ಹೃದಯದ ಆರೋಗ್ಯ ಹೆಚ್ಚಿಸುವ ಯೋಗ-ಮುದ್ರೆ

Heart
Published on

# ಕಳೆದ ಐದು ವರ್ಷಗಳಿಂದ ಎದೆಯಲ್ಲಿ ಸಣ್ಣ ನೋವು ಮತ್ತು ಚುಚ್ಚುವ ಅನುಭವ ಆಗುತ್ತಿದೆ. ಇದೇ ಯೋಚಿಸುತ್ತಿರುವಂತಾಗಿದೆ. ಹೃದಯತಜ್ಞರ ಉಪಚಾರ ಪಡೆದಿದ್ದೇನೆ. ವಾಕ್ ಹೋಗುತ್ತೇನೆ. ಯಾವ ಯೋಗಾಸನಗಳನ್ನು ಮಾಡಬೇಕು ಮತ್ತು ಆಹಾರಕ್ರಮ ಹೇಗಿರಬೇಕೆಂದು ತಿಳಿಸಿ.

| ಶ್ರೀಧರಮೂರ್ತಿ ಬೆಂಗಳೂರು

ಪ್ರಥಮವಾಗಿ ನೀವು ಎದೆನೋವಿಗೆ ಸರಿಯಾದ ಕಾರಣವನ್ನು ಕಂಡುಹಿಡಿಯಿರಿ. ಎದೆಯನ್ನು ತೆರೆಯುವ, ಮತ್ತು ವಿಸ್ತರಿಸುವ ಮೂಲಕ ಎದೆಯ ಬಿಗಿತ, ನೋವನ್ನು ಕಡಿಮೆ ಮಾಡಲು ಯೋಗ ಸಹಾಯ ಮಾಡುತ್ತದೆ. ಇದು ಸಮಸ್ಯೆಯ ಕಾರಣವನ್ನು ಸರಿಪಡಿಸುವ ಮೂಲಕ ಕಳಪೆ ಭಂಗಿ, ಅತಿಯಾದ ಬಳಕೆ ಮತ್ತು ಸ್ನಾಯುಗಳ ಒತ್ತಡದ ಪರಿಣಾಮಗಳನ್ನು ಎದುರಿಸುತ್ತದೆ. ಯೋಗವು ನಿಮ್ಮ ಚಲನೆಯ ವ್ಯಾಪ್ತಿಯನ್ನು ಸುಧಾರಿಸುತ್ತದೆ. ನಿಮ್ಮ ಎದೆಯ ಸ್ನಾಯುಗಳನ್ನು ವಿಸ್ತರಿಸುತ್ತದೆ. ನಮ್ಯತೆಯನ್ನು ಸುಧಾರಿಸುತ್ತದೆ. ಕೆಲವೊಮ್ಮೆ ಒತ್ತಡ, ಆತಂಕ ಮತ್ತು ಉದ್ವೇಗ ಕೂಡ ಎದೆನೋವಿಗೆ ಕಾರಣವಾಗಬಹುದು.

ಸೂಚಿತ ಆಸನ, ಮುದ್ರೆಗಳು: ತಾಡಾಸನ, ಅರ್ಧಚಕ್ರಾಸನ, ಬದ್ಧಕೋಣಾಸನ, ಪರ್ವತಾಸನ, ವಜ್ರಾಸನ, ಮಾರ್ಜಾಲಾಸನ, ಉತ್ಥಿತ ಏಕಪಾದಾಸನ, ಶವಾಸನ (ದಿನಕ್ಕೆ ಮೂರು ಬಾರಿ), ಮುಂಜಾನೆ ಹತ್ತು ನಿಮಿಷ ನಾಡಿಶುದ್ಧಿ ಪ್ರಾಣಾಯಾಮ ಮತ್ತು ಧ್ಯಾನ ಮಾಡಿ. ಹೃದಯಮುದ್ರೆಯಲ್ಲಿ 108 ಬಾರಿ ಓಂ ನಮಃ ಶಿವಾಯ ಎಂದು ಪಠಿಸಿ. ತಲಾ ಹತ್ತು ನಿಮಿಷ ಆಕಾಶಮುದ್ರೆ ಹಾಗೂ ಪ್ರಾಣಮುದ್ರೆ ಮಾಡಿ.

