ರುಚಿಗಷ್ಟೇ ಅಲ್ಲ ಅನಾರೋಗ್ಯಕ್ಕೂ ಮುಲಾಮು ಈ ಲವಂಗಾ; ಬಳಕೆ ಮಾಡೋದು ಹೇಗೆ?...Clove

Why You Should Add Cloves To Your Daily Routine
Why You Should Add Cloves To Your Daily Routine
Published on

ಪ್ರಮುಖ ಮುಖ್ಯಾಂಶಗಳು

  • ನಿತ್ಯ ಒಂದರಿಂದ ಎರಡು ಲವಂಗ ತಿನ್ನುವುದರಿಂದ ದೇಹಕ್ಕಾಗುವ ಪ್ರಯೋಜನವೇನು?
  • ಜೀರ್ಣಕ್ರಿಯೆ, ಬಾಯಿಯ ದುರ್ವಾಸನೆ ಹೋಗಾಲಾಡಿಸಲು ಲವಂಗ ಮದ್ದು
  • ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಿಸುವುದನ್ನು ತಡೆಯುವ ಲವಂಗ
Uses Of Eating Cloves: ಸಣ್ಣ ವಯಸ್ಸಿನಲ್ಲಿದ್ದಾಗ ಸಾಮಾನ್ಯವಾಗಿ ಹಲ್ಲು ನೋವು ಎಂದು ಅಮ್ಮನಿಗೆ ಅಥವಾ ಅಜ್ಜಿಗೆ ಮಾಹಿತಿ ಕೊಟ್ಟರೆ ಸಾಕು ಅಡುಗೆ ಮನೆಯಲ್ಲಿನ ಮಸಾಲೆ ಡಬ್ಬ ತೆಗೆದು ಅದರಿಂದ ಒಂದು ಲವಂಗ ತೆಗೆದುಕೊಟ್ಟು ನೋವಿರುವ ಬಳಿ ಗಟ್ಟಿ ಕಚ್ಚಿ ಹಿಡಿ ಅನ್ನೋರು. ಆದರೆ ಲವಂಗಾ ಆಹಾರ ರುಚಿಗೆ, ಹಲ್ಲು ನೋವಿಗೆ ಮಾತ್ರವಲ್ಲ, ದೇಹದ ಹಲವಾರು ಸಮಸ್ಯೆಗೆ ಈ ಮಸಾಲೆ ಪದಾರ್ಥ ರಾಮಬಾಣ.

ಲವಂಗ ತಿಂದ್ರೆ ಏನಾಗುತ್ತದೆ?

ನಮ್ಮ ದೇಹದಲ್ಲಿ ಕಾಣಿಸಿಕೊಳ್ಳುವ ಕೆಲವು ಪ್ರಾಥಮಿಕ  ಸಮಸ್ಯೆಗೆ ಮನೆಯಲ್ಲಿ ಬಳಕೆ ಮಾಡುವ ಕೆಲವು ಮಸಾಲೆ ಪದಾರ್ಥಗಳೇ ಮದ್ದು. ಅದರಲ್ಲಿ ಲವಂಗಾ ಕೂಡ ಒಂದು. ಇದರಲ್ಲಿರುವ ಆಂಟಿ ಆಕ್ಸಿಡೆಂಟ್​ ಹಾಗೂ ಪೋಷಕಾಂಶಗಳು ದೇಹಕ್ಕೆ ಸಹಕಾರಿ. ನಿತ್ಯ ಒಂದರಿಂದ ಎರಡು ಲವಂಗವನ್ನು ಸೇವಿಸಿದರೆ, ಜೀರ್ಣಕ್ರಿಯೆ , ಬಾಯಿ ವಾಸನೆ, ರಕ್ತದಲ್ಲಿನ ಸಕ್ಕರೆ ಮಟ್ಟ ಸೇರಿದಂತೆ ನಾನಾ ಸಮಸ್ಯೆ ತಡೆಗಟ್ಟಬಹುದಾಗಿದೆ.  ಹಾಗಾದರೆ ಇದನ್ನು ಬಳಕೆ ಮಾಡೋದು ಹೇಗೆ, ಯಾವ ಅನಾರೋಗ್ಯಕ್ಕೆ ಮದ್ದು ಎನ್ನುವುದನ್ನು ನೋಡೋಣ.

