

ಯಾವುದೇ ರೀತಿಯ ಸೈಡ್ ಎಫೆಕ್ಟ್ಸ್ ಇಲ್ಲದೆಯೇ ಬಿಳಿ ಕೂದಲನ್ನು ಕಪ್ಪಾಗಿಸಲು ನಿಮ್ಮ ಅಡುಗೆ ಮನೆಯಲ್ಲಿರುವ ಕೆಲವು ಪದಾರ್ಥಗಳು ತುಂಬಾ ಪ್ರಯೋಜನಕಾರಿ ಆಗಿವೆ.
ಹಾಗಿದ್ರೆ ಬಿಳಿ ಕೂದಲನ್ನ ಮನೆಯಲ್ಲೇ ಕಪ್ಪು ಮಾಡೋದು ಹೇಗೆ ಅನ್ನೋದನ್ನ ನೋಡೋಣ:
ಬದಲಾದ ವಾತಾವರಣ, ಧೂಳು, ಆಹಾರ ಜತೆಗೆ ದೇಹದಲ್ಲಿ ಪೋಷಕಾಂಶಗಳ ಕೊರತೆಯಿಂದಾಗಿ ಕೂದಲು ಬೆಳ್ಳಗಾಗಬಹುದು.
ನಾನಾ ಬಗೆಯ ಹೇರ್ ಡೈ ಗಳು ಬಿಳಿ ಕೂದಲನ್ನು ಕಪ್ಪಾಗಿಸಲು ಮಾರುಕಟ್ಟೆಯಲ್ಲಿ ಸಿಗುತ್ತಿದ್ದು, ಇವುಗಳನ್ನು ಬಳಸಿದ್ರೆ ಕೆಲವರಲ್ಲಿ ಚರ್ಮ ಮತ್ತು ಕೂದಲಿಗೆ ಸಂಬಂಧಿಸಿದಂತೆ ಕೆಲವು ಅಡ್ಡಪರಿಣಾಮಗಳು ಉಂಟಾಗಬಹುದು.ನಿಮ್ಮ ಮನೆಯಲ್ಲಿಯೇ ಇರುವ ಪದಾರ್ಥಗಳನ್ನು ಬಳಸಿ ನ್ಯಾಚುರಲ್ ಹೇರ್ ಡೈ ತಯಾರಿಸಿ ಬಳಸುವುದರಿಂದ ಕೂದಲು ಕಪ್ಪಾಗುವುದರ ಜೊತೆಗೆ ಸೊಂಪಾಗಿಯೂ ಬೆಳೆಯುತ್ತದೆ.
ಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಆಮ್ಲಾ ಪೌಡರ್, ಟೀ ಪುಡಿ, ಕಾಫಿ ಪುಡಿ, ಕಪ್ಪು ಜೀರಿಗೆಯನ್ನು ಬಳಸಿ ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸಬಹುದು. 2 ಸ್ಪೂನ್ ಕಪ್ಪು ಜೀರಿಗೆಯನ್ನು ತೆಗೆದುಕೊಂಡು ನುಣ್ಣಗೆ ಪುಡಿ ಮಾಡಿ. ನಂತರ ಒಂದು ಕಬ್ಬಿಣದ ಬಾಣಲೆಯಲ್ಲಿ ಒಂದು ಗ್ಲಾಸ್ ನೀರು ಹಾಕಿ ಕಾಯಲು ಬಿಡಿ. ನೀರು ಸಣ್ಣ ಕುದಿ ಬರುತ್ತಿದ್ದಂತೆ 2 ಸ್ಪೂನ್ ಆಮ್ಲಾ ಪುಡಿ, 1 ಸ್ಪೂನ್ ಟೀ ಪುಡಿ, 1 ಸ್ಪೂನ್ ಕಾಫಿ ಪುಡಿ, ಪುಡಿಮಾಡಿಟ್ಟ ಕಪ್ಪು ಜೀರಿಗೆಯನ್ನು ಹಾಕಿ ಸಣ್ಣ ಉರಿಯಲ್ಲಿ ಅದು ಗಟ್ಟಿಯಾಗುವವರೆಗೂ ಕಾಯಿಸಿ.
ಹೀಗೆ ತಯಾರಿಸಿದ ನ್ಯಾಚುರಲ್ ಹೇರ್ ಡೈ ತಣ್ಣಗಾದ ಬಳಿಕ ಕೂದಲಿನ ಬುಡದಿಂದ ತುದಿಯವರೆಗೂ ಲೇಪಿಸಿ. ಒಂದು ಗಂಟೆ ಬಳಿಕ ಸೌಮ್ಯ ಶಾಂಪೂವಿನಿಂದ ಹೇರ್ ವಾಶ್ ಮಾಡಿದರೆ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸಬಹುದು.