ಹುರಿದ ಜೋಳ ಅಥವಾ ಬೇಯಿಸಿದ ಜೋಳ ಇವೆರಡರಲ್ಲಿ ಆರೋಗ್ಯಕ್ಕೆ ಯಾವುದು ಬೆಸ್ಟ್​? ಇಲ್ಲಿದೆ ಮಾಹಿತಿ.. | Corn,

untitled-design-10-6878e8e92a5ae
Published on

Corn: ಸಾಮಾನ್ಯವಾಗಿ ರಸ್ತೆಗಳ ಬದಿಯಲ್ಲಿ ಹುರಿದ ಜೋಳ ಮಾರಾಟ ಮಾಡುವುದನ್ನು ಅಧಿಕ ಗಮನಿಸಿರುತ್ತೀರಾ ಅಲ್ವಾ.. ಹಾಗೇ ಬಸ್​ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣದಲ್ಲಿ ಅಧಿಕ ಜನರು ಹುರಿದ ಜೋಳವನ್ನೇ ಇಷ್ಟಪಡುತ್ತಾರೆ. ಇದು ಈಗಿನ ಪ್ರವೃತ್ತಿ ಅಲ್ಲ, ಪ್ರಾಚೀನ ಕಾಲದಿಂದಲೂ ಹುರಿದ ಜೋಳ ತಿನ್ನುವ ಪರಂಪರೆ ಬಂದಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಬೇಯಿಸಿದ ಜೋಳ ತಿನ್ನುವ ಪ್ರವೃತ್ತಿ ಕೂಡ ನಿಧಾನವಾಗಿ ಹೆಚ್ಚುತ್ತಿದೆ. ಉದಾಹರಣೆಗೆ ಬೇಯಿಸಿದ ಜೋಳವನ್ನು ಸ್ವೀಟ್​​ ಕಾರ್ನರ್​ ಹೆಸರಲ್ಲಿ ಕರೆಯುತ್ತಾರೆ. ಇದನ್ನು ಸಾಮಾನ್ಯವಾಗಿ ಇಷ್ಟ ಪಡುತ್ತಾರೆ. ಇದೀಗ ಪ್ರಶ್ನೆ ಎನೆಂದರೆ ಹುರಿದ ಜೋಳ ಅಥವಾ ಬೇಯಿಸಿದ ಜೋಳ ಯಾವುದು ಬೆಸ್ಟ್​? ಎಂಬ ಪ್ರಶ್ನೆ ಮೂಡಿದೆ. ಎನೆಂದು ತಿಳಿಯೋಣ..

ಆರೋಗ್ಯ ತಜ್ಞರ ಪ್ರಕಾರ, ಜೋಳವು ಪೌಷ್ಠಿಕ ಧಾನ್ಯವಾಗಿದೆ. ಜೋಳ ವಿಟಮಿನ್​ ಬಿ1, ಬಿ5, ಫೈಬರ್​ ಹಾಗೂ ಕಬ್ಬಿಣ, ಸತು ಮತ್ತು ಮೆಗ್ನಿಷಿಯಂನಂತಹ ಪೋಷಾಕಾಂಶಗಳಿಂದ ಸಮೃದ್ಧವಾಗಿದೆ. ಇದು ದೇಹದ ಸ್ವತಂತ್ರ ರಾಡಿಕಲ್​ಗಳಿಂದ ರಕ್ಷಿಸುತ್ತದೆ. ಸಾಮಾನ್ಯವಾಗಿ ಜೋಳ ಹುರಿದು ತಿನ್ನಲಾಗುತ್ತದೆ. ಆದರೆ, ಬೇಯಿಸಿ ತಿನ್ನುವುದು ಕೂಡ ಆರೋಗ್ಯಕ್ಕೆ ಅಧಿಕ ಪ್ರಯೋಜನಕಾರಿ. ಎರಡು ಪೋಷಕಾಂಶಗಳ ಪ್ರಮಾಣದಲ್ಲಿ ಸಲ್ಪ ವ್ಯತ್ಯಾಸವಿದೆ. ಅದನ್ನು ನಿರ್ಲಕ್ಷಿಸಲಾಗುವುದಿಲ್ಲನ ಎಂದು ವೈದ್ಯರು ಹೇಳುತ್ತಾರೆ.