ಜೀರ್ಣಕ್ರಿಯೆ ಸುಧಾರಣೆ

ನಿತ್ಯ  ಒಂದು ಅಥವಾ ಎರಡು ಲವಂಗವನ್ನು ಜಗಿದು ತಿಂದರೆ ಅಥವಾ ನೀರಿನಲ್ಲಿ ಹಾಕಿ ನೆನಸಿಟ್ಟು ತಿಂದರೆ, ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್​, ಜೀರ್ಣಕ್ರಿಯೆ  ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿರುವವರಿಗೆ ರಾಮಬಾಣವಿದ್ದಂತೆ.

ರಕ್ತದಲ್ಲಿ ಸಕ್ಕರೆಮಟ್ಟ ಹೆಚ್ಚಳಕ್ಕೆ ತಡೆ

ಕೆಲವು ಅಧ್ಯಯನದ ವರದಿ ಪ್ರಕಾರ ಲವಂಗದಲ್ಲಿರುವ ಯೂಜಿನಾಲ್​ ಹಾಗೂ ಫ್ಲೇವನಾಯ್ಡ್​​ ಇನ್ಸಿಲಿನ್​​ ಅಂಶ ಕಾರ್ಯಕ್ಷಮತೆ ಸುಧಾರಿಸಲು ಕೆಲಸ ಮಾಡುತ್ತದೆ. ಇದರಿಂದಾಗಿ ರಕ್ತದಲ್ಲಿ ಸಕ್ಕರೆ ಮಟ್ಟ ಏರಿಕೆಯಾಗುವುದನ್ನು ತಡೆಯುತ್ತದೆ ಎನ್ನಲಾಗಿದೆ.

ಬಾಯಿಯ ವಾಸನೆ ಸುಧಾರಣೆ

ಲವಂಗದಲ್ಲಿರುವ ಸಾರಭೂತ ತೈಲವು ರೋಗನಿರೋಧಕ ಅಂಶ ಹೊಂದಿದೆ. ಇದು ಬಾಯಿಯ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಿ ಆಂಟಿ ಮೈಕ್ರೊಬಿಯಲ್​ ಆಗಿ ಕೆಲಸ ಮಾಡುತ್ತದೆ ಎನ್ನಲಾಗಿದೆ.

ಯಕೃತ್ತಿನ ಪೋಷಣೆ

ಲವಂಗದಲ್ಲಿ ಸಮೃದ್ಧವಾಗಿ ಇರುವ ಪಾಲಿಫಿನಾಲ್​ ಅಂಶ ಉತ್ಕರ್ಷಣ ನಿರೋಧಕವನ್ನು ಹೊಂದಿದೆ. ಇದು ಆಕ್ಸಿಡೇಟಿವ್​ ಒತ್ತಡ ಕಡಿಮೆ ಮಾಡುತ್ತದೆ. ನೀರು ಮತ್ತು ಪರಿಸರ ಮಾಲಿನ್ಯಕ್ಕೆ ದೇಹ ಒಡ್ಡಿಕೊಂಡಾ ಆಕ್ಸಿಡೇಟ್ ಮಟ್ಟ ಹೆಚ್ಚಾಗುತ್ತದೆ. ಮದ್ಯಪಾನ ಮತ್ತು ಆಹಾರ ಪದ್ಧರತಿಯ ಕೊರತೆಯಿಂದ ಕಾಡುವ ಯಕೃತ್ತಿನ ಸಮಸ್ಯೆಗೆ ಇವು ಬ್ರೇಕ್ ಹಾಕುತ್ತವೆ ಎನ್ನಲಾಗಿದೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net