

Watches : ನೀವು ಎಷ್ಟೇ ರೆಡಿಯಾದರೂ ಅಂತಿಮವಾಗಿ ನಿಮ್ಮ ಕೈಯಲ್ಲಿ ಗಡಿಯಾರ ಇಲ್ಲದಿದ್ದರೆ ಅಪೂರ್ಣ ಎನಿಸುತ್ತದೆ. ವಾಚ್ ನಿಮ್ಮ ಸ್ಟೈಲ್ಗೆ ಒಂದು ಹೊಸ ಲುಕ್ ನೀಡುತ್ತದೆ. ಹಿಂದೆ ವಾಚ್ಗಳನ್ನು ಕೇವಲ ಸಮಯ ನೋಡಲು ಮಾತ್ರ ಬಳಸುತ್ತಿದ್ದರು. ಆದರೆ, ಇಂದು ಫ್ಯಾಶನ್ ಆಗಿ ಬಿಟ್ಟಿದೆ. ಹೀಗಾಗಿ ಇಂದಿನ ಮೊಬೈಲ್ ಯುಗದಲ್ಲೂ ವಾಚ್ಗಳಿಗೆ ಬಹು ಬೇಡಿಕೆ ಇದೆ. ಅಲ್ಲದೆ, ಹಲವು ರೀತಿಯ ವಾಚ್ಗಳು ಕೂಡ ನಮ್ಮನ್ನು ಸೆಳೆಯುತ್ತಿವೆ. ಅಲ್ಲದೆ, ಅರ್ಧದಷ್ಟು ಆರೋಗ್ಯ ಪರೀಕ್ಷೆಗಳನ್ನು ಮಾಡುವ ವಾಚ್ಗಳು ಕೂಡ ಇವೆ. ನೀವು ಗಮನಿಸಿರಬಹುದು ಹೆಚ್ಚಿನ ಜನರು ತಮ್ಮ ಎಡಗೈಯಲ್ಲಿ ಮಾತ್ರ ವಾಚ್ ಧರಿಸುತ್ತಾರೆ. ಬಹುತೇಕರಿಗೆ ಅದಕ್ಕೆ ಕಾರಣ ಏನೆಂಬುದೇ ಇನ್ನೂ ತಿಳಿದಿಲ್ಲ. ಗೊತ್ತಿರದವರಿಗೆ ನಾವಿಂದು ತಿಳಿಸಿಕೊಡುತ್ತೇವೆ.
ಹಿಂದೆ ಜನರು ಸಮಯವನ್ನು ನೋಡಲು ಗಡಿಯಾರಗಳನ್ನೇ ಅವಲಂಬಿಸುತ್ತಿದ್ದರು. ಆದರೆ, ಈಗ ಕಾಲ ಬದಲಾಗಿದೆ. ಮೊಬೈಲ್‌ಗಳು ಬಂದ ನಂತರ ವಾಚ್ಗಳ ಬಳಕೆ ಕಡಿಮೆಯಾಗಿದೆ. ಇಂದು ಎಲ್ಲ ವಾಹನಗಳಲ್ಲೂ ಗಡಿಯಾರವನ್ನು ವಿನ್ಯಾಸಗೊಳಿಸುತ್ತಿರುವುದರಿಂದ ವಾಚ್ಗಳ ಬಳಕೆ ಕಡಿಮೆಯಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ, ಕೈಗಡಿಯಾರಗಳನ್ನು ಫ್ಯಾಷನ್‌ಗಾಗಿ ಮಾತ್ರ ಬಳಸಲಾಗುತ್ತದೆ. ಹೀಗಾಗಿಯೇ ನಿಮ್ಮ ಕೈಯಲ್ಲಿ ಗಡಿಯಾರವಿದ್ದರೂ, ನಿಮ್ಮ ಮೊಬೈಲ್‌ನಲ್ಲಿ ಸಮಯವನ್ನು ಪರಿಶೀಲಿಸುವುದು ಅಭ್ಯಾಸವಾಗಿದೆ. ಆದಾಗ್ಯೂ, ನೀವು ಅನೇಕ ಜನರನ್ನು ಗಮನಿಸಿದರೆ, ಅವರು ಹೆಚ್ಚಾಗಿ ಎಡಗೈಯಲ್ಲಿ ಮಾತ್ರ ಗಡಿಯಾರವನ್ನು ಧರಿಸುತ್ತಾರೆ. ಏಕೆ ಗೊತ್ತಾ?
