ವಿಶ್ವ ಕ್ಯಾನ್ಸರ್​ ಜಾಗೃತಿ ದಿನ: ಉತ್ತಮ ಜೀವನಶೈಲಿ ಅಳವಡಿಸಿಕೊಳ್ಳಿ

cancer feb 04 2020
Published on
ಮಾರಕ ಕ್ಯಾನ್ಸರ್​ಗೆ ತಂಬಾಕು ಶೇ.40 ಕಾರಣವಾದರೆ, ಶೇ.20 ಒತ್ತಡ ಹಾಗೂ ಚಟುವಟಿಕೆ ರಹಿತ ಬದಲಾದ ಜೀವನ ಶೈಲಿಯಾಗಿದೆ. ಶೇ.20 ವಂಶವಾಹಿನಿಯಿಂದ ಬಂದರೆ, ಉಳಿದ ಶೇ.20 ನಿರ್ದಿಷ್ಟ ಕಾರಣವೇನೆಂದು ಹೇಳಲು ಸಾಧ್ಯವಿಲ್ಲ. ಹೀಗಾಗಿ ಕ್ಯಾನ್ಸರ್ ಬಾರದಂತೆ ತಡೆಯಲು ಉತ್ತಮ ಜೀವನಶೈಲಿ ಅಳವಡಿಸಿಕೊಳ್ಳಬೇಕು. ಆರೋಗ್ಯಕರ ಆಹಾರ ಸೇವನೆ, ವ್ಯಾಯಾಮ, ದೇಹಕ್ಕೆ ಅಗತ್ಯವಾದಷ್ಟು ನಿದ್ರೆ ಮತ್ತು ವಿಶ್ರಾಂತಿ ಪಡೆಯುವುದು, ಕುಟುಂಬ ಹಾಗೂ ಸ್ನೇಹಿತರೊಂದಿಗೆ ಅಮೂಲ್ಯವಾದ ಸಮಯ ಕಳೆಯುವುದು ಒಂದಾದರೆ, ಇವೆಲ್ಲವನ್ನೂ ಪಾಲಿಸಿಯೂ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಎಚ್ಚರ ವಹಿಸುವುದೂ ಅತ್ಯಗತ್ಯ. ನಿಯಮಿತ ಆರೋಗ್ಯ ತಪಾಸಣೆಯಿಂದ ಆರಂಭಿಕ ಹಂತದಲ್ಲೇ ರೋಗ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ಪಡೆದರೆ ಕ್ಯಾನ್ಸರ್​ನಿಂದ ಗುಣ ಹೊಂದಬಹುದು.

| ಡಾ.ಸಿ.ರಾಮಚಂದ್ರ ನಿರ್ದೇಶಕ, ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net