ಸೇಬು ಅಥವಾ ಸೇಬಿನ ಜ್ಯೂಸ್​, ಯಾವುದು ಹೆಚ್ಚಾಗಿ ಸೇವಿಸುತ್ತಿರಾ..? ಎರಡರಲ್ಲಿ ಯಾವುದು ಆರೋಗ್ಯಕರ ತಿಳಿಯಿರಿ.. | Apples

dk - 2025-02-13T155210.428
Published on

Apples or Apple juice: ಪ್ರತಿದಿನ ಒಂದು ಸೇಬು ತಿನ್ನುವುದರಿಂದ ವೈದ್ಯರಿಂದ ದೂರ ಇರಬಹುದು ಎಂದು ತಜ್ಞರು ಸಲಹೆ ಕೊಡುತ್ತಾರೆ. ಅಲ್ಲವೇ, ಅದರಂತೆ ಸೇಬು ತಿನ್ನುವುದರಿಂದ ಮತ್ತು ಸೇಬಿನ ರಸ(ಜ್ಯೂಸ್​) ಕುಡಿಯುವುದರಿಂದ ಯಾವುದು ಉತ್ತಮ ಎಂದ ಎಂದಾದರೂ ಯೋಚನೆ ಮಾಡಿದ್ದರೀರಾ? ತಿಳಿಯೋಣ ಬನ್ನಿ..

ಇಡೀ ಹಣ್ಣನ್ನು ನೇರವಾಗಿ ತಿನ್ನುವುದರಿಂದ ಜ್ಯೂಸ್​​ಗಿಂತ ಅಧಿಕ ಪರಿಣಾಮಕಾರಿ ಎಂದು ತಜ್ಞರ ಅಭಿಪ್ರಾಯವಾಗಿದೆ. ಹೌದು, ಸೇಬಿನ ಹಣ್ಣಿ ಖನಿಜಗಳು, ಪೈಬರ್​ ಮತ್ತು ಸಂಪೂರ್ಣ ಜೀವಸತ್ವಗಳು ಇರುತ್ತದೆ. ಇದನ್ನು ತಿನ್ನುವುದರಿಂದ ಅಧಿಕ ಪೊಷಕಾಂಶ ದೇಹಕ್ಕೆ ದೊರೆಯುತ್ತದೆ. ಅಲ್ಲದೆ, ಆರೋಗ್ಯ ವೃದ್ಧಿಸುವಲ್ಲಿ ಸೇಬು ನೇರ ಪರಿಣಾಮ ಬೀರುತ್ತದೆ.

ಸೇಬು ಹಣ್ಣಿನ ಜ್ಯೂಸ್ ಸೇವನೆ ಮಾಡುವುದರಿಂದ ಹಣ್ಣಿನಷ್ಟು ವಿಟಮಿನ್​ಗಳು(ಕ್ಯಾಲೋರಿ)ದೇಹಕ್ಕೆ ಸಿಗುವುದಿಲ್ಲ. ಆದಕ್ಕೆ ಕಾರಣವೂ ಇದೆ. ​ನಾಲ್ಕೈದು ಹಣ್ಣುಗಳಿಂದ ಜ್ಯೂಸ್​ ತಯಾರಿಸುವಾಗ ಕೇಂದ್ರಿಕೃತವಾಗುತ್ತದೆ. ಅಂದರೆ, ಎಲ್ಲಾ ಮಿಕ್ಸ್​ ಆಗುತ್ತದೆ. ಇದರಿಂದಾಗಿ, ಸಕ್ಕರೆ ಮತ್ತು ಕ್ಯಾಲೋರಿ ಅಂಶವನ್ನು ಗಮನರ್ಹವಾಗಿ ಹೆಚ್ಚಿಸುತ್ತದೆ. ಇದರಿಂದ ಆರೋಗ್ಯಕ್ಕೆ ಹಾನಿಕಾರಕ. ಹೆಚ್ಚುವರಿಯಾಗಿ, ಸೇಬುಗಳು ಕರಗುವ ನಾರಿನಂಶವನ್ನು ಹೊಂದಿರುತ್ತವೆ, ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಕರುಳಿನಲ್ಲಿ ಪ್ರಯೋಜನಕಾರಿ ಬ್ಯಾಕ್ಟೀರಿಯಾವನ್ನು ಉತ್ತೇಜಿಸುತ್ತದೆ. ರಸ ತೆಗೆಯುವ ಸಮಯದಲ್ಲಿ ಈ ನಾರು ಕಳೆದುಹೋಗುತ್ತದೆ.

ಪ್ರತಿದಿನ ಕೆಂಪು ಅಥವಾ ಹಸಿರು ಸೇಬನ್ನು ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಬಲಗೊಳ್ಳುತ್ತದೆ ಮತ್ತು ರೋಗಗಳ ಅಪಾಯ ಕಡಿಮೆಯಾಗುತ್ತದೆ. ಸೇಬಿನ ಸಿಪ್ಪೆಯಲ್ಲಿರುವ ಪ್ರೋಟಿನ್​ ಮತ್ತು ಇತರ ಜೀರ್ಣಕಾರಿ ಕಿಣ್ವಗಳು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತವೆ.ಅಲ್ಲದೆ, ಮಲಬದ್ಧತೆ ಮತ್ತು ಅನಿಲದಂತಹ ಸಮಸ್ಯೆಗಳನ್ನು ತಡೆಯುತ್ತವೆ. ಆದಾಗ್ಯೂ, ಸೇಬಿನ ರಸವನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆಯಲ್ಲಿ ತ್ವರಿತ ಏರಿಕೆ ಉಂಟಾಗುತ್ತದೆ, ಇದು ಯಕೃತ್ತಿನ ಮೇಲೆ ಒತ್ತಡವನ್ನು ಬೀರುತ್ತದೆ. ಇಡೀ ಹಣ್ಣನ್ನು ತಿನ್ನುವುದರಿಂದ ಈ ಸಮಸ್ಯೆ ಉಂಟಾಗುವುದಿಲ್ಲ ಎಂದು ವೈದ್ಯರ ಅಭಿಪ್ರಾಯವಾಗಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net