

Anti-Inflammatory Diet : ತೂಕ ಇಳಿಸಿಕೊಳ್ಳುವ ಪ್ರಕ್ರಿಯೆ ಕಬ್ಬಿಣದ ಕಡಲೆಯಂತೆ. ಇದು ಸಾಮಾನ್ಯ ಆಹಾರ ಪದ್ಧತಿ ಮತ್ತು ಅಂತ್ಯವಿಲ್ಲದ ಸಲಹೆಗಳಿಂದ ತುಂಬಿದ ದೀರ್ಘ ಪ್ರಯಾಣದಂತೆ ಎಂದು ತಿಳಿಯಬಹುದು. ಕೆಲವೊಮ್ಮೆ ನಾವು ಸೇವಿಸುವ ಆಹಾರಗಳು ನಮ್ಮ ದೇಹದ ಪ್ರವೃತ್ತಿಯ ಮೇಲೆ ಸಂಪೂರ್ಣ ಪರಿಣಾಮವನ್ನು ಬೀರಬಹುದು. ಅದೇ ರೀತಿ ಇಲ್ಲೊಬ್ಬ ಪೌಷ್ಟಿಕತಜ್ಞೆ ಸಲೋನಿ ತಮ್ಮ ದಿನನಿತ್ಯದ ಆರೋಗ್ಯ ಪದ್ಧತಿಯಲ್ಲಿ ಉರಿಯೂತ ಆಹಾರವನ್ನು ಸೇವಿಸುವ ಮೂಲಕ ಕೇವಲ 3 ತಿಂಗಳಲ್ಲಿ 12 ಕೆ.ಜಿ ತೂಕ ಇಳಿಸಿಕೊಂಡಿರುವುದನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಸಲೋನಿ ಪ್ರತಿನಿತ್ಯ ಉರಿಯೂತ ಪಾನೀಯಗಳನ್ನು ಕುಡಿಯುವ ಮೂಲಕ ದಿನವನ್ನು ಪ್ರಾರಂಭಿಸುವುದಾಗಿ ತಿಳಿಸಿದ್ದಾರೆ. ಪಾರ್ಸಿ, ಶುಂಠಿ ರಸ, ನಿಂಬೆ, ಅರಿಶಿಣದ ಹಾಲು, ಮೂಳೆ ಸಾರು, ಬ್ರೆರಿ ಸ್ಮೂಥಿಗಳನ್ನು ಕುಡಿಯುವುದಾಗಿ ತಿಳಿಸಿದ್ದಾರೆ.
ಸಲೋನಿ ಅವರು ಪಾನೀಯ ಕುಡಿದ ನಂತರ ಅರ್ಧ ತಾಸು ಬಿಟ್ಟು ನೆನಸಿದ ಬಾದಾಮಿಯನ್ನು ಸೇವಿಸುವುದಾಗಿ ತಿಳಿಸಿದ್ದಾರೆ. ಇವು ದೇಹದಲ್ಲಿ ಪೌಷ್ಟಿಕಾಂಶವನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಹಾಗೆಯೇ, ಜೀರ್ಣಕ್ರಿಯೆಗೆ ಸುಲಭವಾಗುತ್ತದೆ. ಇದು ನಿಮ್ಮನ್ನು ಹೊಟ್ಟೆ ತುಂಬಿಸುವಂತೆ ಮಾಡುವುದರಿಂದ ಪದೇ ಪದೇ ಹಸಿವಾಗುವುದನ್ನು ನಿಲ್ಲುಸುತ್ತದೆ.
ಕೆಲವೊಮ್ಮೆ ದೇಹಕ್ಕೆ ಬೇಕಾದ ಪೋಷಕಾಂಶಗಳು ಕಡಿಮೆಯಾದಾಗ ಚರ್ಮಗಳು ಮಂಕಾಗುವುದು ಅಥವಾ ಸುಕ್ಕುಗಟ್ಟುತ್ತವೆ. ಹಾಗಾಗಿ ಓಟ್ಸ್ ಹಾಲು, ಹಸಿರು ಚಹಾ, ಹಣ್ಣಿನ ರಸ, ತೆಂಗಿನ ನೀರು, ಸೌತೆಕಾಯಿ ಹಾಗೂ ತಂಪು ಪಾನೀಯಗಳನ್ನು ಸೇವಿಸುವುದರಿಂದ ದೇಹವು ಹೈಡ್ರೇಟ್ ಆಗಿ ಚರ್ಮವನ್ನು ಒಣಗದಂತೆ ತಡೆಯುತ್ತದೆ. ಇದು ನಿಮ್ಮ ವಿನ್ಯಾಸವನ್ನು ಸುಧಾರಿಸಬಹುದು.