ಆಹಾರಕ್ರಮ: ಹಸಿವೆ ಆದಾಗ ಸತ್ತ ್ವುುತವಾದ ಸಾತ್ವಿಕ ಆಹಾರವನ್ನು ಸೇವಿಸಿ.

# ಹೃದಯಮುದ್ರೆಯ ಬಗ್ಗೆ ಸಂಕ್ಷಿಪ್ತ ಮಾಹಿತಿ ತಿಳಿಸಿ.

| ಶ್ರೀನಿವಾಸ ತರೀಕೆರೆ

ಮೃತಸಂಜೀವಿನಿ ಮುದ್ರೆ ಎಂದೂ ಕರೆಯಲ್ಪಡುವ ಇದು ಬಹಳ ಶಕ್ತಿಶಾಲಿ ಮುದ್ರೆಯಾಗಿದೆ. ಹೃದಯಘಾತದ ಸಂದರ್ಭದಲ್ಲಿ ಇದು ಜೀವ ಉಳಿಸುತ್ತದೆ ಎಂದು ಪ್ರಾಚೀನ ಭಾರತದಲ್ಲಿ ನಂಬಲಾಗಿತ್ತು. ಇದರಲ್ಲಿ ತೋರುಬೆರಳನ್ನು ಮಡಿಸುವುದರಿಂದ ಗಾಳಿ ಅಂಶ ಕಡಿಮೆಯಾಗುತ್ತದೆ. ಇದು ನೋವು ನಿವಾರಿಸಲು ಮತ್ತು ದೇಹ ಮತ್ತು ಮನಸ್ಸನ್ನು ವಿಶ್ರಾಂತಿ ಮಾಡಲು ಸಹಾಯ ಮಾಡುತ್ತದೆ.

ಹೆಬ್ಬೆರಳು, ಮಧ್ಯದ ಬೆರಳು ಮತ್ತು ಉಂಗುರದ ಬೆರಳಿನ ಸಂಪರ್ಕವು ಬೆಂಕಿಯ ಅಂಶ ಮತ್ತು ಭೂಮಿಯ ಅಂಶವನ್ನು ಹೆಚ್ಚಿಸುತ್ತದೆ. ದೇಹವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಅಪದಮನಿಗಳಿಗೆ ಹೆಚ್ಚಿನ ಆಮ್ಲಜನಕವನ್ನು ಪೂರೈಸುತ್ತದೆ ಮತ್ತು ಹೃದಯದ ಶಕ್ತಿಯನ್ನು ಹೆಚ್ಚಿಸುತ್ತದೆ. ಸುಮಾರು ಹತ್ತು ನಿಮಿಷದಿಂದ 30-40 ನಿಮಿಷಗಳ ತನಕ ಅಭ್ಯಾಸ ಮಾಡಬಹುದು.

ಪ್ರಯೋಜನ: ದುರ್ಬಲ ನಾಡಿಬಡಿತದ ಸಂದರ್ಭದಲ್ಲಿ ಈ ಮುದ್ರೆಯು ಚೇತರಿಕೆಗೆ ಸಹಕಾರಿಯಾಗುತ್ತದೆ. ಹೃದಯದ ಕಾಯಿಲೆಗಳಿಂದ ಬಳಲುತ್ತಿರುವವರು ನಿಯಮಿತವಾಗಿ ಈ ಮುದ್ರೆಯನ್ನು ಮಾಡಬೇಕು. ಮಲಬದ್ಧತೆ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆ ನಿಯಂತ್ರಣವಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net