗನೆ ಪತ್ತೆಹಚ್ಚುತ್ತವೆ. ಬಿರುಗಾಳಿಗಳು ಅಥವಾ ಭಾರೀ ಮಳೆಯ ಮೊದಲು ಗಾಳಿಯ ಒತ್ತಡ ತುಂಬಾ ಕಡಿಮೆಯಾಗುತ್ತದೆ. ನಾಯಿಗಳು ಈ ಬದಲಾವಣೆಗಳನ್ನು ತಮ್ಮ ಕಿವಿಗಳ ಮೂಲಕ ತ್ವರಿತವಾಗಿ ಪತ್ತೆಹಚ್ಚುತ್ತವೆ ಮತ್ತು ಅದರಿಂದ ಆತಂಕಕ್ಕೆ ಒಳಗಾಗಿ ವಿಚಿತ್ರವಾಗಿ ವರ್ತಿಸಲು ಆರಂಭಿಸುತ್ತವೆ.
ಇನ್ನು ಭೂಕಂಪದಂತಹ ಘಟನೆಗಳ ಮೊದಲು ಭೂಮಿಯಿಂದ ಹೊರಸೂಸುವ ವಿದ್ಯುತ್ಕಾಂತೀಯ ತರಂಗಗಳಲ್ಲಿನ ಬದಲಾವಣೆಗಳನ್ನು ನಾಯಿಗಳು ಸುಲಭವಾಗಿ ಗ್ರಹಿಸಬಲ್ಲವು ಎಂದು ಕೆಲವು ಸಂಶೋಧನೆಗಳು ಸೂಚಿಸುತ್ತವೆ. ಈ ಕಾರಣಗಳಿಗಾಗಿ, ನಾಯಿಗಳು ಅಸಾಮಾನ್ಯ ನಡವಳಿಕೆಯನ್ನು ತೋರುತ್ತವೆ. ಇದು ಮುಂಬರುವ ವಿಪತ್ತುಗಳ ನೈಸರ್ಗಿಕ ಎಚ್ಚರಿಕೆಯಾಗಿ ಕಾರ್ಯನಿರ್ವಹಿಸುತ್ತದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net