

Parkinson : ಪಾರ್ಕಿನ್ಸನ್ ಕಾಯಿಲೆಯು ನರಗಳ ದೌರ್ಬಲ್ಯದಿಂದ, ವಿಶೇಷವಾಗಿ ಡೋಪಮೈನ್ ಕೊರತೆಯಿಂದ ಮೆದುಳಿನಲ್ಲಿರುವ ನರಗಳ ಕ್ಷೀಣತೆಯಿಂದಾಗಿ ಉಂಟಾಗುವ ಸ್ಥಿತಿಯೇ ಪಾರ್ಕಿನ್ಸ್ ಕಾಯಿಲೆ.
ಅದು ವಯಸ್ಸಾದ ವ್ಯಕ್ತಿಗಳಲ್ಲಿ ನಡುಕ, ಕೈಕುಲುಕುವಿಕೆ ಲಕ್ಷಣದ ಮೂಲಕ ಕಾಣಿಸಿಕೊಳ್ಳುತ್ತದೆ. ಡೋಪಮೈನ್ ಒಂದು ರೀತಿಯ ರಾಸಾಯಿನಿಕವಾಗಿದ್ದು, ಇದು ದೈಹಿಕ ಚಟುವಟಿಕೆಗಳು ಚಲನ-ವಲನ, ಮಾನಸಿಕ ಮತ್ತು ಅರಿವಿನ ಕಾರ್ಯವನ್ನು ನಿಯಂತ್ರಿಸುತ್ತದೆ. ಪಾರ್ಕಿನ್ಸನ್ ಕಾಯಿಲೆಯು ಸಾಮಾನ್ಯವಾಗಿ 60-70 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನ ವ್ಯಕ್ತಿಗಳಲ್ಲಿ ಕಂಡುಬರುತ್ತದೆ. ಕೆಲವೊಮ್ಮೆ ಇದು 20 ಮತ್ತು 40 ವರ್ಷದ ವಯಸ್ಕರಲ್ಲಿಯೂ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.
ವಾಸನೆಯ ಗ್ರಹಿಕೆ ಕಡಿಮೆಯಾಗುವುದು
ಸಾಮಾನ್ಯವಾಗಿ ಈ ಕಾಯಿಲೆಯ ಮೊದಲ ಹಂತವೆಂದರೆ ವಾಸನೆಯ ಗ್ರಹಿಕೆ ಕಡಿಮೆಯಾಗುವುದು. ನಿಮ್ಮ ನೆಚ್ಚಿನ ತಿಂಡಿ ಮುಂದೆ ಇದ್ದರೂ ಅದರ ಪರಿಮಳವನ್ನು ನಿಮ್ಮ ಮೂಗು ಗ್ರಹಿಸಲಿಲ್ಲವೆಂದರೆ ಅದು ಪಾರ್ಕಿನ್ಸನ್ ಕಾಯಿಲೆಯ ಮೊದಲ ಹಂತ ಎಂದು ಊಹಿಸಬಹುದು.
ಚಡಪಡಿಕೆ ಮತ್ತು ನಿದ್ರಾ ಹೀನತೆ
ಕನಸು ಕಾಣುತ್ತಿರುವಾಗ, ಕೈಕಾಲುಗಳ ಹಠಾತ್ ಚಲನೆ ಅಥವಾ ಆಗಾಗ್ಗೆ ಎಚ್ಚರಗೊಳ್ಳುವುದು ಮೆದುಳಿನ ಚಟುವಟಿಕೆಯಲ್ಲಿನ ಆರಂಭಿಕ ಬದಲಾವಣೆಗಳಿಗೆ ಸಂಬಂಧಿಸಿರಬಹುದು, ಇದು ಕೆಲವೊಮ್ಮೆ ಪಾರ್ಕಿನ್ಸನ್ ಕಾಯಿಲೆಯ ರೋಗನಿರ್ಣಯವನ್ನು ಪಡೆಯುವ ವರ್ಷಗಳ ಮೊದಲೇ ಎದುರಾಗುತ್ತದೆ.
