

ಬೆಂಗಳೂರು: ಇಲ್ಲಿಯವರೆಗೆ ನೀವು ಅನೇಕ ರೀತಿಯ ಸಿಹಿತಿಂಡಿಗಳನ್ನು ಸೇವಿಸಿರುತ್ತೀರಿ. ಆದರೆ ಹಸಿ ಪಪ್ಪಾಯಿ ಬರ್ಫಿ ಸೇವಿಸಿದ್ದೀರಾ?, ಹೌದು, ಹಸಿ ಪಪ್ಪಾಯಿ ಬರ್ಫಿ ಬಹುತೇಕ ಕಡೆ ಜನಪ್ರಿಯ ತಿನಿಸು. ಹಾಗಾದರೆ ಇದನ್ನು ಮಾಡುವುದು ಹೇಗೆಂದು ತಿಳಿಯೋಣ ಬನ್ನಿ...
ಬೇಕಾಗುವ ಪದಾರ್ಥಗಳು
2 ಕೆಜಿ ಹಸಿ ಪಪ್ಪಾಯಿ
3 ಟೇಬಲ್ ಸ್ಪೂನ್ ಕತ್ತರಿಸಿದ ಒಣ ಹಣ್ಣುಗಳು
1 ಪಿಂಚ್ ಫುಡ್ ಕಲರ್
10 ಟೇಬಲ್ ಸ್ಪೂನ್ ಹಾಲಿನ ಪುಡಿ
4 ಬೌಲ್ ಸಕ್ಕರೆ
4 ಟೇಬಲ್ ಸ್ಪೂನ್ ದೇಸಿ ತುಪ್ಪ
ಮಾಡುವ ವಿಧಾನ
ಮೊದಲಿಗೆ ನೀವು ಪಪ್ಪಾಯಿಯನ್ನು ಕತ್ತರಿಸಿ ಚೆನ್ನಾಗಿ ತುರಿಯಬೇಕು. ನಂತರ ಮಧ್ಯಮ ಉರಿಯಲ್ಲಿ ಪ್ಯಾನ್ ಅನ್ನು ಬಿಸಿ ಮಾಡಬೇಕು. ಅದಕ್ಕೆ ಈಗ ತುರಿದ ಪಪ್ಪಾಯಿ ಹಾಕಿ ಸ್ವಲ್ಪ ಹುರಿಯಿರಿ. ನಂತರ ಸಕ್ಕರೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ನಂತರ ಪ್ಯಾನ್ ಮುಚ್ಚಳ ಮುಚ್ಚಿ. ಸ್ವಲ್ಪ ಸಮಯದ ನಂತರ ದೇಸಿ ತುಪ್ಪ, ಹಾಲಿನ ಪುಡಿ, ಡ್ರೈ ಫ್ರೂಟ್ಸ್ ಸೇರಿಸಿ. ಇದು ಚೆನ್ನಾಗಿ ಬೆಂದ ನಂತರ ಗ್ಯಾಸ್ ಆಫ್ ಮಾಡಿ. ಈಗ ತಟ್ಟೆಗೆ ಸ್ವಲ್ಪ ತುಪ್ಪ ಸವರಿ ಸ್ವಲ್ಪ ತಣ್ಣಗಾದ ನಂತರ ಬೇಯಿಸಿದ ಹಸಿ ಪಪ್ಪಾಯಿ ಮಿಶ್ರಣವನ್ನು ಬಾಣಲೆಯಲ್ಲಿ ಹರಡಿ. ಅದನ್ನು ಅಂಟಲು ಬಿಡಿ. ಚಾಕುವಿನ ಸಹಾಯದಿಂದ ಕತ್ತರಿಸಿ ತೆಗೆಯಿರಿ.