

Bitter Gourd: ಸಾಮಾನ್ಯವಾಗಿ ಹಾಗಲಕಾಯಿ ಎಂದಾಕ್ಷಣ ಬಹುತೇಕರು ಮೂಗು ಮುರಿಯುತ್ತಾರೆ. ಆರೋಗ್ಯಕ್ಕೆ ಅತ್ಯುತ್ತಮ ಆಹಾರಗಳ ಪೈಕಿ ಹಾಗಲಕಾಯಿ ಮೊದಲು. ಗುಣದಲ್ಲಿ ಕಹಿಯಾದರೂ ಆರೋಗ್ಯಕ್ಕೆ ಮಾತ್ರ ಇದು ಸಿಹಿಯೇ. ಈ ತರಕಾರಿಯನ್ನು ನಮ್ಮ ದೈನಂದಿನ ಆಹಾರ ಕ್ರಮದಲ್ಲಿ ಸೇರಿಸಿಕೊಂಡರೆ ಬಹಳ ಉತ್ತಮ. ಮನುಷ್ಯನ ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಔಷಧೀಯ ಗುಣಗಳನ್ನು ಹಾಗಲಕಾಯಿ ಹೊಂದಿದೆ.
ಸಕ್ಕರೆ ಖಾಯಿಲೆಯಿಂದ ಬಳಲುತ್ತಿರುವವರಿಗೆ ಹಾಗಲಕಾಯಿ ಒಂದು ವರದಾನ ಎಂದೇ ಹೇಳಬಹುದು. ಇದನ್ನು ತಮ್ಮ ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳುವ ಮೂಲಕ, ಅನೇಕ ರೀತಿಯ ದೀರ್ಘ ಸಮಸ್ಯೆಗಳಿಗೆ ಗುಡ್ಬೈ ಹೇಳಬಹುದು. ಆದರೆ, ತಜ್ಞರು ಹೇಳುವಂತೆ ಹಾಗಲಕಾಯಿ ಎಷ್ಟೇ ಆರೋಗ್ಯಕರವಾಗಿದ್ದರೂ, ಅದನ್ನು ಇದ್ದಂತೆಯೇ ತಿನ್ನುವುದು ಒಳಿತು. ಆದರೆ, ನಮ್ಮಲ್ಲಿ ಹಲವರು ಹಾಗಲಕಾಯಿ ಜೊತೆಗೆ ಸಿಹಿಯಾದ ಪದಾರ್ಥ ಸೇರಿದಂತೆ ಹಾಲು ಮತ್ತು ಮೊಸರನ್ನು ಸೇರಿಸಿಕೊಳ್ಳುತ್ತಾರೆ. ಅಸಲಿಗೆ ಇದು ಡೇಂಜರ್ ಅನ್ನೋದು ನಿಮ್ಮ ಗಮನದಲ್ಲಿರಲಿ.
ಹಾಗಲಕಾಯಿಯೊಂದಿಗೆ ಇವುಗಳನ್ನು ಒಟ್ಟಿಗೆ ತಿನ್ನುವುದರಿಂದ ಅವು ದೇಹದಲ್ಲಿ ವಿಷಕಾರಿಯಾಗಬಹುದು. ಇದರಿಂದಾಗಿ, ಆರೋಗ್ಯ ಸಮಸ್ಯೆಗಳ ಅಪಾಯವಿದೆ. ಇದಕ್ಕೆ ಉತ್ತರವೂ ಇದೆ. ಯಾವ ಪದಾರ್ಥಗಳನ್ನು ಒಟ್ಟಿಗೆ ಸೇವಿಸಬಾರದು ಮತ್ತು ಏಕೆ? ಎಂಬ ಪ್ರಶ್ನೆಗೆ ಹೀಗಿದೆ ನೋಡಿ ಉತ್ತರ.
ಹಾಲು: ಹಾಗಲಕಾಯಿ ಹಾಲು ಮಿಶ್ರಣ ಸರಿಯಲ್ಲ. ಕಾರಣ, ಹಾಗಲಕಾಯಿಯಲ್ಲಿರುವ ವಿವಿಧ ಸಂಯುಕ್ತಗಳು ಹಾಲಿನಲ್ಲಿರುವ ಪ್ರೋಟೀನ್ ಅಂಶಗಳೊಂದಿಗೆ ರಿಯಾಕ್ಟ್ ಆಗಬಹುದು. ಇದರಿಂದಾಗಿ ಅವು ವಿಷಕಾರಿಯಾಗಿಯೂ ತಿರುಗಬಹುದು. ಅವುಗಳನ್ನು ಒಟ್ಟಿಗೆ ತಿನ್ನುವುದರಿಂದ ಹೊಟ್ಟೆ ನೋವು, ಮಲಬದ್ಧತೆ ಮತ್ತು ಹೊಟ್ಟೆಯ ಉರಿಯೂತದಂತಹ ಸಮಸ್ಯೆಗಳು ಕಾಡುತ್ತವೆ. ಹೀಗಾಗಿ ಹಾಲಿನ ಜೊತೆ ಹಾಗಲಕಾಯಿ ಬೆರೆಸುವುದು ಸೂಕ್ತವಲ್ಲ.
