

ವೈದ್ಯಕೀಯದಲ್ಲಿ ಪಿಸಿಒಎಸ್ ಪೂರ್ಣರೂಪ ಪಾಲಿಸಿಸ್ಟಿಕ್ ಓವರಿಸಿಂಡ್ರಮ್ ಪಿಸಿಓಎಸ್ ಒಂದು ಅಸ್ವಸ್ಥತೆಯಾಗಿದ್ದು, ಇದರಲ್ಲಿ ಮಹಿಳೆಯು ತಮ್ಮ ಸಂತಾನೋತ್ಪತ್ತಿ ವರ್ಷಗಳಲ್ಲಿ (12 ಮತ್ತು 51 ವರ್ಷಗಳ ನಡುವೆ) ಹಾರ್ವೇನುಗಳ ಅಸಮತೋಲನದಿಂದ ಪ್ರಭಾವಿತರಾಗುತ್ತಾರೆ. ಪುರುಷ ಹಾರ್ವೇನ್ಗಳ ಹೆಚ್ಚಳದಿಂದಾಗಿ ಮಹಿಳೆಯರು ಋತುಚಕ್ರದ ಅವಧಿಯನ್ನು ಬಿಟ್ಟುಬಿಡಬಹುದು. ಅನಿಯಮಿತ ಅಂಡೋತ್ಪತ್ತಿಯಾಗಿ ಗರ್ಭ ಧರಿಸಲು ಕಷ್ಟವಾಗುತ್ತದೆ. ಪಿಸಿಒಡಿ ಸಮಸ್ಯೆ ಎಂದರೇನು? ವೈದ್ಯಕೀಯದಲ್ಲಿ ಪೂರ್ಣರೂಪ ಪಾಲಿಸಿಸ್ಟಿಕ್ ಒವೇರಿಯನ್ ಡಿಸೀಸ್. ಪಿಸಿಓಡಿ ಒಂದು ವೈದ್ಯಕೀಯ ಸ್ಥಿತಿಯಾಗಿದ್ದು ಇದರಲ್ಲಿ ಮಹಿಳೆಯ ಅಂಡಾಶಯಗಳು ಹೆಚ್ಚಿನ ಸಂಖ್ಯೆಯಲ್ಲಿ ಬಲಿಯುವುದಿಲ್ಲ ಅಥವಾ ಭಾಗಶಃ ಪ್ರಬುದ್ಧ ಮೊಟ್ಟೆಗಳನ್ನು ಉತ್ಪತ್ತಿ ಮಾಡುತ್ತವೆ ಮತ್ತು ಕಾಲಾನಂತರದಲ್ಲಿ ಅಂಡಾಶಯದಲ್ಲಿ ಚೀಲಗಳಾಗಿ ಮಾರ್ಪಡುತ್ತವೆ. ಈ ಕಾರಣದಿಂದಾಗಿ ಅಂಡಾಶಯಗಳು ದೊಡ್ಡದಾಗುತ್ತವೆ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಪುರುಷ ಹಾರ್ವೇನುಗಳನ್ನು ಸ್ರವಿಸುತ್ತದೆ. ಇದು ಬಂಜೆತನ, ಅನಿಯಮಿತ ಋತುಚಕ್ರ, ಕೂದಲು ಉದುರುವಿಕೆ ಮತ್ತು ಅಸಹಜ ತೂಕವನ್ನು ಉಂಟುಮಾಡುತ್ತದೆ. ಪಿಸಿಒಡಿಯನ್ನು ಆಹಾರ ಮತ್ತು ಜೀವನಶೈಲಿಯ ಮಾರ್ಪಾಡುಗಳಿಂದ ನಿಯಂತ್ರಿಸಬಹುದು.
ಪ್ರ: ಪಿಸಿಒಎಸ್, ಪಿಸಿಒಡಿ ನಡುವಿನ ವ್ಯತ್ಯಾಸವೇನು ?
ಪಿಸಿಒಡಿ ಇರುವವರು ಗಮನಾರ್ಹ ಫಲವತ್ತತೆಯ ಸಮಸ್ಯೆಗಳನ್ನು ಹೊಂದಿರುವುದಿಲ್ಲ. ಪಿಸಿಒಎಸ್ ನಿಂದ ಬಳಲುತ್ತಿರುವ ಮಹಿಳೆಯರು ಮತ್ತೊಂದೆಡೆ ಬಂಜೆತನದೊಂದಿಗೆ ಹೋರಾಡುತ್ತಾರೆ. ಯೋಗವು ಪಿಸಿಒಎಸ್ ಅನ್ನು ಗುಣಪಡಿಸಲು ಸಾಧ್ಯವಾಗದಿದ್ದರೂ, ಕೆಲವೊಂದು ಪಿಸಿಒಎಸ್ ರೋಗವನ್ನು ತಡೆಗಟ್ಟುತ್ತದೆ. ಪಾಲಿಸಿಸ್ಟಿಕ್ ಓವರಿಸಿಸ್ ಸಿಂಡ್ರಮ್ ಎಂಬ ಸಾಮಾನ್ಯ ಸ್ತ್ರೀ ಅಂತಃಸ್ರಾವಕ ಅಸ್ವಸ್ಥತೆಯು ಅಂಡಾಶಯವು ಪುರುಷ ಹಾರ್ವೇನುಗಳನ್ನು ಅಧಿಕವಾಗಿ ಉತ್ಪಾದಿಸಲು ಕಾರಣವಾಗುತ್ತದೆ. ಇದರ ಪರಿಣಾಮವಾಗಿ ಅನಿಯಮಿತ ಋತುಚಕ್ರ ಅವಧಿ, ತೂಕ ಹೆಚ್ಚಾಗುವುದು ಮತ್ತು ಫಲವತ್ತತೆ ಮತ್ತು ಅಂಡೋತ್ಪತ್ತಿ ಸಮಸ್ಯೆಗಳು ಉಂಟಾಗುತ್ತವೆ. ಆದರೆ ಇತ್ತೀಚಿನ ಸಂಶೋಧನೆಯು ಪಿಸಿಒಎಸ್ ರೋಗಲಕ್ಷಣಗಳನ್ನು ನಿರ್ವಹಿಸಲು ಪರಿಣಾಮಕಾರಿ ಮಾರ್ಗವಾಗಿ ಯೋಗದ ನಿಯಮಿತ ಅಭ್ಯಾಸವನ್ನು ಸೂಚಿಸುತ್ತದೆ.
