ಮಲಗುವ ಅರ್ಧ ಗಂಟೆಗೂ ಮುನ್ನ ಈ ಸರಳ ಕೆಲಸ ಮಾಡಿ 4 ತಿಂಗಳಲ್ಲಿ 25 ಕೆಜಿ ತೂಕ ಇಳಿಸಿಕೊಂಡ ಯುವತಿ! Weight Loss

Weight Loss
Published on

Weight Loss : ತೂಕ ಇಳಿಸಿಕೊಳ್ಳುವುದೆಂದರೆ ಸುಲಭದ ಮಾತಲ್ಲ. ಅದಕ್ಕಾಗಿ ದೃಢಸಂಕಲ್ಪ ಬೇಕು ಮತ್ತು ಇಷ್ಟದ ಆಹಾರಗಳನ್ನು ತ್ಯಾಗ ಮಾಡಬೇಕು. ಅಲ್ಲದೆ, ಸಾಕಷ್ಟು ಸವಾಲುಗಳನ್ನೂ ಎದುರಿಸಬೇಕು.

ಒಂದೇ ಕಡೆ ಕುಳಿತು ಮಾಡುವ ಕೆಲಸಗಳಿಂದಾಗಿ ನೂರರಲ್ಲಿ ತೊಂಬತ್ತೊಂಬತ್ತು ಜನರು ಅಧಿಕ ತೂಕದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ತಿನ್ನುವುದರಲ್ಲಿ ನಾವು ಮಾಡುವ ಮಿಸ್ಟೇಕ್ಸ್​ ಕೂಡ ಅಧಿಕ ತೂಕದ ಸಮಸ್ಯೆಯನ್ನು ಉಂಟುಮಾಡುತ್ತದೆ. ಆದರೆ, ಉತ್ತಮ ಆಹಾರ ಪದ್ಧತಿಯಿಂದ ಮಾತ್ರ ತೂಕವನ್ನು ನಿಯಂತ್ರಣ ಮಾಡಬಹುದು ಎಂದು ತಜ್ಞರು ಯಾವಾಗಲೂ ಹೇಳುತ್ತಲೇ ಇರುತ್ತಾರೆ.

ಕೆಲವು ಪ್ರಸಿದ್ಧ ವ್ಯಕ್ತಿಗಳು ಮತ್ತು ಸೆಲೆಬ್ರಿಟಿಗಳು ತೂಕ ಇಳಿಕೆ ಮಾಡುವ ಮೂಲಕ ಅನೇಕರಿಗೆ ಸ್ಫೂರ್ತಿ ನೀಡುತ್ತಿದ್ದಾರೆ. ಇತ್ತೀಚೆಗೆ ಯುವತಿಯೊಬ್ಬಳು ಅದೇ ವರ್ಗಕ್ಕೆ ಸೇರಿದ್ದಾಳೆ. ಆಕೆಯ ತೂಕ ಇಳಿಸುವ ಪ್ರಯಾಣವನ್ನು ನೋಡಿದರೆ, ಖಂಡಿತವಾಗಿಯೂ ನೀವು ಮೂಕವಿಸ್ಮಿತರಾಗುತ್ತೀರಿ. ಅದು ಹೇಗೆ ಅಷ್ಟೊಂದು ತೂಕ ಇಳಿಸಿಕೊಂಡರು ಎಂದು ನೀವು ಆಶ್ಚರ್ಯ ಪಡುತ್ತೀರಿ.

ಸೋಶಿಯಲ್​ ಮೀಡಿಯಾ ಇನ್ಫ್ಲುಯೆನ್ಸರ್​ ಅಮಕಾ ಎಂಬುವರು ಕೇವಲ ನಾಲ್ಕು ತಿಂಗಳಲ್ಲಿ ಇಪ್ಪತ್ತೈದು ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಅದು ಹೇಗೆ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಅಮಕಾ, ತನ್ನ ತೂಕ ಇಳಿಸುವ ಪ್ರಯಾಣ ಕುರಿತಾದ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಅಮಕಾ ಅವರು ಮುಖ್ಯವಾಗಿ ತನ್ನ ಆಹಾರದಲ್ಲಿ ಐದು ವಿಷಯಗಳನ್ನು ಸೇರಿಸಿಕೊಂಡಿದ್ದಾರೆ. ಇವುಗಳಲ್ಲಿ ಒಂದನ್ನು ಮಾತ್ರ ಮಗುವ ಅರ್ಧ ಗಂಟೆಗೂ ಮುನ್ನ ನಿಯಮಿತವಾಗಿ ಕುಡಿಯುತ್ತಾರೆ. ಅದೇನು ಅಂತಾ ನಾವೀಗ ತಿಳಿಯೋಣ.

ಬೆಚ್ಚಗಿನ ನಿಂಬೆ ನೀರು

ಇದು ಅತ್ಯಂತ ಸುಲಭವಾದ ವಿಧಾನ. ಬೆಚ್ಚಗಿನ ನೀರು + ನಿಂಬೆ ಸಂಯೋಜನೆ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಹೊಟ್ಟೆ ಉಬ್ಬರವನ್ನು ಕಡಿಮೆ ಮಾಡುತ್ತದೆ. ಇದು ನಿಮಗೆ ಹಗುರವಾದ ಅನುಭವ ನೀಡುತ್ತದೆ. ಮಧ್ಯಮ ಗಾತ್ರದ ನಿಂಬೆಹಣ್ಣಿನ ರಸವನ್ನು ಒಂದು ಕಪ್ ಬೆಚ್ಚಗಿನ ನೀರಿನಲ್ಲಿ ಬೆರೆಸಿ ಮಲಗುವ ಅರ್ಧ ಗಂಟೆ ಮೊದಲು ಕುಡಿಯಿರಿ.

