ನಿತ್ಯ ಹತ್ತೇ ಹತ್ತು ನಿಮಿಷ ಧ್ಯಾನ ಮಾಡಿದರೆ ಎಷ್ಟೆಲ್ಲ ಲಾಭ ನಿಮ್ಮದಾಗುತ್ತದೆ ಗೊತ್ತಾ?..Meditation Benefits

Meditation Benefits
Meditation Benefits
Published on
Meditation Benefits: ಹಲವರು ದೇಹದ ಬಗ್ಗೆ ಹೆಚ್ಚು ಗಮನ ಹರಿಸಿ, ಜಿಮ್ ಹೋಗುವುದು, ವಾಕ್​ ಮಾಡುವುದರ ಮೂಲಕ ದೇಹವನ್ನು ದಂಡಿಸುತ್ತಾರೆ. ಆದರೆ, ನಿಜವಾಗಿಯೂ ಮನಸ್ಸಿನ ಆರೋಗ್ಯ ಕಾಪಾಡಿಕೊಳ್ಳುವುದು ಅಷ್ಟೇ ಮುಖ್ಯ. ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳಲು, ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಮಾನಸಿಕವಾಗಿ ನೆಮ್ಮದಿಯಾಗಿರಲು ಹತ್ತು ನಿಮಿಷ ಧ್ಯಾನ ಮಾಡುವುದನ್ನು ರೂಢಿಸಿಕೊಳ್ಳುವುದು ಒಳ್ಳೆಯದು.
ಹೌದು, ಮಾನಸಿಕವಾಗಿ ನೆಮ್ಮದಿಯನ್ನು ಕಾಣಲು ನಿತ್ಯವೂ ಧ್ಯಾನಿಸುವುದು ಉತ್ತಮವಾದ ವಾಡಿಕೆ ಎನ್ನುತ್ತಾರೆ ವೈದ್ಯರು. ಪ್ರತಿನಿತ್ಯ 10 ನಿಮಿಷ ಧ್ಯಾನ ಮಾಡಿದರೆ ಏನೆಲ್ಲ ಲಾಭವು ಸಿಗುತ್ತದೆ ಎನ್ನುವುದನ್ನು ಇಂದು ತಿಳಿದುಕೊಳ್ಳೋಣ.

ಕೆಲಸದ ಗಮನ ಹರಿಸಲು ಸಹಾಯ

10 ನಿಮಿಷ ಧ್ಯಾನ ಮಾಡುವುದರಿಂದ ದೇಹದಲ್ಲಿ ಉತ್ಪತ್ತಿಯಾಗುವ ಹಾರ್ಮೋನ್​ ಕಾರ್ಟಿಸೋಲ್​ ಮಟ್ಟ ಕಡಿಮೆಯಾಗುತ್ತದೆ. ಆತಂಕವನ್ನು, ಭಾವನಾತ್ಮಕವಾಗಿ ಸಮತೋಲನವನ್ನು ಕಾಪಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ. ಜೊತೆಗೆ ಕೆಲಸದ ಮೇಲೆ ಗಮನಹರಿಸಲು ಸಹಕಾರಿ.

ನಿರ್ಧಾರ ತೆಗೆದುಕೊಳ್ಳಲು ಸಹಕಾರಿ

ನಿತ್ಯವೂ ಹಲವು ಗೊಂದಲಗಳಿಂದ, ಸಮಸ್ಯೆಗಳಿಂದ, ಹಣಕಾಸು ವಿಚಾರ, ಮನೆಯ ಗಲಾಟೆ ಇದೆಲ್ಲವೂ ಒಟ್ಟಾಗಿ ಕೆಲಸದ ಮೇಲೆ ಗಮನಹರಿಸಲು ಸಾಧ್ಯವಾಗೋದಿಲ್ಲ. ಇಂತಹ ಸಮಯದಲ್ಲಿ 10 ನಿಮಿಷ ನಿತ್ಯ ಧ್ಯಾನ ಮಾಡಿದರೆ ನಿಮ್ಮ ಗಮನ ಎತ್ತವೂ ಸಾಗದಂತೆ ಕಾಪಾಡುತ್ತದೆ. ನಿರ್ಧಾರವನ್ನು ತ್ವರಿತ ಹಾಗೂ ಸರಿಯಾಗಿ ತೆಗೆದುಕೊಳ್ಳುವಂತೆ ಸಹಾಯ ಮಾಡುತ್ತದೆ. ಮಾನಸಿಕವಾಗಿ ನಿಮ್ಮನ್ನು ಬಲಶಾಲಿಯನ್ನಾಗಿ ಮಾಡುತ್ತದೆ.