ಯೋಗವು ಪಿಸಿಒಡಿ ಸಮಸ್ಯೆ ನಿಯಂತ್ರಣಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಏಕೆಂದರೆ ಇದು ಹಾರ್ವೇನುಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇನ್ಸುಲಿನ್ ಪ್ರತಿರೋಧವನ್ನು ಕಡಿಮೆ ಮಾಡುತ್ತದೆ, ತೂಕ ನಿರ್ವಹಣೆಯಲ್ಲಿ ಸಹಾಯ ಮಾಡುತ್ತದೆ, ಒಟ್ಟಾರೆ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮವನ್ನು ಉತ್ತೇಜಿಸುತ್ತದೆ. ನಿರ್ದಿಷ್ಟ ಯೋಗ ಭಂಗಿಗಳು ಮತ್ತು ಉಸಿರಾಟದ ವ್ಯಾಯಾಮಗಳು ಅಂತಃಸ್ರಾವಕ ವ್ಯವಸ್ಥೆ ಮತ್ತು ಒತ್ತಡ ನಿಯಂತ್ರಣವನ್ನು ಗುರಿಯಾಗಿಸಿಕೊಂಡು, ಪಿಸಿಒಡಿ ರೋಗಲಕ್ಷಣಗಳನ್ನು ನಿವಾರಿಸುತ್ತದೆ. ವಾಸ್ತವವಾಗಿ, ಸ್ಥಿರವಾದ ಯೋಗಾಭ್ಯಾಸವು ಮುಟ್ಟಿನ ಫಲವತ್ತತೆಯನ್ನು ಹೆಚ್ಚಿಸುತ್ತದೆ ಮತ್ತು ದೀರ್ಘಾವಧಿಯ ತೊಡಕುಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ಸೂಚಿತ ಆಸನಗಳು : ಸರಳ ವ್ಯಾಯಾಮಗಳು. ತಾಡಾಸನ, ಕಟಿ ಚಕ್ರಾಸನ, ಪಾದ ಹಸ್ತಾಸನ, ಅರ್ಧಚಕ್ರಾಸನ, ತ್ರಿಕೋಣಾಸನ, ಪಾಶ್ವೋತ್ಥಾನಾಸನ, ಬದ್ದಕೋನಾಸನ, ಜಾನುಶಿರ್ಷಾಸನ, ಪಶ್ಚಿಮೋತ್ಥಾನಾಸನ, ಮಂಡೂಕಾಸನ, ನೌಕಾಸನ, ವಕ್ರಾಸನ, ಅರ್ಧ ಉಷ್ಟ್ರಾಸನ, ಮರ್ಕಟಾಸನ, ಅರ್ಧ ಹಲಾಸನ, ವಿಪರೀತ ಕರಣೀ, ಭುಜಂಗಾಸನ, ಶಲಭಾಸನ, ಶವಾಸನ.
ಗುರುಮುಖೇನ ಕಲಿತು ಆರು ತಿಂಗಳು ಅಭ್ಯಾಸ ಮಾಡಿ. ಹಾಮೋನ್ಗಳ ಮಟ್ಟವನ್ನು ಸಾಮಾನ್ಯಗೊಳಿಸಲು ಆಸನಗಳು ಸಹಾಯ ಮಾಡುತ್ತವೆ. ನಾಡಿ ಶೋಧನ ಪ್ರಾಣಾಯಾಮ ಮನಸ್ಸನ್ನು ಶಾಂತಗೊಳಿಸುತ್ತದೆ. ಸಾಧ್ಯವಾದರೆ ಆರು ಸೂರ್ಯನಮಸ್ಕಾರಗಳನ್ನು ಮಾಡಿ. ಆದರೆ ಹೊಟ್ಟೆಯ ಮೇಲೆ ತೀವೃ ಒತ್ತಡವನ್ನುಂಟು ಮಾಡುವ ಭಂಗಿಗಳನ್ನು ಅಭ್ಯಾಸ ಮಾಡಬೇಡಿ. ಮುದ್ರೆಗಳು: ವರುಣ ಮುದ್ರೆ 20 ನಿಮಿಷ. ವರುಣ ಮುದ್ರೆಯಲ್ಲಿ ಇಷ್ಟ ದೇವರು ಅಥವಾ ‘ಯಾ ಓಂ ವರುಣ ದೇವಾಯ ನಮಃ’ ಎಂದು 108 ಬಾರಿ 48 ದಿನ ಪಠಿಸಿ. ಜ್ಞಾನ ಮುದ್ರೆ 10 ನಿಮಿಷ, ಪ್ರಾಣಮುದ್ರೆ 10 ನಿಮಿಷ ಮಾಡಿ.