ಎಡಗೈಯಲ್ಲಿ ಗಡಿಯಾರಗಳನ್ನು ಧರಿಸಲು ಕೆಲವು ಕಾರಣಗಳಿವೆ. ನಾವು ಹೆಚ್ಚಾಗಿ ನಮ್ಮ ಬಲಗೈಯಿಂದ ಕೆಲಸ ಮಾಡುತ್ತೇವೆ. ಬರೆಯುವುದು, ತಿನ್ನುವುದು ಮತ್ತು ಟೈಪ್ ಮಾಡುವುದು ಸೇರಿದಂತೆ ಅನೇಕ ಕೆಲಸಗಳಿಗೆ, ನಾವು ನಮ್ಮ ಎಡಗೈಗಿಂತ ಬಲಗೈಯನ್ನು ಹೆಚ್ಚು ಬಳಸುತ್ತೇವೆ. ಹೀಗಾಗಿಯೇ ನಾವು ಎಡಗೈ ವಾಚ್ ಅನ್ನು ಧರಿಸುತ್ತೇವೆ. ಬಲಗೈನಲ್ಲೂ ಧರಿಸುವವರಿದ್ದಾರೆ. ಆದರೆ, ತುಂಬಾ ವಿರಳ.
ನಾವು ನಮ್ಮ ಬಲಗೈಯಿಂದ ಏನಾದರೂ ಮಾಡುವಾಗ, ಸಮಯವನ್ನು ನೋಡಲು ನಮ್ಮ ಕೆಲಸವನ್ನು ನಿಲ್ಲಿಸಬೇಕು. ಅದೇ ನಮ್ಮ ಎಡಗೈಯಲ್ಲಿ ಗಡಿಯಾರವನ್ನು ಧರಿಸಿದರೆ, ನಾವು ಮಾಡುವ ಕೆಲವನ್ನು ನಿಲ್ಲಿಸದೆ ಸಮಯವನ್ನು ಸುಲಭವಾಗಿ ಪರಿಶೀಲಿಸಬಹುದು. ಆದ್ದರಿಂದ, ಬಹುತೇಕ ಮಂದಿ ತಮ್ಮ ಎಡಗೈಯಲ್ಲಿ ಗಡಿಯಾರವನ್ನು ಧರಿಸುತ್ತಾರೆ.
ಒಂದು ವೇಳೆ ನಾವು ವಾಚ್ ಅನ್ನು ಬಲಗೈನಲ್ಲಿ ಧರಿಸಿದರೆ, ನಮ್ಮ ಸುತ್ತಮುತ್ತಲಿನ ಜನರು, ಓಹ್... ಆತ ವಾಚ್ ಅನ್ನು ತಪ್ಪಾಗಿ ಧರಿಸಿದ್ದಾನೆ ಎಂದು ಹೇಳುತ್ತಾರೆ. ಆದರೆ, ಎಡಗೈನಲ್ಲೇ ಏಕೆ ಧರಿಸಬೇಕು ಅನ್ನೋದೆ ಅವರಿಗೆ ತಿಳಿದಿರುವುದಿಲ್ಲ. ಬಲಗೈನಲ್ಲಿ ಧರಿಸುವುದು ತಪ್ಪು ಕೂಡ ಅಲ್ಲ. ಹಿಂದಿನಿಂದಲೂ ನಡೆದುಕೊಂಡು ಬಂದಿದೆ ಅಂತ ನಾವು ತಿಳಿಯದೆ ಈ ವಿಧಾನವನ್ನು ಅನುಸರಿಸುತ್ತಿದ್ದೇವೆ. ನೀವು ಯಾವ ಕೈಯಲ್ಲಾದರೂ ಧರಿಸಿ, ತಪ್ಪೇನಿಲ್ಲ. ಹಾಗಾದರೆ ನೀವು ನಿಮ್ಮ ವಾಚ್ ಅನ್ನು ಯಾವ ಕೈಯಲ್ಲಿ ಧರಿಸುತ್ತಿದ್ದೀರಿ ಎಂದು ನಮಗೆ ಕಾಮೆಂಟ್ ಮೂಲಕ ತಿಳಿಸಿ. (ಏಜೆನ್ಸೀಸ್)