

Pockets : ಅನೇಕ ಜನರು ತಮ್ಮ ಒಳ ಉಡುಪುಗಳ ಬಗ್ಗೆ ಹೆಚ್ಚು ಗಮನ ಹರಿಸುವುದಿಲ್ಲವಾದರೂ ಒಳ ಉಡುಪುಗಳು ದೈನಂದಿನ ಜೀವನ ಮತ್ತು ನಮ್ಮ ಜೀವನಶೈಲಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಒಳ ಉಡುಪುಗಳಲ್ಲಿ ಅದರಲ್ಲೂ ವಿಶೇಷವಾಗಿ ಮಹಿಳೆಯರ ಒಳ ಉಡುಪುಗಳಲ್ಲಿ "ಪಾಕೆಟ್" ರೀತಿ ಕಾಣುವ ಭಾಗವನ್ನು ಗಸ್ಸೆಟ್ (gusset) ಎಂದು ಕರೆಯಲಾಗುತ್ತದೆ. ಇದನ್ನು ಏಕೆ ವಿನ್ಯಾಸ ಮಾಡಲಾಗಿದೆ ಎಂಬುದು ಬಹುತೇಕ ಮಂದಿಗೆ ತಿಳಿದೇ ಇಲ್ಲ.
ಗಸ್ಸೆಟ್ ಅನ್ನು ಏನನ್ನೂ ಸಂಗ್ರಹಿಸಲು ವಿನ್ಯಾಸಗೊಳಿಸಲಾಗಿಲ್ಲ ಆದರೆ, ಖಾಸಗಿ ಭಾಗಗಳಿಗೆ ಈ ಗಸ್ಸೆಟ್ ಆರಾಮ ಮತ್ತು ರಕ್ಷಣೆ ನೀಡಲು ವಿನ್ಯಾಸಗೊಳಿಸಲಾಗಿದೆ. ಅಲ್ಲದೆ, ಆರೋಗ್ಯ ದೃಷ್ಟಿಯಿಂದ ಇದನ್ನು ಮಾಡಲಾಗಿದೆ.
ಅಂದಹಾಗೆ, ಗಸ್ಸೆಟ್ ಅನ್ನು ಸಾಮಾನ್ಯವಾಗಿ ಹತ್ತಿಯಿಂದ ಮಾಡಲ್ಪಟ್ಟಿದ್ದು, ಖಾಸಗಿ ಭಾಗದಲ್ಲಿನ ತೇವಾಂಶವನ್ನು ಹೀರಿಕೊಂಡು ಗಾಳಿಯಾಡಲು ಅನುವು ಮಾಡಿಕೊಡುತ್ತದೆ. ಇದರ ಮೂಲಕ ಖಾಸಗಿ ಭಾಗಗಳನ್ನು ರಕ್ಷಿಸುತ್ತದೆ. ಇದರಿಂದಾಗಿ ಸೋಂಕಿನ ಅಪಾಯವನ್ನು ಕಡಿಮೆಯಾಗುತ್ತದೆ ಮತ್ತು ತುರಿಕೆಯನ್ನು ತಡೆಯುತ್ತದೆ.
ಹತ್ತಿಯ ಗಸ್ಸೆಟ್ ಮೃದುವಾದ ಮತ್ತು ಆರಾಮದಾಯಕವಾದ ಪದರವನ್ನು ಒದಗಿಸುತ್ತದೆ. ಇದು ತೊಡೆಗಳ ನಡುವಿನ ಉಜ್ಜುವಿಕೆಯಿಂದ ರಕ್ಷಣೆ ನೀಡುತ್ತದೆ ಮತ್ತು ದೈಹಿಕ ಚಟುವಟಿಕೆಗಳ ಸಮಯದಲ್ಲಿ ಕಿರಿಕಿರಿಯನ್ನು ತಡೆಯುತ್ತದೆ. ಅಲ್ಲದೆ, ಗಸ್ಸೆಟ್ ಒಳ ಉಡುಪಿನ ಒಂದು ಭಾಗವನ್ನು ಬಲಪಡಿಸುತ್ತದೆ, ಇದರಿಂದ ಒಳ ಉಡುಪು ಹೆಚ್ಚು ಕಾಲ ಬಾಳಿಕೆ ಬರುತ್ತದೆ.
ಕೆಲವೊಮ್ಮೆ ಗಸ್ಸೆಟ್ನ ಒಂದು ಬದಿಯನ್ನು ಉದ್ದೇಶಪೂರ್ವಕವಾಗಿ ಹೊಲಿಯದೆ ಬಿಡಲಾಗುತ್ತದೆ. ಅದರಿಂದ ಪಾಕೆಟ್ನಂತೆ ಕಾಣುತ್ತದೆ. ಆದರೆ ಇದರ ಮುಖ್ಯ ಉದ್ದೇಶ ವಸ್ತುಗಳನ್ನು ಇಡುವುದಕ್ಕಿಂತ ಆರೋಗ್ಯ ಮತ್ತು ಆರಾಮಕ್ಕಾಗಿರುತ್ತದೆ.
ಇನ್ನು ಪ್ಯಾಂಟ್ ಮತ್ತು ಜೀನ್ಸ್ ಸೇರಿದಂತೆ ವಿವಿಧ ರೀತಿಯ ಬಟ್ಟೆಗಳಲ್ಲಿ ಗುಸ್ಸೆಟ್ಗಳನ್ನು ಬಳಸಲಾಗುತ್ತಿದೆ. ಶತಮಾನಗಳಿಂದ ಬಟ್ಟೆ ವಿನ್ಯಾಸದಲ್ಲಿ ಗುಸ್ಸೆಟ್ಗಳು ಪ್ರಮುಖ ಅಂಶವಾಗಿದ್ದರೂ, ಅವುಗಳ ಪ್ರಾಯೋಗಿಕ ಉದ್ದೇಶಕ್ಕಾಗಿ ಅವು ಇತ್ತೀಚೆಗೆ ವ್ಯಾಪಕ ಗಮನವನ್ನು ಗಳಿಸಿವೆ. ಅಂತಹ ಪಾಕೆಟ್ಗಳು ಚರ್ಮವನ್ನು ಒಣಗಿಸುವ ಮೂಲಕ ಮತ್ತು ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಬೆಳವಣಿಗೆಯನ್ನು ತಡೆಯುವ ಮೂಲಕ ರಕ್ಷಣೆ ನೀಡುತ್ತವೆ.
ಆದ್ದರಿಂದ, ಒಳ ಉಡುಪು ಖರೀದಿಸುವಾಗ ಗಸ್ಸೆಟ್ ಇರುವ, ವಿಶೇಷವಾಗಿ ಹತ್ತಿಯಿಂದ ಮಾಡಲ್ಪಟ್ಟಿರುವ ಒಳ ಉಡುಪುಗಳನ್ನು ಆಯ್ಕೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು. (ಏಜೆನ್ಸೀಸ್)