ಮಳೆಗಾಲದಲ್ಲಿ ಮೊಸರು ಸೇವಿಸಿದರೆ ಏನಾಗುತ್ತದೆ?

curd
Published on


ಬೆಂಗಳೂರು: ಪ್ರೋಬಯಾಟಿಕ್‌ಗಳಿಂದ ಕೂಡಿರುವ ಮೊಸರು ಭಾರತೀಯ ಆಹಾರ ಪದ್ಧತಿಯ ಒಂದು ಭಾಗವಾಗಿದೆ. ಇದನ್ನು ಸೇವಿಸಲು ಪ್ರತಿಯೊಬ್ಬರು ಇಷ್ಟಪಡುತ್ತಾರೆ, ತುಂಬಾ ರುಚಿಕರವಾಗಿರುವ ಮೊಸರನ್ನು ಮಳೆಗಾಲದಲ್ಲಿ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಹೇಳುತ್ತಾರೆ ತಜ್ಱರು. ಆಯುರ್ವೇದದ ಪ್ರಕಾರ, ಮಳೆಗಾಲದಲ್ಲಿ ಮೊಸರು ಸೇವಿಸುವುದರಿಂದ ಪಿತ್ತ, ಕಫ ಮತ್ತು ವಾತ ದೋಷಗಳ ಮೇಲೆ ಏಕಕಾಲದಲ್ಲಿ ಪರಿಣಾಮ ಬೀರುತ್ತದೆ. ವಾತ ಮತ್ತು ಪಿತ್ತ ದೋಷಗಳು ವಿಶೇಷವಾಗಿ ಈ ಋತುವಿನಲ್ಲಿ ಉಲ್ಬಣಗೊಳ್ಳುತ್ತವೆ. ಇದು ದೇಹಕ್ಕೆ ಹಾನಿ ಮಾಡುತ್ತದೆ. ಅನೇಕ ಕಾಲೋಚಿತ ರೋಗಗಳಿಗೆ ಕಾರಣವಾಗುತ್ತದೆ. ಹಾಗಾದರೆ ಮಳೆಗಾಲದಲ್ಲಿ ಮೊಸರು ಸೇವಿಸಿದರೆ ಏನೆಲ್ಲಾ ಸಮಸ್ಯೆಗಳಾಗುತ್ತವೆ ನೋಡೋಣ ಬನ್ನಿ...

ಜೀರ್ಣಕಾರಿ ಸಮಸ್ಯೆ 
ಆಯುರ್ವೇದದ ಪ್ರಕಾರ ಮಳೆಗಾದಲ್ಲಿ ಮೊಸರು ಸೇವಿಸುವುದು ಗ್ಯಾಸ್ ಮತ್ತು ಅಜೀರ್ಣದಂತಹ ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಏನನ್ನೂ ಸೇರಿಸದೆ ಮೊಸರು ಸೇವಿಸುವುದು ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ.

ಉಸಿರಾಟದ ತೊಂದರೆ
ಮಳೆಗಾಲದಲ್ಲಿ ಪ್ರತಿನಿತ್ಯ ಮೊಸರು ಸೇವಿಸುವುದರಿಂದ ದೇಹದಲ್ಲಿ ಲೋಳೆಯು ಬೆಳೆಯಲು ಸಹಾಯ ಮಾಡುತ್ತದೆ. ಇದು ಶೀತ, ಕೆಮ್ಮು ಮತ್ತು ಉಸಿರಾಟದ ತೊಂದರೆಗಳಿಗೆ ಕಾರಣವಾಗುತ್ತದೆ. ಪರಿಸರದಲ್ಲಿನ ತೇವಾಂಶವು ಅಲರ್ಜಿಯ ಅಪಾಯ ಹೆಚ್ಚಿಸುತ್ತದೆ.

ರೋಗನಿರೋಧಕ ಶಕ್ತಿ ಕುಂಠಿತ
ಆಯುರ್ವೇದದ ಪ್ರಕಾರ, ಮಳೆಗಾಲದಲ್ಲಿ ಮೊಸರಿನಂತಹ ಆಹಾರವನ್ನು ಸೇವಿಸುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಶೀತ ಆಹಾರಗಳ ಅತಿಯಾದ ಸೇವನೆಯು ಲೋಳೆಯ ರಚನೆಗೆ ಕಾರಣವಾಗುತ್ತದೆ. ಕರುಳಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ಯಾವಾಗ ಸೇವಿಸಬೇಕು?
ಊಟ ಮುಗಿಸದ ನಂತರ ಕೆಲವರಿಗೆ ಮೊಸರನ್ನ ಸೇವಿಸದಿದ್ದರೆ ತೃಪ್ತಿ ಇರುವುದಿಲ್ಲ. ಒಂದು ವೇಳೆ ಮೊಸರು ಸೇವಿಸಲೇಬೇಕು ಅನಿಸಿದರೆ ಒಂದು ಚಿಟಿಕೆ ಹುರಿದ ಜೀರಿಗೆ ಪುಡಿ, ಕರಿಮೆಣಸು, ಕಪ್ಪು ಉಪ್ಪು ಅಥವಾ ಜೇನುತುಪ್ಪ ಒಳ್ಳೆಯದು. ಇದು ಶಕ್ತಿಯನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಉತ್ತಮ ಜೀರ್ಣಕ್ರಿಯೆ ಮತ್ತು ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.

ಮೊಸರಿನ ಪ್ರಯೋಜನಗಳು
ತೂಕ ಇಳಿಸಲು ಮೊಸರು ಒಳ್ಳೆಯದು. ಕರುಳನ್ನು ಆರೋಗ್ಯಕರವಾಗಿಡುವ ಉತ್ತಮ ಬ್ಯಾಕ್ಟೀರಿಯಾವನ್ನು ಉತ್ತೇಜಿಸುತ್ತದೆ. ಇದರಲ್ಲಿರುವ ಯೀಸ್ಟ್ ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ ಮತ್ತು ಸೋಂಕಿನ ಅಪಾಯವನ್ನು ಕಡಿಮೆ ಮಾಡುತ್ತದೆ. ಮೊಸರು ಮಲಬದ್ಧತೆ, ಎದೆಯುರಿ ಮತ್ತು ಇತರ ಅನೇಕ ಜೀರ್ಣಕಾರಿ ಸಮಸ್ಯೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಆದರೆ ಅತಿಯಾಗಿ ತಿಂದರೆ ಅಡ್ಡ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.

ಗಮನಿಸಿ: ವಿವಿಧ ಅಧ್ಯಯನಗಳು ಮತ್ತು ಸಂಶೋಧನೆಗಳಿಂದ ಸಂಗ್ರಹಿಸಿದ ಮಾಹಿತಿಯನ್ನು ಎಂದಿನಂತೆ ಇಲ್ಲಿ ಒದಗಿಸಲಾಗಿದೆ. ವೈದ್ಯರು ಅಥವಾ ಆಹಾರ ತಜ್ಞರನ್ನು ಸಂಪರ್ಕಿಸಿದ ನಂತರವೇ ಈ ಆಹಾರವನ್ನು ನಿಮ್ಮ ಆಹಾರದಲ್ಲಿ ಸೇರಿಸಲು ಮರೆಯದಿರಿ. ಈ ಮಾಹಿತಿಯು ನಿಮ್ಮ ಮಾಹಿತಿಗಾಗಿ ಮಾತ್ರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net