ದಾಲ್ಚಿನ್ನಿ ಚಹಾ

ದಾಲ್ಚಿನ್ನಿ ನಿಮ್ಮ ರಕ್ತದಲ್ಲಿನ ಸಕ್ಕರೆಯನ್ನು ಸಮತೋಲನಗೊಳಿಸುತ್ತದೆ. ನೀವು ನಿದ್ದೆ ಮಾಡುವಾಗ ಕ್ಯಾಲೊರಿಗಳನ್ನು ಸುಡಲು ಇದು ಸಹಾಯ ಮಾಡುತ್ತದೆ. ಒಂದು ಕಪ್ ನೀರು + ಒಂದು ಚಮಚ ದಾಲ್ಚಿನ್ನಿ ಪುಡಿ ಅಥವಾ ಒಂದು ತುಂಡು ದಾಲ್ಚಿನ್ನಿಯನ್ನು ಐದು ನಿಮಿಷಗಳ ಕಾಲ ಕುದಿಸಿ. ಮಲಗುವ ಅರ್ಧ ಗಂಟೆ ಮೊದಲು ಇದನ್ನು ಕುಡಿಯಿರಿ.

ಶುಂಠಿ ಟೀ

ಶುಂಠಿ ನಿಮ್ಮ ಹೊಟ್ಟೆಯನ್ನು ಶಾಂತಗೊಳಿಸುತ್ತದೆ ಮತ್ತು ಕ್ಯಾಲೊರಿಗಳನ್ನು ಬರ್ನ್​ ಸಹಾಯ ಮಾಡುತ್ತದೆ. ಅಲ್ಲದೆ, ಚೆನ್ನಾಗಿ ನಿದ್ರೆ ಮಾಡಲು ಸಹ ಸಹಾಯ ಮಾಡುತ್ತದೆ. ಒಂದು ಕಪ್ ನೀರನ್ನು ಕುದಿಸಿ. ಅದಕ್ಕೆ ಒಂದು ಸಣ್ಣ ತುಂಡು ಶುಂಠಿ ಅಥವಾ ಎರಡು ಚಮಚ ತುರಿದ ಶುಂಠಿಯನ್ನು ಸೇರಿಸಿ. ನಂತರ ಸ್ವಲ್ಪ ಟ್ರೀನ್​ ಟೀ ಸೇರಿಸಿ 10 ನಿಮಿಷ ಕುದಿಸಿ. ನಂತರ ಅದನ್ನು ಕುಡಿಯಿರಿ.

ಆ್ಯಪಲ್ ಸೈಡರ್ ವಿನೆಗರ್ ಪಾನೀಯ

ಆ್ಯಪಲ್ ಸೈಡರ್ ವಿನೆಗರ್ ದೇಹದಿಂದ ವಿಷವನ್ನು ತೆಗೆದುಹಾಕುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಒಂದು ಕಪ್ ಬಿಸಿ ನೀರಿನಲ್ಲಿ ಒಂದು ಚಮಚ ಆಪಲ್ ಸೈಡರ್ ವಿನೆಗರ್ ಬೆರೆಸಿ ಮಲಗುವ ಅರ್ಧ ಗಂಟೆ ಮೊದಲು ಕುಡಿಯಿರಿ.

ಕ್ಯಾಮೊಮೈಲ್ ಚಹಾ

ಇದು ನಿದ್ರೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಒಂದು ಕಪ್ ಬಿಸಿ ನೀರಿನಲ್ಲಿ 1-2 ಚಮಚ ಕ್ಯಾಮೊಮೈಲ್ ಹೂವುಗಳನ್ನು ಹಾಕಿ, 5-10 ನಿಮಿಷಗಳ ಕಾಲ ಮುಚ್ಚಿಡಿ. ನಂತರ ಫಿಲ್ಟರ್ ಮಾಡಿ, ಐಚ್ಛಿಕವಾಗಿ ಜೇನುತುಪ್ಪ ಅಥವಾ ನಿಂಬೆ ಸೇರಿಸಿ ಸವಿಯಿರಿ.

ಅಮಕಾ ಅವರು ಇತರೆ ಹಲವಾರು ಸಲಹೆಗಳನ್ನು ಕೂಡ ಹಂಚಿಕೊಂಡಿದ್ದಾರೆ. ತೂಕ ಇಳಿಸಿಕೊಳ್ಳಲು ಇನ್ನೊಂದು ಮಾರ್ಗವೆಂದರೆ ಸಕ್ಕರೆಯನ್ನು ಕಡಿಮೆ ಮಾಡುವುದು. ಯುವತಿ ಪೇಸ್ಟ್ರಿ ಮತ್ತು ಸಿಹಿತಿಂಡಿಗಳನ್ನು ತಪ್ಪಿಸಿದ್ದಾರೆ. ಅಲ್ಲದೆ, ನಿತ್ಯವೂ ಚೆನ್ನಾಗಿ ವ್ಯಾಯಾಮ ಮಾಡುತ್ತಾರೆ. ಆಹಾರ ಮತ್ತು ವ್ಯಾಯಾಮದಷ್ಟೇ ನಿದ್ರೆಯೂ ಮುಖ್ಯ. ನೀವು ಚೆನ್ನಾಗಿ ನಿದ್ರೆ ಮಾಡಬೇಕು ಎಂದಿದ್ದಾರೆ. ಆದರೆ, ನೀವು ಏನೇ ಮಾಡಿದರೂ ಒಮ್ಮೆ ವೈದ್ಯರ ಸಲಹೆ ಪಡೆಯಲೇಬೇಕು ಎಂಬುದನ್ನು ಮಾತ್ರ ಮರೆಯಬೇಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net