

Growing Tall: ಮಕ್ಕಳ ಪ್ರತಿ ಬೆಳವಣಿಗೆಯ ಹಂತವನ್ನು ಪಾಲಕರು ನೋಡಿ ಖುಷಿ ಪಡುವುದು ಸಹಜ. ಕೆಲ ತಂದೆ ತಾಯಿಗಳ ತಮ್ಮ ಮಕ್ಕಳು ಎತ್ತರವಾಗಿ ಬೆಳೆಯುತ್ತಿಲ್ಲ ಎಂಬ ಕಾರಣಕ್ಕಾಗಿ ಚಿಂತಿತರಾಗಿರುತ್ತಾರೆ. ಸಾಮಾನ್ಯವಾಗಿ 70ರಿಂದ 80 ರಷ್ಟು ಅಂಶವು ಜೀನ್ಸ್ ನಿಂದ ನಿರ್ಧರಿಸುತ್ತದೆ ಎಂದು ಹೇಳಲಾಗುತ್ತದೆ. ಶೇ. 20ರಷ್ಟು ಅಂಶವು ಪೌಷ್ಟಿಕಾಂಶ ಮತ್ತು ಜೀವನಶೈಲಿಯ ಅಭ್ಯಾಸದಿಂದಾಗಿ ಮಕ್ಕಳು ಬೆಳವಣಿಗೆ ಹೊಂದುತ್ತಾರೆ ಎಂದು ಹೇಳಲಾಗುತ್ತದೆ.
ಹೌದು, ಮಕ್ಕಳ ಎತ್ತರ ಬೆಳೆಯುವುದು ಮುಖ್ಯವಾಗಿ ಸರಿಯಾದ ಆಹಾರ, ನಿದ್ರೆ ಮತ್ತು ವ್ಯಾಯಾಮದ ಮೂಲಕ ಅವರ ಎತ್ತರದ ಸಾಧ್ಯತೆಯನ್ನು ಹೆಚ್ಚಿಸಬಹುದು.
1.ಸಮತೋಲಿತ ಆಹಾರ
ಪ್ರೋಟೀನ್ (ಮಾಂಸ, ಹಾಲು), ಕ್ಯಾಲ್ಸಿಯಂ (ಹಾಲಿನ ಉತ್ಪನ್ನಗಳು), ವಿಟಮಿನ್ ಡಿ ಮತ್ತು ಇತರ ಗ್ರೋತ್ ಅಗತ್ಯ ನೈಟ್ರಿಷನ್ಸ್ ಅಗತ್ಯ. ಉದಾಹರಣೆಗೆ, ರೊಟ್ಟಿ, ತಿಂಡಿ, ಹಣ್ಣುಗಳು ಮತ್ತು ತರಕಾರಿಗಳು ಸೇರಿಸಿ.
2.ಅಗತ್ಯ ನಿದ್ರೆ
ಮಕ್ಕಳು ದಿನಕ್ಕೆ 9-12 ಗಂಟೆ ನಿದ್ರೆ ಪಡೆಯಬೇಕು, ಏಕೆಂದರೆ ಡೀಪ್ ಸ್ಲೀಪ್ ಸಮಯದಲ್ಲಿ ಬೆಳವಣಿಗೆ ಹಾರ್ಮೋನ್ ಬಿಡುಗಡೆಯಾಗುತ್ತದೆ.
3.ವ್ಯಾಯಾಮ ಮತ್ತು ಚಟುವಟಿಕೆ
ಸ್ಟ್ರೆಚಿಂಗ್, ಜಂಪಿಂಗ್, ಸ್ಪ್ರಿಂಟಿಂಗ್ ಅಥವಾ ಬಾಸ್ಕೆಟ್ಬಾಲ್ನಂತಹ ಆಟಗಳು ಸಹಾಯ ಮಾಡುತ್ತವೆ. ದಿನಕ್ಕೆ ಕನಿಷ್ಠ 1 ಗಂಟೆ ಚಟುವಟಿಕೆ ಮಾಡಿ, ಕುಳಿತುಕೊಳ್ಳುವ ಸಮಯ ಕಡಿಮೆ ಮಾಡಿ.
4.ಸಕ್ಕರೆಯನ್ನು ಕಡಿಮೆ ಮಾಡಿ: ಅತಿಯಾದ ಸಕ್ಕರೆ ಬೆಳವಣಿಗೆಯನ್ನು ತಡೆಯಬಹುದು.
5.ಮನೆಯಲ್ಲಿ ಸುರಕ್ಷಿತ ಮತ್ತು ಒತ್ತಡರಹಿತ ವಾತಾವರಣ: ಒತ್ತಡವು ಬೆಳವಣಿಗೆಯನ್ನು ಪ್ರತಿಬಂಧಿಸಬಹುದು. ಇವುಗಳನ್ನು ಅನುಸರಿಸುವುದರಿಂದ ಮಕ್ಕಳು ತಮ್ಮ ಸ್ವಾಭಾವಿಕ ಎತ್ತರವನ್ನು ಸಾಧಿಸಬಹುದು.ಯಾವುದೇ ಆರೋಗ್ಯ ಸಮಸ್ಯೆಗಳಿದ್ದರೆ ವೈದ್ಯರನ್ನು ಸಂಪರ್ಕಿಸಿ.(ಏಜೆನ್ಸೀಸ್)
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