ಹುರಿದ ಜೋಳ ತಿನ್ನುವುದರಿಂದಾಗುವ ಪ್ರಯೋಜನಗಳು

ಸಾಮಾನ್ಯವಾಗಿ ಜೋಳವನ್ನು ಹುರಿದು ತಿನ್ನುವುದು ಸಂಪ್ರದಾಯಕ ಹಾಗೂ ಹಳೆ ಪದ್ಧತಿಯಾಗಿದೆ. ಇದನ್ನು ನೇರವಾಗಿ ನೀರು ಮತ್ತು ಎಣ್ಣೆ ಇಲ್ಲದೆ ನೇರವಾಗಿ ಬೆಂಕಿಯ ಜ್ವಾಲೆಯ ಮೇಲೆ ಹುರಿಯಲಾಗುತ್ತದೆ. ಇದರಿಂದಾಗಿ ಅದರ ಪೋಷಕಾಂಶಗಳು ಹೆಚ್ಚು ನಾಶವಾಗುವುದಿಲ್ಲ. ಜೋಳದಲ್ಲಿರುವ ನೈಸರ್ಗಿಕ ಸಕ್ಕರೆಯನ್ನು ಹುರಿಯುವುದರಿಂದ ಕ್ಯಾರಮೆಲೈಸ್ ಆಗುತ್ತದೆ, ಇದು ಅದರ ರುಚಿಯನ್ನು ಹೆಚ್ಚಿಸುತ್ತದೆ. ಈ ವಿಧಾನವು ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳನ್ನು ಹಾಗೆಯೇ ಇಡುತ್ತದೆ. ತಮ್ಮ ತೂಕವನ್ನು ನಿಯಂತ್ರಿಸಲು ಬಯಸುವವರಿಗೆ ಹುರಿದ ಜೋಳವು ಉತ್ತಮ ತಿಂಡಿಯಾಗಿದೆ.

ಬೇಯಿಸಿದ ಜೋಳ ತಿನ್ನುವುದರಿಂದಾಗುವ ಪ್ರಯೋಜನಗಳು

ಬೇಯಿಸಿದ ಜೋಳವು ಹೊಟ್ಟೆಗೆ ಹಗುರವಾಗಿರುತ್ತದೆ ಮತ್ತು ಸುಲಭವಾಗಿ ಜೀರ್ಣವಾಗುತ್ತದೆ. ಜೀರ್ಣಕ್ರಿಯೆಯ ತೊಂದರೆಗಳು ಅಥವಾ ದುರ್ಬಲ ಹಲ್ಲುಗಳನ್ನು ಹೊಂದಿರುವ ಜನರಿಗೆ, ಬೇಯಿಸಿದ ಜೋಳವು ಉತ್ತಮ ಆಯ್ಕೆಯಾಗಿದೆ. ಇದು ದೇಹಕ್ಕೆ ಸಾಕಷ್ಟು ಪೋಷಕಾಂಶಗಳನ್ನು ಒದಗಿಸುತ್ತದೆ. ಬೇಯಿಸಿದ ಜೋಳ ಮಕ್ಕಳಿಗೆ ಹಾಗೂ ವಿಶೇಷವಾಗಿ ವೃದ್ಧರಿಗೆ ಪ್ರಯೋಜಕಾರಿ ಎಂದು ಹೇಳಬಹುದು.

ಯಾವುದು ಬೆಸ್ಟ್​..?

ರುಚಿ, ಪೌಷ್ಟಿಕಾಂಶ ಮತ್ತು ಆರೋಗ್ಯಕರ ತಿಂಡಿಯ ಬಗ್ಗೆ ಮಾತನಾಡಿದರೆ, ಹುರಿದ ಜೋಳವನ್ನು ಉತ್ತಮವೆಂದು ಪರಿಗಣಿಸಬಹುದು. ಇದಕ್ಕೆ ಎಣ್ಣೆ, ಉಪ್ಪು ಅಥವಾ ಮಸಾಲೆಗಳ ಅಗತ್ಯವಿಲ್ಲ ಮತ್ತು ಇದು ನೈಸರ್ಗಿಕ ರೂಪದಲ್ಲಿ ಹೆಚ್ಚಿನ ಪೋಷಣೆಯನ್ನು ಒದಗಿಸುತ್ತದೆ. ಮತ್ತೊಂದೆಡೆ, ಬೇಯಿಸಿದ ಜೋಳವು ಜೀರ್ಣಿಸಿಕೊಳ್ಳಲು ಸುಲಭ ಮತ್ತು ವೃದ್ಧರು ಮತ್ತು ಮಕ್ಕಳಿಗೆ ಒಳ್ಳೆಯದು. ಜೋಳವನ್ನು ಹುರಿದಿರಲಿ ಅಥವಾ ಬೇಯಿಸಿದಿರಲಿ, ಎರಡೂ ಆರೋಗ್ಯಕ್ಕೆ ಪ್ರಯೋಜನಕಾರಿ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net