ಇಂದು ರಾಷ್ಟ್ರೀಯ ರಕ್ತಹೀನತೆ ದಿನ: ಹೆಚ್ಚಿನ ಮಹಿಳೆಯರು ರಕ್ತಹೀನತೆಯಿಂದ ಬಳಲುವುದೇಕೆ.? Anaemia

Anaemia
Published on

Anaemia | ಪ್ರತಿ ವರ್ಷ ಮಾರ್ಚ್​ 21 ರಂದು ರಾಷ್ಟ್ರೀಯ ರಕ್ತಹೀನತೆ ದಿನವನ್ನು ಆಚರಿಸಲಾಗುತ್ತದೆ. ದೇಹದಲ್ಲಿ ಕೆಂಪು ರಕ್ತ ಕಣಗಳು ಅಥವಾ ಹಿಮೋಗ್ಲೋಬಿನ್ ಕೊರತೆಯಿದ್ದಾಗ ಸಂಭವಿಸುವ ರಕ್ತಹೀನತೆಯ ಬಗ್ಗೆ ಎಲ್ಲರಲ್ಲಿ ಜಾಗೃತಿ ಮೂಡಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 5 ರ ಪ್ರಕಾರ, ಭಾರತದಲ್ಲಿ 15 ರಿಂದ 49 ವರ್ಷ ವಯಸ್ಸಿನ 57% ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ.

ಹಲವು ಕಾರಣಗಳಿಂದಾಗಿ ಪುರುಷರಿಗಿಂತ ಮಹಿಳೆಯರಲ್ಲಿ ರಕ್ತಹೀನತೆ ಹೆಚ್ಚಾಗಿ ಕಂಡುಬರುತ್ತದೆ. ಇದರಲ್ಲಿ ವಿವಿಧ ಅಂಶಗಳು ಪಾತ್ರವಹಿಸುತ್ತವೆ. ಗುರುಗ್ರಾಮ್‌ನ ಫೋರ್ಟಿಸ್ ಸ್ಮಾರಕ ಸಂಶೋಧನಾ ಸಂಸ್ಥೆಯ ಪ್ರಧಾನ ನಿರ್ದೇಶಕ ಮತ್ತು ಮುಖ್ಯ ಬಿ.ಎಂ.ಟಿ ಡಾ. ರಾಹುಲ್ ಭಾರ್ಗವ ಅವರು ಮಹಿಳೆಯರಲ್ಲಿಯೇ ಈ ಕೊರೆತೆ ಏಕೆ ಕಂಡು ಬರುತ್ತದೆ ಎಂಬ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದ್ದಾರೆ. ಪುರುಷರಿಗಿಂತ ಮಹಿಳೆಯರಲ್ಲಿ ರಕ್ತಹೀನತೆ ಹೆಚ್ಚು ಸಾಮಾನ್ಯವಾಗಿದೆ. ಲಿಂಗ ವ್ಯತ್ಯಾಸದ ಪ್ರಾಥಮಿಕವಾಗಿ ಜೈವಿಕ, ಪೌಷ್ಟಿಕಾಂಶ ಮತ್ತು ಸಾಮಾಜಿಕ-ಆರ್ಥಿಕ ಕಾರಣಗಳಿಂದಾಗಿ ಇದು ಕಂಡುಬರುತ್ತದೆ ಎಂದಿದ್ದಾರೆ.

ಮುಟ್ಟು ಮತ್ತು ಅದರ ಪರಿಣಾಮದ ನಿಯಮಿತವಾಗಿ ರಕ್ತಸ್ರಾವ ರಕ್ತ ಹೀನತೆಗೆ ಪ್ರಮುಖ ಕಾರಣವಾಗಿದೆ. ವಿಶೇಷವಾಗಿ ಋತುಸ್ರಾವ ಇರುವ ಮಹಿಳೆಯರಲ್ಲಿ ಭ್ರೂಣದ ಬೆಳವಣಿಗೆ ಅನುಕೂಲವಾಗುವಂತೆ ದೇಹಕ್ಕೆ ಹೆಚ್ಚಿನ ಕಬ್ಬಿಣದ ಅಗತ್ಯವಿರುವುದರಿಂದ ಗರ್ಭಧಾರಣೆಯು ಸಮಸ್ಯೆಯನ್ನು ಉಂಟು ಮಾಡುತ್ತದೆ. ಇದಲ್ಲದೆ, ಆಹಾರದ ಪರಿಸ್ಥಿತಿಗಳು ಅಥವಾ ನಿರ್ಬಂಧಗಳಿಂದಾಗಿ ಮಹಿಳೆಯರು ಸಾಮಾನ್ಯವಾಗಿ ಪುರುಷರಿಗಿಂತ ಕಡಿಮೆ ಕಬ್ಬಿಣಾಂಶವನ್ನು ಹೊಂದಿರುತ್ತಾರೆ, ವಿಶೇಷವಾಗಿ ಕಡಿಮೆ ಕಬ್ಬಿಣದ ಆಹಾರವನ್ನು ಸೇವಿಸುವರಲ್ಲಿ ಈ ಲಕ್ಷಣ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.

ರಕ್ತ ಹೀನತೆಗೆ ಕಾರಣವೇನು.?

