ಆದಾಗ್ಯೂ, ದೀರ್ಘಕಾಲದವರೆಗೆ ಹೆಚ್ಚು ಮದ್ಯಪಾನ ಮಾಡುತ್ತಿರುವ ಜನರು ಇದ್ದಕ್ಕಿದ್ದಂತೆ ಅದನ್ನು ಸಂಪೂರ್ಣವಾಗಿ ನಿಲ್ಲಿಸಿದಾಗ, ದೇಹದಲ್ಲಿ ನಡುಕ, ಅತಿಯಾದ ಬೆವರುವಿಕೆ, ತೀವ್ರ ಆತಂಕ ಹಾಗೂ ನಿದ್ರಾಹೀನತೆಯಂತಹ 'ಆಲ್ಕೋಹಾಲ್ ವಿತ್‌ಡ್ರಾಲ್' ಲಕ್ಷಣಗಳು ಕಾಣಿಸಿಕೊಳ್ಳಬಹುದು. ಆದ್ದರಿಂದ, ತೀವ್ರ ಮದ್ಯಪಾನದ ವ್ಯಸನಕ್ಕೆ ಒಳಗಾಗಿರುವ ವ್ಯಕ್ತಿಗಳು ವೈದ್ಯರ ಕಟ್ಟುನಿಟ್ಟಿನ ಸಲಹೆಗಳ ಮೇರೆಗೆ ಮದ್ಯಪಾನವನ್ನು ಸಂಪೂರ್ಣವಾಗಿ ನಿಲ್ಲಿಸಲು ಪ್ರಯತ್ನಿಸಬೇಕು. ಆದರೆ, 30 ದಿನಗಳ ಈ ವಿರಾಮವು ದೇಹ ಮತ್ತು ಮನಸ್ಸನ್ನು ಮರುಚೇತನಗೊಳಿಸಲು ಸಹಾಯ ಮಾಡುತ್ತದೆ (ಏಜೆನ್ಸೀಸ್).