

ಗರ್ಭಿಣೆಯರು ಯಾವೆಲ್ಲ ಆಸನ ಮಾಡಬಹುದು? ಉತ್ತಮ ಆರೋಗ್ಯ ಪಾಲನೆಗೆ ಬೇಕಾದ ಸೂತ್ರಗಳನ್ನು ತಿಳಿಸಿ.
| ಟಿ.ಎಂ. ರೂಪಾ
ತಕ್ಷಣ ಯೋಗ ಅಭ್ಯಾಸ ನಿಲ್ಲಿಸಿ.
ಸೂಚಿತ ಆಸನಗಳು: ತಾಡಾಸನ, ವೃಕ್ಷಾಸನ, ಉತ್ಕಟಾಸನ, ವೀರಭದ್ರಾಸನ ಅರ್ಧಕಟಿಚಕ್ರಾಸನ, ಬದ್ಧಕೋನಾಸನ, ವಜ್ರಾಸನ, ಮಾರ್ಜಾಲಾಸನ, ಭರದ್ವಾಜಾಸನ, ಸುಪ್ತವೀರಾಸನ (ತಲೆದಿಂಬಿನ ಸಹಾಯದಿಂದ), ಆರಂಭದ ಹಂತದ ಉಪವಿಷ್ಟ ಕೋನಾಸನ, ಬಾಲಾಸನ, ವಿಶ್ರಾಂತಿ ಆಸನ. ಇದರಿಂದ ಗರ್ಭಿಣಿಯರ ಪೆಲ್ವಿಸ್ ಮತ್ತು ಕಿರುಬೆನ್ನಿನ ಮಾಂಸಖಂಡಗಳಿಗೆ ಉತ್ತಮ ಬಲ ಸಿಗುತ್ತದೆ. ಈ ಆಸನಗಳಿಂದ ಪ್ರಸವವೇದನೆ ಬಹುಮಟ್ಟಿಗೆ ತಗ್ಗುತ್ತದೆ. ಕಿಬ್ಬೊಟ್ಟೆ, ಬೆನ್ನಿನ ಭಾಗ ಇವುಗಳಿಗೆಲ್ಲ ಸಾಕಷ್ಟು ರಕ್ತ ಪರಿಚಲನೆಯಾಗಿ ಅವೆಲ್ಲ ಹುರುಪುಗೊಂಡು ಶಕ್ತಿ ಪಡೆಯುತ್ತವೆ.
ಮುದ್ರೆಗಳು: ಪ್ರಾಣಮುದ್ರೆ, ವಾಯುಮುದ್ರೆ, ಚಿನ್ಮುದ್ರೆ. ಯೋಗಾಸನ, ಧ್ಯಾನವೇ ಮೊದಲಾದ ಚಟುವಟಿಕೆಗಳಲ್ಲದೆ ದೈಹಿಕ-ಮಾನಸಿಕ ಹಿತಕ್ಕೆ ಉತ್ತಮರ ಸಹವಾಸ, ಮೌಲ್ಯಯುತ ಪುಸ್ತಕಗಳ ಓದು, ಸಂಸ್ಕಾರಭರಿತ ಕಾರ್ಯಕ್ರಮಗಳ ವೀಕ್ಷಣೆ, ಸೂಕ್ತ ಆಹಾರ ಸೇವನೆ ಎಲ್ಲವನ್ನೂ ಗರ್ಭಿಣಿಯಾದವಳು ರೂಢಿಸಿಕೊಂಡರೆ ದೇಹ ಮನಸ್ಸುಗಳು ಉಲ್ಲಸಿತವಾಗಿರುತ್ತವೆ, ಆರೋಗ್ಯದಿಂದಿರುತ್ತವೆ.