ಮಳೆಗಾಲದಲ್ಲಿ ಸೊಪ್ಪಿನ ಆಹಾರ ತಿನ್ನುವಾಗ ಅಗತ್ಯವಾಗಿ ಈ ಮುನ್ನೆಚ್ಚರಿಕೆವಹಿಸಿ...

leafy vegetables
Published on

ಬೆಂಗಳೂರು: ಮಳೆಗಾಲದಲ್ಲಿ ರೋಗಗಳು ಹೆಚ್ಚು. ಆದ್ದರಿಂದ ಬಹಳ ಜಾಗರೂಕರಾಗಿರಿ. ವಾತಾವರಣವು ತಂಪಾಗಿರುವುದರಿಂದ, ಬ್ಯಾಕ್ಟೀರಿಯಾ, ವೈರಸ್ ಮತ್ತು ಸೂಕ್ಷ್ಮಾಣು ಜೀವಿಗಳು ಗಾಳಿಯಲ್ಲಿ ಹೆಚ್ಚು ಬೆಳೆಯುತ್ತವೆ. ಈ ಕಾರಣದಿಂದಾಗಿ, ಋತುವಿನಲ್ಲಿ ತರಕಾರಿಗಳಲ್ಲಿ ಹೆಚ್ಚು ಕೀಟಗಳು ಇರುತ್ತವೆ. ಹೀಗಾಗಿ ಆರೋಗ್ಯಕರವಾದ ಆಹಾರದ ಕುರಿತಾಗಿ ಕಾಳಜಿ ಇರುವುದು ಅಗತ್ಯವಾಗಿದೆ.

ಸೊಪ್ಪು, ತರಕಾರಿಗಳು ಕೀಟಗಳಿಗೆ ಗುರಿಯಾಗುತ್ತವೆ. ಹಾಗಾಗಿ ಈ ಋತುವಿನಲ್ಲಿ ಸೊಪ್ಪುಗಳಿಂದ ದೂರವಿರುವುದು ಉತ್ತಮ. ಪಾಲಕ್, ಕರಿಬೇವಿನ ಸೊಪ್ಪು ಮತ್ತು ಮೆಂತ್ಯ ಸೊಪ್ಪಿನಲ್ಲಿ ಹೆಚ್ಚಾಗಿ ಕೀಟಗಳಿರುತ್ತವೆ. ಹೀಗಾಗಿ ಇವುಗಳನ್ನು ಚೆನ್ನಾಗಿ ನೀರಿನಲ್ಲಿ ತೊಳೆದು ಉಪಯೋಗಿಸುವುದು ಉತ್ತಮವಾಗಿದೆ.

ಮಳೆಗಾಲದಲ್ಲಿ ನೀವು ಸೊಪ್ಪಿನಲ್ಲಿ ಚಿಕ್ಕ-ಚಿಕ್ಕ ಹುಳಗಳು ಕೂಡು ಕಟ್ಟಿರುವುದನ್ನು ಗಮನಿಸಿರಬಹುದು, ಇನ್ನು ಎಲೆಗಳು ಹುಳ ತಿಂದಿರುತ್ತದೆ ಅಲ್ಲದೆ ಕೆಲವೊಂದು ಎಲೆಗಳ ಮೇಲೆ ಬಿಳಿ- ಬಿಳಿ ಕಂಡು ಬರುವುದು, ಈ ರೀತಿ ಕಂಡು ಬರುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಈ ಸೊಪ್ಪಿನ ಆಹಾರ ನಮ್ಮ ಹೊಟ್ಟೆಯನ್ನು ಸೇರಿದರೆ ವಾಂತಿ, ಬೇಧಿ, ಹೊಟ್ಟೆ ನೋವು ಸಂಭವಿಸಬಹುದು. ಆದ್ದರಿಂದ ಮಳೆಗಾಲದಲ್ಲಿ ಸೊಪ್ಪಿನ ಆಹಾರ ಪದಾರ್ಥಗಳನ್ನು ದೂರವಿಡುವುದು ಒಳ್ಳೆಯದು.

ಕೀಟಗಳಿರುವ ಎಲೆಗಳ ತರಕಾರಿಗಳನ್ನು ಸೇವಿಸಿದರೆ, ಜೀರ್ಣಕಾರಿ ಸಮಸ್ಯೆಗಳು ಬರುವ ಸಾಧ್ಯತೆ ಹೆಚ್ಚು. ದದ್ದುಗಳು, ತುರಿಕೆ, ಅಲರ್ಜಿ ಸಮಸ್ಯೆಗಳು ಸಹ ಸಂಭವಿಸುತ್ತವೆ. ಹಾಗಾಗಿ ಈ ಋತುವಿನಲ್ಲಿ ಎಲೆಗಳ ತರಕಾರಿಗಳನ್ನು ಶುಚಿಗೊಳಿಸಿ ಅಥವಾ ಬಳಕೆಯನ್ನೆ ಕಡಿಮೆ ಮಾಡುವುದು ಉತ್ತಮ ಎನ್ನುತ್ತಾರೆ ತಜ್ಞರು

ನೀವು ಹಸಿರು ತರಕಾರಿಗಳನ್ನು ತಿನ್ನಲು ಬಯಸಿದರೆ, ಹಸಿರು ತರಕಾರಿಗಳನ್ನು ಉಪ್ಪಿನೊಂದಿಗೆ ಉಗುರು ಬೆಚ್ಚಗಿನ ನೀರಿನಲ್ಲಿ ಚೆನ್ನಾಗಿ ತೊಳೆಯುವುದು ಉತ್ತಮ. ಇದನ್ನು ಸೇವಿಸುವುದರಿಂದ ಎಲೆಗಳ ತರಕಾರಿಗಳಲ್ಲಿರುವ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ.

ಎಲ್ಲಾ ಬ್ಯಾಕ್ಟೀರಿಯಾಗಳು ನಮ್ಮ ಕಣ್ಣಿಗೆ ಕಾಣಿಸುವುದಿಲ್ಲ.. ಕಾಣದ ಬ್ಯಾಕ್ಟೀರಿಯಾಗಳೂ ಇವೆ. ಹಾಗಾಗಿ ಹಸಿರು ತರಕಾರಿಗಳನ್ನು ಹೀಗೆ ಸ್ವಚ್ಛಗೊಳಿಸಿದರೆ ಅವು ನಾಶವಾಗುತ್ತವೆ. ನಿಮ್ಮ ಆರೋಗ್ಯವೂ ಚೆನ್ನಾಗಿರುತ್ತದೆ. ಈ ಋತುವಿನಲ್ಲಿ ಹೆಚ್ಚು ತರಕಾರಿಗಳನ್ನು ಖರೀದಿಸದಿರುವುದು ಉತ್ತಮ.

ನೀವು ಸೊಪ್ಪು ತಿನ್ನಲೇಬೇಡಿ ಎಂದು ಹೇಳುತ್ತಿಲ್ಲ, ಆದರೆ ಈ ಬಗ್ಗೆ ಜಾಗ್ರತೆವಹಿಸಿ. ನೀವು ಹುಳ ತಿಂದಿರುವ ಅಥವಾ ಎಲೆಗಳಲ್ಲಿ ಹುಳ ಇರುವ, ಬಿಳಿ- ಬಿಳಿ ಇರುವ ಆಹಾರವನ್ನು ಅಡುಗೆಗೆ ಬಳಸಬೇಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net