ಜಂಕ್ ಫುಡ್ ಅಥವಾ ಮಸಾಲಯುಕ್ತ ಆಹಾರಗಳನ್ನು ಸೇವಿಸುವುದರ ಬದಲಿಗೆ ಪ್ರೋಟೀನ್ ಭರಿತ ಆಹಾರವನ್ನು ಸೇವಿಸುವುದರಿಂದ ದೇಹದಲ್ಲಿ ಬೊಜ್ಜು ಉತ್ಪತ್ತಿಯಾಗುವುದಿಲ್ಲ. ಹಾಗೆಯೇ ನಿಮ್ಮ ತೂಕವು ಹೆಚ್ಚಾಗುವುದಿಲ್ಲ. ಹಾಗಾಗಿ ಕಡಲೆ, ಬೇಳೆ, ಮೊಟ್ಟೆ, ವಾಲ್ನಟ್ಸ್, ಕುಂಬಳಕಾಯಿ ಬೀಜಗಳು, ಹಾಲಿನಂತಹ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ದೇಹದಲ್ಲಿ ಹಲವಾರು ಬದಲಾವಣೆಗಳನ್ನು ಕಾಣಬಹುದಾಗಿದೆ.
ಸಲೋನಿ ಅವರು ಆರೋಗ್ಯಕರವಾಗಿ ಇರಲು ಮಧ್ಯಾಹ್ನದ ಸಮಯದಲ್ಲಿ ಸೇಬು, ಬೀಟ್ರೂಟ್ ಹಾಗೂ ಕ್ಯಾರೇಟ್ನಿಂದ ಮಾಡಿದ ಜ್ಯೂಸ್ನ್ನು ಕುಡಿಯುವುದಾಗಿ ತಿಳಿಸಿದ್ದಾರೆ. ಇದು ಜೀವಸತ್ವಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುವುದರಿಂದ ನಿರ್ವಿಶೀಕರಣ ಮತ್ತು ಶಕ್ತಿಯ ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಪೌಷ್ಟಿಕತಜ್ಞೆ ಪ್ರಕಾರ ಮಧ್ಯಾಹ್ನದ ಊಟದಲ್ಲಿ ಸೌತೆಕಾಯಿ, ಕ್ಯಾರೆಟ್, ಮೂಲಂಗಿ, ಹಸಿರು ತರಕಾರಿಗಳನ್ನು ಸೇವಿಸುವುದರಿಂದ ದೇಹಕ್ಕೆ ಯಾವುದೇ ರೀತಿಯಲ್ಲೂ ತೊಂದರೆ ಉಂಟಾಗುವುದಿಲ್ಲ. ಹಾಗೆಯೇ ಫೈಬರ್ ಇರುವಂತಹ ತರಕಾರಿಗಳನ್ನು ಸೇವಿಸುವುದರಿಂದ ಜೀರ್ಣಕ್ರಿಯೆಗೆ ಸಹಾಯವಾಗುತ್ತದೆ ಎಂದು ತಿಳಿಸಿದ್ದಾರೆ.
ಸಂಜೆಯ ವೇಳೆ ಮಹಿಳೆಯರು ತಮ್ಮ ಋತುಚಕ್ರದ ಮೊದಲ 13-14 ದಿನಗಳ ವರೆಗೆ ದಿನಕ್ಕೆ 1 ಚಮಚ ಪುಡಿಮಾಡಿದ ಅಗಸೆ ಬೀಜಗಳು ಹಾಗೂ ಕುಂಬಳಕಾಯಿ ಬೀಜಗಳನ್ನು ಸೇವಿಸಿರಿ. ಹಾಗೂ ಋತುಚಕ್ರದ ದ್ವಿತೀಯಾರ್ಧದಲ್ಲಿ ದಿನಕ್ಕೆ 1 ಚಮಚ ಸೂರ್ಯಕಾಂತಿ ಬೀಜ ಹಾಗೂ ಕುಂಬಳಕಾಯಿ ಬೀಜಗಳನ್ನು ಸೇವಿಸಬೇಕು. ಇದು ನೈಸರ್ಗಿಕ ಹಾರ್ಮೋನುಗಳ ಸಮತೋಲನವನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ.
ರಾತ್ರಿ ಸಮಯದಲ್ಲಿ ಸ್ವಲ್ಪ ಊಟ ಮಾಡಬೇಕು ಎಂದು ಆರೋಗ್ಯ ತಜ್ಞರು ಸೂಚಿಸಿದ್ದಾರೆ. ಸಂಶೊಧನೆಗಳ ಪ್ರಕಾರ, ಬೇಯಿಸಿದ ಮಾಂಸ, ಚಿಕನ್, ಬ್ರೊಕೊಲಿ, ಎಲೆಕೋಸು ಇನ್ನು ಅಧಿಕ ಪೌಷ್ಟಿಕಾಂಶ ಇರುವಂತಹ ಆಹಾರಗಳನ್ನು ಸೇವಿಸುವುದರಿಂದ ದೇಹವನ್ನು ಫಿಟ್ ಆಗಿಡಲು ಸಹಾಯ ಮಾಡುತ್ತದೆ ಎಂದು ತಿಳಿಸಿದೆ.
ಕೊನೆಯದಾಗಿ ಕರುಳನ್ನು ಆರೋಗ್ಯವಾಗಿಡಲು ಹಾಗೂ ರಾತ್ರಿ ಪೂರ್ತೀ ಚೇತರಿಕೆಯನ್ನು ಉತ್ತೇಜಿಸುವ ಸಲುವಾಗಿ ಪ್ರತಿಜೀವಕ ಪಾನೀಯವನ್ನು ಸೇವಿಸಬೇಕು ಎಂದು ಸಲೋನಿಯವರು ತಿಳಿಸಿದ್ದಾರೆ. (ಏಜೆನ್ಸೀಸ್)ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.