ಮಹಿಳೆಯರಲ್ಲಿ ರಕ್ತಹೀನತೆಗೆ ಮತ್ತೊಂದು ಪ್ರಮುಖ ಕಾರಣವೆಂದರೆ ಕಳಪೆ ಆಹಾರ. ಹೆಚ್ಚಿನ ಮಹಿಳೆಯರು, ವಿಶೇಷವಾಗಿ ಕಡಿಮೆ ಆದಾಯ ಪಡೆಯುವ ವಾತಾವರಣದಲ್ಲಿ ವಾಸಿಸುತ್ತಿರುತ್ತಾರೆ. ಮಾಂಸ, ಎಲೆ ತರಕಾರಿಗಳು ಮತ್ತು ದ್ವಿದಳ ಧಾನ್ಯಗಳು ಸೇರಿದಂತೆ ಸಾಕಷ್ಟು ಪ್ರಮಾಣದ ಕಬ್ಬಿಣಾಂಶವಿರುವ ಆಹಾರವನ್ನು ಸೇವಿಸಲು ಅವರಿಂದ ಸಾಧ್ಯವಾಗುವುದಿಲ್ಲ. ಇದಲ್ಲದೆ ಕೆಂಪು ರಕ್ತ ಕಣಗಳ ಶೇಖರಣೆಗೆ ಬೇಕಾದ ವಿಟಮಿನ್ ಬಿ 12 ಮತ್ತು ಫೋಲಿಕ್ ಆಮ್ಲದಂತಹ ಇತರ ಪೋಷಕಾಂಶಗಳ ಕೊರತೆಗಳು ಸಹ ಈ ಸಮಸ್ಯೆಗೆ ಕಾರಣವಾಗುತ್ತವೆ. ಪೋಷಕಾಂಶಗಳ ಹೀರಿಕೊಳ್ಳುವಿಕೆಯ ಮೇಲೆ ಪರಿಣಾಮ ಬೀರುವ ಕರುಳು ಅಥವಾ ಮೂತ್ರಪಿಂಡ ಕಾಯಿಲೆಯಂತಹ ದೀರ್ಘಕಾಲದ ಕಾಯಿಲೆಗಳು ಕೆಲವು ಸಂದರ್ಭಗಳಲ್ಲಿ ರಕ್ತಹೀನತೆಗೆ ಕಾರಣವಾಗಬಹುದು.

ಮಹಿಳೆಯರು ಕಬ್ಬಿಣ, ಜೀವಸತ್ವಗಳು ಮತ್ತು ಖನಿಜಗಳನ್ನು ಒಳಗೊಂಡಿರುವ ಸಮತೋಲಿತ ಆಹಾರವನ್ನು ಸೇವಿಸಲು ಪ್ರೋತ್ಸಾಹಿಸಬೇಕಾಗಿದೆ.

ಈ ಸಮಸ್ಯೆಯನ್ನು ಎದುರಿಸಲು ವೈಯಕ್ತಿಕ ಮತ್ತು ಸಮುದಾಯ ಮಟ್ಟದಲ್ಲಿ ಕೆಲವು ಕ್ರಮಗಳನ್ನು ತೆಗೆದುಕೊಳ್ಳಬಹುದು.

ಆರಂಭಿಕ ಹಂತದಲ್ಲಿ ರಕ್ತಹೀನತೆಯನ್ನು ಗುರುತಿಸಲು ನಿಯಮಿತವಾಗಿ ಆರೋಗ್ಯ ತಪಾಸಣೆ ಅತ್ಯಗತ್ಯ.

ರಕ್ತಹೀನತೆಯನ್ನು ತಡೆಗಟ್ಟುವ ಮಾರ್ಗಗಳು :

ಆಹಾರ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಅಂಶಗಳನ್ನು ಪರಿಹರಿಸುವ ಮೂಲಕ, ಮಹಿಳೆಯರಲ್ಲಿ ರಕ್ತಹೀನತೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು. ಹಾಗೂ ಅವರ ಜೀವನದ ಗುಣಮಟ್ಟ ಮತ್ತು ಒಟ್ಟಾರೆ ಯೋಗಕ್ಷೇಮವನ್ನು ಹೆಚ್ಚಿಸಬಹುದು.

ಸರಿಯಾದ ಮುಟ್ಟಿನ ಆರೋಗ್ಯ ನಿರ್ವಹಣೆ ಮತ್ತು ಭಾರೀ ರಕ್ತಸ್ರಾವದಂತಹ ಪರಿಸ್ಥಿತಿಗಳಿಗೆ ಚಿಕಿತ್ಸೆ ನೀಡುವುದರಿಂದ ರಕ್ತಶ್ರಾವವನ್ನು ನಿಯಂತ್ರಿಸಬಹುದು. ಮಹಿಳೆಯರ ಪೋಷಣೆ ಮತ್ತು ಜಾಗೃತಿಯನ್ನು ಗುರಿಯಾಗಿರಿಸಿಕೊಂಡ ಸಾರ್ವಜನಿಕ ಆರೋಗ್ಯ ಕಾರ್ಯಕ್ರಮಗಳು ರಕ್ತಹೀನತೆಯ ಪ್ರಮಾಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.

ವಿಶೇಷವಾಗಿ ಗರ್ಭಾವಸ್ಥೆಯಲ್ಲಿ ಕಬ್ಬಿಣಾಂಶ ಮತ್ತು ಪೌಷ್ಠಿಕ ಆಹಾರಗಳಿಂದ ಕಬ್ಬಿಣದ ಕೊರತೆಯನ್ನು ತಡೆಯಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net