ಮೊಸರು: ಬಹುತೇಕರು ತಮ್ಮ ಊಟದ ಕೊನೆಯಲ್ಲಿ ಮೊಸರು ಕುಡಿಯುವ ರೂಢಿ ಹೊಂದಿದ್ದಾರೆ. ಅದೇ ರೀತಿ, ಹಾಗಲಕಾಯಿ ತಿನ್ನುವಾಗ, ಕೊನೆಯಲ್ಲಿ ಮೊಸರು ಸೇವಿಸುತ್ತಾರೆ. ಆದಾಗ್ಯೂ, ಹೀಗೆ ಮಾಡುವುದು ಅಪಾಯಕಾರಿ ಎಂದು ತಜ್ಞರು ಹೇಳುತ್ತಾರೆ. ಕಾರಣ, ಮೊಸರು ಮತ್ತು ಮಜ್ಜಿಗೆಯಲ್ಲಿ ಬಹಳಷ್ಟು ಲ್ಯಾಕ್ಟಿಕ್ ಆಮ್ಲವಿದೆ. ಹಾಗಲಕಾಯಿಯೊಂದಿಗೆ ಇವುಗಳನ್ನು ಒಟ್ಟಿಗೆ ಸೇವಿಸುವುದರಿಂದ ಚರ್ಮದ ಮೇಲೆ ದದ್ದುಗಳು, ತುರಿಕೆ ಮತ್ತು ಗುಳ್ಳೆಗಳು ಉಂಟಾಗಬಹುದು.
ಇದನ್ನೂ ಓದಿ: ಕಾಳಿಂಗನ ಹುಡುಕಾಟದಲ್ಲಿ ಆಶಿಕಾ : ಶುಕ್ರವಾರ ತೆರೆಗೆ ಬರಲಿದೆ ನಟಿಯ ‘ತಿಮ್ಮನ ಮೊಟ್ಟೆಗಳು’ ಸಿನಿಮಾಬೆಂಡೆಕಾಯಿ: ಹಾಗಲಕಾಯಿ ಜೀರ್ಣಕಾರಿ ಸಮಸ್ಯೆಗಳನ್ನು ಗುಣಪಡಿಸುವ ಗುಣವನ್ನೂ ಹೊಂದಿದೆ. ಆದ್ದರಿಂದ, ಈ ಎರಡನ್ನೂ ಒಟ್ಟಿಗೆ ತಿನ್ನುವುದರಿಂದ ಹೊಟ್ಟೆ ಉಬ್ಬರ ಉಂಟಾಗುತ್ತದೆ. ಕ್ರಮೇಣ, ಇದು ಹೊಟ್ಟೆ ನೋವು ಮತ್ತು ಅತಿಸಾರಕ್ಕೆ ಕಾರಣವಾಗಬಹುದು. ಆದ್ದರಿಂದ, ಈ ಎರಡು ತರಕಾರಿಗಳನ್ನು ಒಟ್ಟಿಗೆ ಸೇವಿಸುವ ಅಭ್ಯಾಸ ಇಂದೇ ಬಿಟ್ಟುಬಿಡಿ.
ಮಾವಿನ ಹಣ್ಣು: ಇದು ಬಹಳ ಡೇಂಜರ್. ಮಾವು-ಹಾಗಲಕಾಯಿ ಕಾಂಬಿನೇಷನ್ ಸರಿ ಹೊಂದುವುದಿಲ್ಲ. ಇದು ಹೆಚ್ಚು ವಿಷಕಾರಿ ಎಂದು ಹೇಳಲಾಗಿದೆ. ಇವುಗಳ ಮಿಶ್ರಣವು ವಾಂತಿ, ಹೊಟ್ಟೆಯೊಳಗೆ ಕಿರಿಕಿರಿ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ, ಹಾಗಲಕಾಯಿ ಆರೋಗ್ಯಕರ ತರಕಾರಿಯಾಗಿದ್ದರೂ, ಇತರ ವಸ್ತುಗಳೊಂದಿಗೆ ಬೆರೆಸಿದಾಗ ಅದು ವಿಷಕಾರಿಯಾಗಬಹುದು ಎಂದು ಹಲವು ವರದಿಗಳು ತಿಳಿಸಿವೆ,(ಏಜೆನ್ಸೀಸ್).