ನಿರಂತರ ಮಲಬದ್ಧತೆ
ಮಲಬದ್ಧತೆ ಅಥವಾ ಕರುಳಿನಲ್ಲಿನ ಇತರ ಸಮಸ್ಯೆಗಳಂತಹ ಲಕ್ಷಣಗಳು ಮುಂದುವರಿದರೆ, ವೈದ್ಯರೊಂದಿಗೆ ಚರ್ಚಿಸುವುದು ಯೋಗ್ಯವಾಗಿರುತ್ತದೆ.
ಮುಖದ ಲಕ್ಷಣದಲ್ಲಿ ಬದಲಾವಣೆ: ನೀವು ಗಂಭೀರವಾಗಿಲ್ಲದಿದ್ದರೂ ಸಹ ಇತರರು ನೀವು ಗಂಭೀರವಾಗಿ ಅಥವಾ ದಣಿದಂತೆ ಕಾಣುತ್ತೀರಿ ಎಂದು ಹೇಳುವ ರೀತಿಯಲ್ಲಿ ನಿಮ್ಮ ಮುಖದಲ್ಲಿ ಬದಲಾವಣೆಯಾಗಬಹುದು.
ಸಣ್ಣ ಅಥವಾ ಮೃದುವಾದ ಧ್ವನಿ: ಕಾಲಾನಂತರದಲ್ಲಿ ನಿಮ್ಮ ಧ್ವನಿಯೂ ಮೃದುವಾಗಬಹುದು. ಆದರೆ ನಿಮ್ಮನ್ನು ನಿರಂತರವಾಗಿ ವಿಷಯಗಳನ್ನು ಹೇಳಿ ಎಂದು ಕೇಳಿದರೆ ಅದರಿಂದ ನಿಮಗೆ ಆಯಾಸವಾಗಬಹುದು.
ಅಸಾಮಾನ್ಯ ಆತಂಕ: ಮನಸ್ಥಿತಿಯಲ್ಲಿನ ಏರಿಳಿತಗಳು, ವಿಶೇಷವಾಗಿ ಖಿನ್ನತೆ , ಆತಂಕ ಆರಂಭಿಕ ಹಂತಗಳಲ್ಲಿಯೂ ಸಂಭವಿಸಬಹುದು.
ಈ ಕಾಯಿಲೆಯನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಾಗದಿದ್ದರೂ ಸರಿಯಾದ ಚಿಕಿತ್ಸೆಯ ಮೂಲಕ ಇದನ್ನು ನಿರ್ವಹಿಸಬಹುದಾಗಿದೆ.
ಔಷಧಿರಹಿತ ನಿರ್ವಹಣೆ
ಆರಂಭಿಕ ಹಂತದಲ್ಲಿ ನಿಯಮಿತ ದೈಹಿಕ ವ್ಯಾಯಾಮ, ಧ್ಯಾನ, ಯೋಗ ಬಹಳ ಪ್ರಯೋಜನಕಾರಿ. ಈ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿದರೆ ಔಷಧಿಯಿಂದ ಹೊರಬರಬಹುದು.
ಔಷಧೀಯ ನಿರ್ವಹಣೆ
ವೈದ್ಯಕೀಯ ಆರೈಕೆ ಲೆವೊಡೋಪಾ, ಕಾರ್ಬಿಡೋಪಾ ಮತ್ತು ಡೋಪಮಿನರ್ಜಿಕ್ ಔಷಧೀಯ ಚಿಕಿತ್ಸೆಗಳನ್ನು ಒಳಗೊಂಡಿದೆ. ಇದು ನಡುಕ, ನಡಿಗೆ ಮತ್ತು ನಿಧಾನಗತಿಯ ಚಲನೆಯನ್ನು ಸುಧಾರಿಸುತ್ತದೆ.(ಏಜೆನ್ಸೀಸ್)
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.