ಒತ್ತಡ ನಿವಾರಣೆಗೆ ಮದ್ದು

ಬ್ಯುಸಿ ಶೆಡ್ಯೂಲ್​ ಬದುಕಿನಲ್ಲಿ ಕೆಲಸ, ಊಟ, ಮನೆ ಖರ್ಚು, ಮಕ್ಕಳ ಸ್ಕೂಲ್​ ಫೀಜ್, ಮುಂದಿನ ಭವಿಷ್ಯ ಹೀಗೆ ನಾನಾ ಯೋಚನೆಗಳು ತಲೆಯಲ್ಲಿ ತುಂಬಿಕೊಂಡಿರುತ್ತದೆ. ಇಂತಹ ಒತ್ತಡ ತೆಗೆದು ಹಾಕಲು ಧ್ಯಾನ ರಾಮಬಾಣ. ನಿಯಮಿತವಾಗಿ ಧ್ಯಾನ ಮಾಡುವುದು ನಿಮ್ಮ ನಿತ್ಯದ ಕಿರಿಕಿರಿಯನ್ನು ದೂರ ಮಾಡುತ್ತದೆ. ಶಾಂತವಾಗಿರಲು ಸಹಾಯ ಮಾಡುತ್ತದೆ. ಕೋಪವನ್ನು ಕಡಿಮೆ ಮಾಡುತ್ತದೆ.

ಶಕ್ತಿ ಕುಂದುವುದು ಕಡಿಮೆಯಾಗುತ್ತದೆ.

ಮಾನಸಿಕ ಒತ್ತಡ ಹಾಗೂ ಹಲವಾರು ಯೋಚನೆಗಳೇ ಮೆದುಳಲ್ಲಿ ತುಂಬಿಕೊಂಡು ಓಡಾಡುತ್ತಿದ್ದರೆ, ದೇಹದ ಶಕ್ತಿಯನ್ನು ಈ ಬಾಧೆಗಳು ಕುಗ್ಗಿಸುತ್ತದೆ. ಆದರೆ, ಒಂದತ್ತು ನಿಮಿಷ ಧ್ಯಾನಿಸಿದರೆ ಇಂತಹ ಸಮಸ್ಯೆಗಳಿಗೆ ಗುಡ್​ಬೈ ಹೇಳಬಹುದು. ನಿಮ್ಮಲ್ಲಿ ನಿಮ್ಮನ್ನು ನೀವು ಕಂಡುಕೊಳ್ಳಬಹುದು. ಸಕರಾತ್ಮಕ ಚಿಂತನೆಗಳನ್ನು ಮಾತ್ರ ನಿಮ್ಮ ಮನಸ್ಸಿಗೆ ತೆಗೆದುಕೊಳ್ಳಬಹುದು. ಹತ್ತು ನಿಮಿಷ ಧ್ಯಾನ ಮಾಡುವವರು ಅನಾರೋಗ್ಯಕ್ಕೆ ತುತ್ತಾಗುವುದು ಕಡಿಮೆ. ರಕ್ತದೊತ್ತಡ ನಿಯಂತ್ರಣದಲ್ಲಿಟ್ಟು ಹೃದಯದಲ್ಲಿ ರಕ್ತಪರಿಚಲನೆಗೆ ಸಹಾಯ ಮಾಡುತ್ತದೆ.(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net